ಗಂಗಾವತಿ ಮುಸ್ಲಿಂ ವೃದ್ದನ ಮೇಲೆ ಹಲ್ಲೆ ಪ್ರಕರಣ : ಸಾಪ್ಟವೇರ್ ಇಂಜನಿಯರ್ ಸೇರಿ ಇಬ್ಬರ ಬಂಧನ

Get real time updates directly on you device, subscribe now.

ಕೊಪ್ಪಳ : ಅಂದ ವೃದ್ದನ ಮೇಲೆ ಹಲ್ಲೆ ಮಾಡಿ ಜೈಶ್ರೀರಾಮ್ ಹೇಳಲು ಒತ್ತಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಗಂಗಾವತಿ ಪೋಲಿಸರು ಬಂಧಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಯಶೋದಾ ವಂಟಿಗೋಡಿಯವರು ಡ್ರಾಪ್ ಕೇಳಿದ್ದ ವೃದ್ದನನ್ನು ಬೈಕ್ ನಲ್ಲಿ ಕರೆದೊಯ್ದ ಆರೋಪಿಗಳು ಕುಡಿದಿದ್ದರು  ಕರೆದೊಯ್ಯುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಬೈದಾಟವಾಗಿದೆ. ನಂತರ ಸಿದ್ದಿಕೇರಿಯ ರೈಲ್ವೆ ಬ್ರಿಜ್ ಬಳಿ ವೃದ್ದ ಹುಸೇನಸಾಬನನ್ನು ಕರೆದೊಯ್ದ ಆರೋಪಿಗಳಾದ ಸಾಗರ್ ಶೆಟ್ಟಿ, ನರಸಪ್ಪ ದನಕಾಯರ ಹುಸೇನಸಾಬನಿಗೆ ಹೊಡೆದು ಆತನ ಬಳಿಯಿದ್ದ ೨೫೦ ರೂಗಳನ್ನು ಕಸಿದುಕೊಂಡಿದ್ದಾರೆ.   ಈ ಪ್ರಕರಣವನ್ನು ಬೇದಿಸಿದ ಸಿಬ್ಬಂದಿಗಳಿಗೆ ಎಸ್ಪಿಯವರು ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

 

ಪೋಲಿಸ್ ತನಿಖಾ ತಂ ಡದಲ್ಲಿ ಇದ್ದವರು

 ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳರವರಾದ ಶ್ರೀಮತಿ ಯಶೋದ ವಂಟಗೋಡಿ 3.2.3 ಮತ್ತು ಗಂಗಾವತಿ ಡಿ.ವೈ.ಎಸ್.ಪಿ ರವರಾದ  ಸಿದ್ದಲಿಂಗಪ್ಪಗೌಡ ರವರ ಮಾರ್ಗದರ್ಶನದಲ್ಲಿ ಗಂಗಾವತಿ ನಗರ ಠಾಣೆಯ ಪೊಲೀಸ್ ಇನ್ಸಪೆಕ್ಟರ್  ಪ್ರಕಾಶ ಮಾಳಿ ರವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಯವರಾದ

 

ಹೆಚ್.ಸಿ 21 ಮರಿಶಾಂತಗೌಡ, ಹೆಚ್.ಸಿ 270 ಚೀರಂಜೀವಿ, ಹೆಚ್.ಸಿ 07 ವಿಶ್ವನಾಥ, ಹೆಚ್.ಸಿ 191 ಸುಭಾಸ ಬಸುದೆ, ಹೆಚ್,.ಸಿ 241 ರಾಘವೇಂದ್ರ, ಹೆಚ್.ಸಿ. 215 ರಮೇಶ, ಪಿಸಿ 171 ಮೈಲಾರಪ್ಪ, ಪಿ.ಸಿ. 164 ಶ್ರೀಶೈಲ್, ಚಾಲಕ ಎ.ಹೆಚ್.ಸಿ 82 ಶಿವುಕುಮಾರ ಹಾಗೂ ಜಿಲ್ಲಾ ಪೊಲೀಸ್ ಕಾರ್ಯಾಲಯದ ಹೆಚ್.ಸಿ 36 ಕೋಟೇಶ, ಎ.ಪಿ.ಸಿ ಪ್ರಸಾದ ರವರನ್ನೊಳಗೊಂಡ ತಂಡ ರಚಿಸಿ ತಂಡವನ್ನು ರಚಿಸಿ, ಸಿಸಿ ಪುಟೇಜ ಮತ್ತು ಇನ್ನಿತರ ತಂತ್ರಜ್ಞಾನದ ಮುಖಾಂತರ ಆರೋಪಿತರ ಪತ್ತೆಗಾಗಿ ನಿರಂತರ ಶ್ರಮಿಸಿ ಆರೋಪಿತರಾದ 01] ಕೆ. ಸಾಗರ ತಂದೆ ಕೆ. ಜನಾರ್ಧನಶೆಟ್ಟಿ ಕಲ್ಕಿ ವಯಸ್ಸು 24 ವರ್ಷ, ಜಾ. ವೈಶ್ಯ ಉ. ಸಾಪ್ಟವೇರ ಇಂಜಿನಿಯರ ಸಾ. ಕುವೆಂಪು ಬಡಾವಣೆ, 2 ನೇ ಕ್ರಾಸ್ ಜಯನಗರ, ಗಂಗಾವತಿ, 02] ನರಸಪ್ಪ ತಂದೆ ಹೊನ್ನಪ್ಪ ದನಕಾಯರ ವಯಸ್ಸು 25 ವರ್ಷ, ಜಾ. ನಾಯಕ ಉ. ಒಕ್ಕಲುತನ ಸಾ. ಕಲ್ಲಪ್ಪನ ಕ್ಯಾಂಪ ಗಂಗಾವತಿ. ಇವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದೆ.

ಸದರಿ ಆರೋಪಿತರು ಫಿರ್ಯಾದಿದಾರನು ಕತ್ತಲಲ್ಲಿ ಡ್ರಾಪ್ ಮಾಡಲು ಕೇಳಿದ್ದರಿಂದ ಫಿರ್ಯಾದಿದಾರರಿಗೆ ಕಣ್ಣು ಕಾಣದೆ ಇರುವುದರಿಂದ ಇಬ್ಬರು ಮೋಟಾರ ಸೈಕಲದಲ್ಲಿ ಕರೆದುಕೊಂಡು ಹೋಗುವಾಗ ಫಿರ್ಯಾದಿದಾರರ ಟೊಪ್ಪಿಗೆ ಮುಟ್ಟಿದ್ದರಿಂದ ಫಿರ್ಯಾದಿದಾರನು ಸಿಟ್ಟಿಗೆ ಬಂದು ಬೈದಾಡಿದ್ದರಿಂದ ಇಬ್ಬರು ಸೇರಿಕೊಂಡು ಪಂಪಾಕ್ರಾಸದಲ್ಲಿ ಹೊಡೆದಿದ್ದು ನಂತರ ಬೀಟಿನಲ್ಲಿರುವ ಪೊಲೀಸರು ನೋಡುತ್ತಾರೆಂದು ಇಬ್ಬರು ಸೇರಿಕೊಂಡು ಗಂಗಾವತಿಯ ಬೈಪಾಸ್ ರಸ್ತೆಯಲ್ಲಿ ರೈಲ್ವೆ ಬ್ರಡ್ಡ ಕೆಳಗೆ ಕರೆದುಕೊಂಡು ಹೋಗಿ ಆರೋಪಿತರು ತಮ್ಮ ದುಶ್ಚಟಗಳಿಗೆ ಫಿರ್ಯಾದಿದಾರರ ಹತ್ತಿರ ಇದ್ದ 250- 00 ರೂ. ಗಳನ್ನು ಹೊಡೆದು ಕಸಿದುಕೊಂಡಿರುತ್ತಾರೆ. ಎಂದು ಒಪ್ಪಿಕೊಂಡಿರುತ್ತಾರೆ. ಪ್ರಕರಣದಲ್ಲಿ ಆರೋಪಿತರನ್ನು ಬಂಧಿಸಿದ ತನಿಖಾ ವಿಶೇಷ ತಂಡಕ್ಕೆ ಮಾನ್ಯ ಎಸ್.ಪಿ. ಕೊಪ್ಪಳ ರವರು ಪ್ರಶಂಸನೆ ಮಾಡಿ ಬಹುಮಾನ ಘೋಷಣೆ ಮಾಡಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: