ಕಿಷ್ಕಿಂಧಾ ಜಿಲ್ಲೆ ರಚನೆ ಒತ್ತಾಯಿಸಿ ಸಮಿತಿಯಿಂದ ಮನವಿ

Get real time updates directly on you device, subscribe now.

ಸಕರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್
ಕಿಷ್ಕಿಂಧಾ ಜಿಲ್ಲೆ ರಚನೆಗೊತ್ತಾಯಿಸಿ ಸಮಿತಿಯಿಂದ ಮನವಿ
ಗಂಗಾವತಿ:
ವಾಣಿಜ್ಯ ನಗರಿ ಗಂಗಾವತಿಯನ್ನು ಕೇಂದ್ರವನ್ನಾಗಿರಿಸಿಕೊಂಡು ನೂತನ ಕಿಷ್ಕಿಂಧಾ ಜಿಲ್ಲೆ ರಚಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು ಮನವಿ ಸಲ್ಲಿಸಿದರು.
ಹೊಸಪೇಟೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಗವಿಯಪ್ಪ ಅವರ ನಿವಾಸದಲ್ಲಿ ಭೇಟಿಯಾದ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು, ಈ ಬಗ್ಗೆ ಮನವಿ ಸಲ್ಲಿಸಿ ನೂತನ ಜಿಲ್ಲೆಯ ಅಗತ್ಯತೆಯನ್ನು ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಮುಖರಾದ ಸುರೇಶ ಸಿಂಗನಾಳ, ಸಂತೋಷ್ ಕೇಲೋಜಿ ಗಂಗಾವತಿಯಿಂದ ಕೊಪ್ಪಳ 60 ಕಿಲೋ ಮೀಟರ್ ಅಂತರವಿದೆ. ಕಾರಟಗಿ, ಕನಕಗಿರಿ, ತಾವರಗೇರಾ ಭಾಗದ ಜನ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆ 80ರಿಂದ90 ಕಿಮೀ ಆಗಲಿದೆ.
ಹೀಗಾಗಿ ಜನರಿಗೆ ತ್ವರಿತ ಸೇವೆ ಕಲ್ಪಿಸುವ ಉದ್ದೇಶಕ್ಕೆ ಗಂಗಾವತಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಕಾರಟಗಿ, ಕನಕಗಿರಿ, ತಾವರಗೇರಾ ಭಾಗದ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ  ನೂತನ ಜಿಲ್ಲಾ ವ್ಯಾಪ್ತಿಯಲ್ಲಿ ಕಂಪ್ಲಿ ಮತ್ತು ಸಿಂಧನೂರು ತಾಲ್ಲೂಕುಗಳನ್ನು ಒಳಗೊಂಡಂತೆ ನೂತನ ಜಿಲ್ಲೆ ರಚಿಸಬೇಕು ಎಂದು ಮನವಿ ಸಲ್ಲಿಸಿದರು.
ವಕೀಲರಾದ ಸೈಯದ್ ಹಾಷ್ಮುದ್ದೀನ್, ಎಚ್.ಎಂ. ಮಂಜುನಾಥ, ನಾಗರಾಜ ಗುತ್ತೇದಾರ ಮಾತನಾಡಿ ಈಗಾಗಲೆ ಗಂಗಾವತಿಗೆ ನ್ಯಾಯಾಲಯದಲ್ಲಿನ ಭೂ ವ್ಯಾಜ್ಯಗಳ ತ್ವರಿತ ವಿಲೇವಾರಿಗೆ ತಾತ್ಕಾಲಿಕ ಸಹಾಯಕ ಆಯುಕ್ತರ ಕಚೇರಿ ಮಂಜೂರಾಗಿದೆ.
ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಷನದಲ್ಲಿ ಈ ಬಗ್ಗೆ ಚಚರ್ಿಸಿ ಗಂಗಾವತಿಗೆ ಪೂರ್ಣ ಪ್ರಮಾಣದ ಸಹಾಯಕ ಆಯುಕ್ತ ಕಚೇರಿ ಮಂಜೂರು ಮಾಡಿಸಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಸಿಎಂ ಬಳಿ ಮನವಿ ಮಾಡಿದರು.
ಜಿಲ್ಲಾ ಹೋರಾಟ ಸಮಿತಿ ಸದಸ್ಯರ ಮನವಿಯನ್ನು ಸಮಾಧಾನದಿಂದಲೇ ಆಲಿಸಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಸಮಿತಿಯ ಪದಾಧಿಕಾರಿಗಳಿಂದ ಮನವಿ ಸ್ವೀಕರಸಿದರು. ಸಚಿವರಾದ ಜಮೀರ್ ಅಹ್ಮದ್, ಭೈರತಿ ಸುರೇಶ, ವಿ.ಎಸ್. ಉಗ್ರಪ್ಪ, ಶಾಸಕ ಎಚ್.ಆರ್. ಗವಿಯಪ್ಪ ಇದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರಾದ ವಿಶ್ವನಾಥ ಮಾಲಿಪಾಟೀಲ್, ಶ್ರೀನಿವಾಸ ಎಂ.ಜೆ, ಮಂಜುನಾಥ ಕಟ್ಟಿಮನಿ, ವಿನಯ್ ಪಾಟೀಲ್, ರಾಜು ಮುದ್ಗಲ್, ಗೌತಮ ಸಿರಿಗೇರಿ, ಉದ್ಯಮಿ ಸಂದೀಪ್ ಶಿಂಧೆ ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: