ಇಂದು ಮೀಡಿಯಾ ಕ್ಲಬ್ ಸದಸ್ಯರಿಂದ ನಾಟಕ ಪ್ರದರ್ಶನ

Get real time updates directly on you device, subscribe now.


ಕೊಪ್ಪಳ : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರಿಂದ ಪತ್ರಿಕಾ ದಿನಾಚರಣೆ ಹಾಗು ಸಂಪತ್ತಿಗೆ ಸವಾಲ್ ಎಂಬ ನಾಟಕವನ್ನು ಇಂದು ( ನ 16) ರಂದು ಕೊಪ್ಪಳ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿದೆ.
ಸದಾ ಕೆಲಸದ ಒತ್ತಡದ ಮಧ್ಯೆಯೂ ಕೊಪ್ಳಳ ಮೀಡಿಯಾ ಕ್ಲಬ್ ಸದಸ್ಯರು ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದಾರೆ. ಈ ಬಾರಿ ಪಿ ಬಿ ಧುತ್ತರಗಿಯವರ ಸಂಪತ್ತಿಗೆ ಸವಾಲ್ ನಾಟಕ ಅಭಿನಯಿಸಲಿದ್ದಾರೆ. ಡಾ ರಾಜಕುಮಾರರಿಗೆ ಹೆಸರು ತಂದಿರುವ ಸಂಪತ್ತಿಗೆ ಸವಾಲ್ ಸಿನೇಮಾ ನಿರ್ಮಾಣವಾಗಿ 50 ವರ್ಷವಾಗಿದೆ. ಸಿನೇಮಾವಾಗುವ ಮೊದಲು ಸರಿ ಸುಮಾರು 6 ವರ್ಷ ಮೊದಲೇ ರಚನೆಯಾಗಿರುವ ಈ ನಾಟಕ ಈಗಿನ ಸಂದರ್ಭಕ್ಕೂ ಪ್ರಸ್ತುತವಾಗಿದೆ. ರೌದ್ರಮಯ ನಾಟಕವನ್ನು ಮೀಡಿಯಾ ಕ್ಲಬ್ ಸದಸ್ಯರು ಅಭಿನಯಿಸುತ್ತಾರೆ.
ಕೊಪ್ಪಳ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಗಳು ಸಾನಿಧ್ಯ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದಾರೆ. ಹಿರಿಯ ಕಲಾವಿದ ಶರಣಪ್ಪ ಬಾಚಲಾಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಸಂಗಣ್ಣ ಕರಡಿ, ಎಂಎಲ್ ಸಿ ಹೇಮಲತಾ ನಾಯಕ. ಶಾಸಕ ಕೆ ರಾಘವೇಂದ್ರ ಹಿಟ್ನಾಳ. ಬಸವರಾಜ ರಾಯರಡ್ಡಿ, ಗಾಲಿ ಜನಾರ್ಧನರಡ್ಡಿ ಹಾಗು ದೊಡ್ಡನಗೌಡ ಪಾಟೀಲ ಸೇರಿ ಹಲವರು ಭಾಗಿಯಾಗಲಿದ್ದಾರೆ.
ಸಂಗಮೇಶ ಮನ್ನೇರಾಳರ ಸಂಗೀತ. ಬಸವರಾಜ ಬಿನ್ನಾಳರ ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಮೀಡಿಯಾ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!