ಶಾಲಾ ಪೂರ್ವ ಶಿಕ್ಷಣ ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ: ಜಿಲ್ಲಾಧಿಕಾರಿ ನಲಿನ್ ಅತುಲ್
Get real time updates directly on you device, subscribe now.
ಶಾಲಾ ಪೂರ್ವ ಶಿಕ್ಷಣ ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ ಇದ್ದಂತೆ. ಈ ವ್ಯವಸ್ಥೆಯಲ್ಲಿ ಔಪಚಾರಿಕ ಶಿಕ್ಷಣಕ್ಕೆ ಒಳಪಡುವ ಮುನ್ನವೇ ಮಗುವನ್ನು ಶಾಲೆಗೆ ತೆರಳಲು ಮಾನಸಿಕವಾಗಿ, ಬೌದ್ಧಿಕವಾಗಿ ಸಿದ್ಧಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಹೇಳಿದರು.
ಮೇಘಾಲಯ ರಾಜ್ಯದ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಂಡವು ಜಿಲ್ಲೆಯಲ್ಲಿ ಅಳವಡಿಸಿಕೊಂಡಿರುವ ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆ, ಕಲಿಕೆ, ನಲಿ ಕಲಿ ಕಾರ್ಯಕ್ರಮಗಳ ಕುರಿತು ವೀಕ್ಷಣೆಗಾಗಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಬಹತೇಕರು ಅಂಗನವಾಡಿಗಳಿAದಲೇ ನಮ್ಮ ಕಲಿಕೆಯನ್ನು ಆರಂಭಿಸಿದ್ದೇವೆ. ಅದೇ ರೀತಿಯಾಗಿ ಶಾಲಾ ಶಿಕ್ಷಣದ ಪೂರ್ವದಲ್ಲಿ ಕಲಿಕೆಯೆಡೆಗೆ ಮಗುವಿನ ಆಸಕ್ತಿ ಹೆಚ್ಚಿಸುವುದು, ವಯಸ್ಸಿಗೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಮಗುವಿಗೆ ಅಗತ್ಯವಾಗಿರುವ ಜ್ಞಾನವನ್ನು ನೀಡುವುದು, ಸಾಮಾಜಿಕವಾಗಿ ಬೆರೆಯುವಿಕೆ, ಔಪಚಾರಿಕ ಶಿಕ್ಷಣಕ್ಕೆ ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಮಗುವನ್ನು ಸಿದ್ಧಗೊಳಿಸುವಿಕೆ ಮುಂತಾದ ಧನಾತ್ಮಕ ಆಯಾಮಗಳಿಂದ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಅಂಗನವಾಡಿ ಶಿಕ್ಷಕಿಯರಿಗೆ, ಸಹಾಯಕಿಯರಿಗೆ ಅಗತ್ಯವಾದ ತರಬೇತಿಯನ್ನು ಸಹ ನೀಡಲಾಗುತ್ತದೆ. ಸ್ಥಳೀಯವಾಗಿ ಸಿಗುವ ವಸ್ತುಗಳು, ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳಿಗೆ ಬಣ್ಣಗಳು, ಪ್ರಾಣಿಗಳು, ಆಕಾರಗಳ ಗುರುತಿಸುವಿಕೆ, ಗಣಿತದ ಆಕಾರಗಳ ಗ್ರಹಿಸುವಿಕೆ ಮುಂತಾದವುಗಳನ್ನು ತಿಳಿಸಿಕೊಡಲಾಗುತ್ತದೆ. ಜೊತೆಗೆ ಪೌಷ್ಠಿಕ ಆಹಾರವನ್ನು ಸಹ ನೀಡಲಾಗುತ್ತದೆ. ಅಂಗನವಾಡಿಗಳಿಗೆ ಅದೇ ಗ್ರಾಮದ ಅಭ್ಯರ್ಥಿಯನ್ನು ಅಂಗನವಾಡಿ ಶಿಕ್ಷಕಿಯಾಗಿ ನೇಮಕ ಮಾಡುವುದರಿಂದ ಮಕ್ಕಳು ಶಿಕ್ಷಕಿಯರೊಂದಿಗೆ ಬೆರೆಯಲು ಮಾತನಾಡಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ವಿವರಿಸಿದರು.
ಅಂಗನವಾಡಿಗಳಿಗೆ 3 ರಿಂದ 6 ವರ್ಷದ ಮಕ್ಕಳು ಬರುತ್ತಾರೆ. ಈ ವಯೋಮಾನದಲ್ಲೂ ವಿಭಾಗಗಳನ್ನು ಮಾಡಿ, ಆಯಾ ವಯಸ್ಸಿಗೆ ತಕ್ಕ ತಿಳುವಳಿಕೆಯನ್ನು ಹಾಡು, ಕಥೆ ಹೇಳುವುದು, ಕಥೆಗಳನ್ನು ಜೋರಾಗಿ ಓದುವುದರ ಮೂಲಕ ನೀಡಲಾಗುತ್ತದೆ. ಅಂಗನವಾಡಿಯಿAದ ಔಪಚಾರಿಕ ಶಿಕ್ಷಣಕ್ಕಾಗಿ ಮಗು ಶಾಲೆಗೆ ಸೇರುವಷ್ಟರಲ್ಲಿ ಮಗು ಶಾಲಾ ವಾತಾವರಣಕ್ಕೆ, ಪದ್ಧತಿಗೆ ಮಾನಸಿಕವಾಗಿ ಒಗ್ಗಿಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಿದೆ. ಅಂಗನವಾಡಿಯ ಇತರೆ ಚಟುವಟಿಕೆಗಳಲ್ಲಿ ಮಕ್ಕಳ ಪೋಷಕರನ್ನು ಸಮುದಾಯವನ್ನು ಒಳಗೊಂಡು ಚಟುವಟಿಕೆ ನಡೆಸಲಾಗುತ್ತದೆ. ಇದರಿಂದ ಪೋಷಕರಿಗೂ ಸಹ ತಮ್ಮ ಮಕ್ಕಳ ಜ್ಞಾನ, ಅವರ ಅಗತ್ಯಗಳು, ನೀಡಬೇಕಾದ ಬೆಂಬಲ ಮುಂತಾದವುಗಳ ಬಗ್ಗೆ ತಿಳಿಯುವುದಲ್ಲದೇ, ಮಕ್ಕಳ ಶಿಕ್ಷಣಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಮೇಘಾಲಯದಿಂದ ಆಗಮಿಸಿದ್ದ ಅಧಿಕಾರಿಗಳ ತಂಡವು ಡಿಸೆಂಬರ್ 1 ಮತ್ತು 2 ರಂದು ಜಿಲ್ಲೆಯ ಯಲಬುರ್ಗಾ ಯೋಜನೆಯ ತಳಕಲ್-4 ಮತ್ತು ಮಂಡಲಗಿರಿ-3ನೇ ಅಂಗನವಾಡಿ, ಗಂಗಾವತಿ ಯೋಜನೆಯ ಹೆರೂರ-2 ಮತ್ತು 5ನೇ ಅಂಗನವಾಡಿ, ಕುಷ್ಟಗಿ ಯೋಜನೆಯ ಹಿರೇಮನ್ನಾಪೂರ-3ನೇ ಹಾಗೂ ಗುಮಗೇರ 3ನೇ ಅಂಗನವಾಡಿಗಳಿಗೆ ಭೇಟಿ ನೀಡಿದ್ದ ವೇಳೆ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳ ವೀಕ್ಷಣೆ, ಕಲಿಕಾ ಸಾಮಾಗ್ರಿಗಳ ವೀಕ್ಷಣೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಜೊತೆ ಶಾಲಾ ಪೂರ್ವ ಶಿಕ್ಷಣ ಅನುಷ್ಠಾನ ಕುರಿತು ಚರ್ಚೆ, ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದಡಿ ಪೋಷಕರಿಗೆ ಶಾಲಾ ಪೂರ್ವ ಶಿಕ್ಷಣದ ಕ್ರಿಯಾತ್ಮಕ ಚಟುವಟಿಕೆ ಮಾಡಿಸಿರುವ ಬಗ್ಗೆ, ಪೋಷಕರ ವಾಟ್ಸಪ್ ಗ್ರೂಪ್ ಬಗ್ಗೆ, ಸಮುದಾಯದ ಸಹಭಾಗಿತ್ವದ ಕುರಿತ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿದರು. ತಮ್ಮ ರಾಜ್ಯದಲ್ಲಿ ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಯೋಜನೆ ಕುರಿತು ಎಲ್ಲ ಆಯಾಮಗಳಿಂದಲೂ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರುವ ಶಾಲಾ ಪೂರ್ವ ಶಿಕ್ಷಣ ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಹಾಗೂ ಅರ್ಪಣಾ ಮನೋಭಾವವನ್ನು ಶ್ಲಾಘಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀಶೈಲ ತಳವಾರ, ಟಾಟಾ ಕಲಿಕಾ ಟ್ರಸ್ಟ್ನ ಯೋಜನಾ ಮುಖ್ಯಸ್ಥೆ ಡಾ.ಚಿತ್ಕಲಾ, ಪಿಒ ವೀಣಾ ಎಸ್‌ಎಸ್, ಶಿವಕುಮಾರ, ಕೊಟ್ರೇಶ, ಗಿರೀಶ್, ಬಳ್ಳಾರಿಯ ವ್ಯವಸ್ಥಾಪಕರಾದ ಜಗನ್ನಾಥ, ಮೇಘಾಲಯದ ಡಯಟ್‌ನ ಅಸೋಸಿಯಟ್ ಪ್ರೊಫೆಸರ್ ಆರ್.ಎಂ. ಲಾಲೋಬ್, ಕೋ-ಆರ್ಡಿನೇಟರ್ ಎಸ್.ಮೇರಕ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments are closed.