ಹುಟ್ಟುಹಬ್ಬಕ್ಕೆ ಕೇಕ್, ಹಾರ,ತುರಾಯಿ ಶಾಲು ಬೇಡ- ಪುಸ್ತಕ ಕೊಡಿ ಸಸಿ ನಡಿ- ಶಿವರಾಜ್ ತಂಗಡಗಿ

Get real time updates directly on you device, subscribe now.

ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ,ತುರಾಯಿ ಶಾಲು ಬೇಡ- ಪುಸ್ತಕ ಕೊಡಿ ಸಸಿ ನಡಿ ಎಂದು ಕರೆ ನೀಡುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನಾಳೆ೧೦ರಂದು ಅವರ‌ ಜನ್ಮದಿನವಿದ್ದು ಅದಕ್ಕಾಗಿ ಅವರು ಮಾಡಿಕೊಂಡಿರುವ ಮನವಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರೀತಿಯ ಒಡನಾಡಿಗಳೇ,

ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ನಾನು ಕ್ಷೇತ್ರದ ಶಾಸಕನಾಗಿದ್ದು, ಜೊತೆಗೆ ಪಕ್ಷದ ಕಾರ್ಯಕರ್ತರ ಪರಿಶ್ರಮ ಹಾಗೂ ಸಚಿವನಾಗಿದ್ದೇನೆ. ನಾಯಕರ ವಿಶ್ವಾಸದಿಂದ

ಇದಕ್ಕಿಂತ ದೊಡ್ಡ ಪ್ರೀತಿ ಇನ್ನೊಂದಿಲ್ಲ. ಅಲ್ಲದೇ ಇದೇ ಜೂ. 10ರಂದು ನನ್ನ ಜನ್ಮದಿನವನ್ನು ಮನೆ ಅಂಗಳದಲ್ಲಿ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ. ನನ್ನ ಜನ್ಮದಿನದ ಪ್ರಯುಕ್ತ ಶುಭಕೋರಲು ಯಾವುದೇ ಕಾರಣಕ್ಕೂ ಕೇಕ್, ಹೂವಿನಹಾರ, ತುರಾಯಿ, ಶಾಲು, ಹೂವಿನ ಬೊಕ್ಕೆ ತರಬಾರದು ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅವುಗಳ ಬದಲು ಸಾಮಾಜಿಕ ಚಿಂತನೆಗಳನ್ನು ಸಾರುವ ಪುಸ್ತಕಗಳನ್ನು ತಂದುಕೊಡಿ. ಅವುಗಳನ್ನು ಸಾಧ್ಯವಾದರೆ ನಾನು ಇಟ್ಟುಕೊಳ್ಳುತ್ತೇನೆ. ಇಲ್ಲವಾದರೆ ಕ್ಷೇತ್ರದ ಗ್ರಂಥಾಲಯಕ್ಕೆ ನೀಡುತ್ತೇನೆ. ಇನ್ನೂ ಸಸಿ ನೆಡುವುದು, ವಿದ್ಯಾರ್ಥಿಗಳಿಗೆ ಪುಸ್ತಕ, ನೋಟ್‌ಬುಕ್, ಪೆನ್ ನೀಡುವ ಮೂಲಕ ನನ್ನ ಜನ್ಮದಿನದ ಸಂಭ್ರಮವನ್ನು ಇಮ್ಮಡಿಗೊಳಿಸಿ.

ಶಿವರಾಜ್ ಎಸ್. ತಂಗಡಗಿ

ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ

Get real time updates directly on you device, subscribe now.

Comments are closed.

error: Content is protected !!
%d bloggers like this: