ಟ್ರಾನ್ಸ್ ಫಾರ್ಮರ್ ಗಳ ಸಮಸ್ಯೆ ಕುರಿತು ಧ್ವನಿ ಎತ್ತಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

 

ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ದ ಅಧಿವೇಶನದಲ್ಲಿ ಕೊಪ್ಪಳ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ವಿಧಾನಸಭ ಕ್ಷೇತ್ರದಲ್ಲಿ ಹೊಸ ಟ್ರಾನ್ಸ್ ಪಾರ್ಮರ್ ಗಳಿಂದ ವಿದ್ಯುತ್ ಸರಬರಾಜಿಗೆ ಆಗುತ್ತಿರುವ ತೊಂದರೆ ಕುರಿತು ಪ್ರಶ್ನಿಸಿದ್ದಾರೆ.

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 834 ರಲ್ಲಿ ಇಂಧನ ಇಲಾಖೆಯ ಸಚಿವರಿಗೆ ಪ್ರಶ್ನಿಸಿರುವ ಶಾಸಕ  ಕೆ. ರಾಘವೇಂದ್ರ ಹಿಟ್ನಾಳ ಅವರು ನಮ್ಮ ಕೊಪ್ಪಳ ವಿಧಾನಸಭ ಕ್ಷೇತ್ರದಲ್ಲಿ ಕೆಟ್ಟು/ಸುಟ್ಟು ಹೋಗಿರತಕ್ಕಂತ ಟಿಸಿಗಳನ್ನು 10-15 ದಿವಸವಾದರೂ ಬದಲಾವಣೆ ಮಾಡಿಕೊಡಲಾರದಂತ  ಪರಿಸ್ಥಿತಿ ನಮ್ಮ ಕ್ಷೇತ್ರದಲ್ಲಿ ಉದ್ಭವ ಆಗಿದೆ. ಹೊಸ ಟ್ರಾನ್ಸ್ ಪಾರ್ಮರ್ ಗಳ ಕೊರತೆಯಿಂದ ವಿದ್ಯುತ್ ಸರಬರಾಜಿಗೆ ತೊಂದರೆ ಆಗುತ್ತಿದೆ.ಟ್ರಾನ್ಸ್ ಪಾರ್ಮರ್ ಗಳು ಹಾಳಾದಾಗ ಹೊಸ ಟ್ರಾನ್ಸ್ ಪಾರ್ಮರ್ ಗಳನ್ನು 24 ಗಂಟೆಯ ಒಳಗೆ ಅಳವಡಿಸಬೇಕೆಂಬ ಸರ್ಕಾರದ ನಿಯಮ ಇದ್ದರು ಕೂಡ ಇವರಿಗೆ ಅಳವಡಿಸದಿರಲು ಕಾರಣ ಏನೂ ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ ಅಕ್ರಮ ಸಕ್ರಮದಲ್ಲಿ 2-3 ವರ್ಷದ ಹಿಂದೆ ರೈತರಿಂದ ಹಣ ತುಂಬಿಸಿಕೊಂಡರು ಅವರಿಗೂ ಕೂಡ ಸಕ್ರಮ ಮಾಡಿಕೊಡಲಿಕ್ಕೆ ಆಗಲಿರುವುದು ಕುರಿತು ಪ್ರಶ್ನಿಸಿದ್ದಾರೆ.

 

ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅವರ ಪ್ರಶ್ನೆಗೆ ಇಂಧನ ಇಲಾಖೆಯ ಸಚಿವರ ಅನುಪಸ್ಥಿಯಲ್ಲಿ ಉತ್ತರಿಸಿದ ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಪ್ರಸ್ತಕ ಸಾಲಿನ ಏಪ್ರಿಲ್ 2023 ಮೇ 2023 ಮತ್ತು ಜೂನ್ 2023 ರ ಮಾಹೆಯಲ್ಲಿ ವಿಪರೀತ ಮಳೆ ಗಾಳಿಯಿಂದಾಗಿ ಹೆಚ್ಚು ಪರಿವರ್ತಕಗಳು ವಿಫಲವಾಗಿದ್ದು ಮಳೆಯ ನಿಂತ ನೀರಿನಿಂದ ಪರಿವರ್ತಕಗಳನ್ನು ಅಳವಡಿಸಲು ಸಾಧ್ಯವಾಗದ ಪರಿವರ್ತಕಗಳ ಬದಲಾವಣೆಯಲ್ಲಿ ಸ್ವಲ್ಪಮಟ್ಟಿನ ವಿಳಂಬಕ್ಕೆ ಕಾರಣವಾಗಿರುತ್ತದೆ ಇದಕ್ಕೆ ಕ್ರಮ ಕೈಗೊಳ್ಳು ಆದೇಶ ನಿಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: