ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ: ಗುರು ಕೃಪೆಯೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು
.
ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಪ್ರೌಢ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗುರು ಕೃಪೆಯೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು, ಪುರುಷರು ಉದ್ಯೋಗ ಹಾಗೂ ಇನ್ನಿತರ ಕಾರಣಗಳಿಂದಾಗಿ ಹುಟ್ಟಿದ ಊರು ಬಿಟ್ಟು ಇನ್ನೆಲ್ಲೋ ನೆಲೆಸಿದವರು. ಸ್ತ್ರೀಯರು ಮದುವೆಯಾಗಿ ತಮ್ಮ ಸಂಸಾರದ ಜಂಜಾಟದಲ್ಲಿ ಇನ್ನೆಲ್ಲೋ ತೊಡಗಿರುತ್ತಾರೆ. ತಮ್ಮ ದಿನನಿತ್ಯದ ಒತ್ತಡದ ಜೀವನದಲ್ಲಿ ಹುಟ್ಟಿದ ಊರು, ಹೆತ್ತ ತಂದೆ ತಾಯಿಯವರನ್ನು ನೆನೆಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿಯೂ 2004-05 ನೇ ಸಾಲಿನ ಎಸ್ ಎಸ್ ಎಲ್ ಸಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನು ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೇಲುಕು ಹಾಕುವಂತಹ ಸುಂದರ ಕ್ಷಣಗಳಿಗೆ ಹಾಗೂ ವಿದ್ಯಾರ್ಜನೆ ಮಾಡಿದ ಗುರುಗಳೆಲ್ಲರಿಗೂ ಗುರು ಕಾಣಿಕೆ ಸಮರ್ಪಿಸಲು ಈ ವೇದಿಕೆ ಸಾಕ್ಷಿಯಾಗಿದೆ ಎಂದು ಹಿರೆಸಿಂದೋಗಿಯ ಕಪ್ಪತಗಿರಿ ಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು ರವರು ಹಿರೆಸಿಂದೋಗಿಯ ಸರಕಾರಿ ಪ್ರೌಢ ಶಾಲೆಯ 2004-05 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಇಂಗ್ಲಿಷ್ ಶಿಕ್ಷಕರಾದ ಹಾಗೂ ಸರಕಾರದ ಅದಿನ ಕಾರ್ಯದರ್ಶಿಗಳಾದ ಬಿ ಕಲ್ಲೇಶ ರವರು ನಮ್ಮ ಕೈಯಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು ನನ್ನ ಹಾಗೆ ದೊಡ್ಡ ಅಧಿಕಾರದಲ್ಲಿರಬೇಕು, ಅಷ್ಟೇ ಅಲ್ಲದೆ ಎಲ್ಲರೂ ತಮ್ಮ ಬದುಕಿಗೆ ಬೇಕಾಗುವ ಜೀವನದ ಪಾಠವನ್ನು ತಿಳಿದು ಉತ್ತಮ ಜೀವನ ನಡೆಸುತ್ತಿದ್ದಾರೆ ನಾನು ಈ ಶಾಲೆಯಲ್ಲಿ ಕೆಲವೇ ವರ್ಷಗಳು ಸೇವೆ ಮಾಡಿದ್ರೂ ಕೂಡ ಮಕ್ಕಳಿಗೆ ಬೋಧಿಸಿದ ವಿಷಯದ ಮೇಲೆ ನಾನು ಇಂದು ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ರಾಂಕ್ ಪಡೆದು ಅಧಿಕಾರಿಯಾಗಲು ಸಾಧ್ಯವಾಯಿತು. ಇದು ಶಾಲೆಗೆ ಮತ್ತು ವಿದ್ಯಾರ್ಥಿಗಳಿಗೆ ಸಲ್ಲಬೇಕಾದ ಶ್ರೇಯಸ್ಸು ಈಗ ನಾನು ಉನ್ನತ ಸ್ಥಾನದಲ್ಲಿದ್ದರೂ ನನ್ನ ಬದುಕಿಗೆ ದಾರಿ ತೋರಿದ ಈ ಶಾಲೆಯನ್ನು ಹಾಗೂ ವಿದ್ಯಾರ್ಥಿಗಳನ್ನು ಮರೆಯಲು ಸಾಧ್ಯವಿಲ್ಲ ನಾನು ಅಧಿಕಾರದಲ್ಲಿರುವಾಗಲೇ ಈ ಶಾಲೆಗೆ ಹಾಗೂ ಈ ಊರಿಗೆ ಸರ್ಕಾರದ ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಶಾಲೆಯಲ್ಲಿ 2004-05 ಸಾಲಿನಲ್ಲಿ ಸೇವೆ ಸಲ್ಲಿಸಿದ ವೀರಣ್ಣ ವಾಲಿ, ಶ್ರೀಮತಿ ರೇಣುಕಾ ಹಡಗಲಿ, ಮಹಾಂತೇಶ ಚನ್ನಿನಾಯ್ಕರ, ಬಿ. ಕಲ್ಲೇಶ, ಸೋಮರೆಡ್ಡಿ ಅಳವಂಡಿ, ಶ್ರೀಮತಿ ಸುಮನ್ ಟೀಚರ್, ನಾಗರಾಜ ಸುನಗ, ಸುಧೀಂದ್ರ ಜೋಶಿ ಇವರಿಗೆ ಕಾರ್ಯಕ್ರಮದ ವತಿಯಿಂದ ಗುರುಕಾಣಿಕೆಯನ್ನು ಸಮರ್ಪಿಸಿ, ಸತ್ಕಾರ ಸಲ್ಲಿಸಲಾಯಿತು.
ಕಾರ್ಯಕ್ರಮದ ವತಿಯಿಂದ ದೇಶ ರಕ್ಷಣೆಯಲ್ಲಿ ತೊಡಗಿದ ಹಾಗೂ ನಿವೃತ್ತ ವೀರ ಸೈನಿಕರಿಗೆ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನಿಸಿ ಸತ್ಕರಿಸಲಾಯಿತು. ಅತಿಥಿಗಳಿಗೆ, ಗ್ರಾಮ ಪಂಚಾಯಿತಿಯ ಅಧ್ಯಕ್ಷರಿಗೆ, ಸರ್ವ ಸದಸ್ಯರಿಗೆ ಎಸ್ಡಿಎಂಸಿ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ಊರಿನ ಪ್ರಮುಖ ಗುರುಹಿರಿಯರಿಗೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಸರ್ವ ಸಿಬ್ಬಂದಿಯವರಿಗೆ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸರ್ವ ಸಿಬ್ಬಂದಿಯವರಿಗೆ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಿಗೆ ಹಾಗೂ ಸರ್ವ ಸಿಬ್ಬಂದಿಯವರಿಗೆ, ಹಿತೈಷಿಗಳಿಗೆ ಹಾಗೂ 2004-05 ನೇ ಸಾಲಿನ ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ ಗುರುವಂದನ ಕಾರ್ಯಕ್ರಮದ ವತಿಯಿಂದ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ 2004-05 ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ ಸಮಸ್ತ ಗುರು ವೃಂದದವರು, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು, ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ವೆಂಕಣ್ಣ ಕೊಳ್ಳಿ, ಪ್ರಭುಗೌಡ ಮೈನಹಳ್ಳಿ, ಕೇಶವರೆಡ್ಡಿ ಮಾದಿನೂರು ವೇದಿಕೆ ಮೇಲೆ ಉಪಸಿತರಿದ್ದರು. ಮಂಜುನಾಥ ಕುರಿ, ಆನಂದ ಮಾದಿನೂರ ರವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಚಂದ್ರಶೇಖರ ಗದ್ದಿ ಯವರು ಪ್ರಾರ್ಥಿಸಿ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ನುಡಿದರು, ಎಂ. ಆರ್. ಡೊಳ್ಳಿನ ಮತ್ತು ಶ್ರೀಮತಿ ಮಂಜುಳಾ ಮಕಾಳೆ ರವರು ನಿರೂಪಿಸಿದರು. ಭುವನೇಶ್ವರಿ ಕುರುಡಗಿ ಸ್ವಾಗತಿಸಿದರು, ಸೌಮ್ಯ ವಾಲಿ ಕಾರ್ಯಕ್ರಮವನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಸಮಸ್ತ ಊರಿನ ಗುರಿ ಹಿರಿಯರು, ಹಿತೈಷಿಗಳು 2004-05ನೇ ಸಾಲಿನ ಎಸ್ ಎಸ್ ಎಲ್ ಸಿ ಹಳೆ ವಿದ್ಯಾರ್ಥಿಗಳ ಒಕ್ಕೂಟದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.
Comments are closed.