ಕೆಯುಡಬ್ಲ್ಯೂಜೆಗೆ 1 ಲಕ್ಷ ರೂ ದತ್ತಿನಿಧಿ ಪ್ರತಿಷ್ಟಾಪಿಸಿದ ಕೆಪಿಎಸ್ ಪ್ರಮೋದ್
ಬೆಂಗಳೂರು :
ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗೆ ಅಮೋಘ ನ್ಯೂಸ್ ನ ಕೆಪಿಎಸ್ ಪ್ರಮೋದ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಒಂದು ಲಕ್ಷ ರೂ ದೇಣಿಗೆ ಚೆಕ್ ಅನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ, ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ ಹಾಜರಿದ್ದರು .
ಮಂಡ್ಯ ಜಿಲ್ಲೆಯ ಪೌರವಾಣಿ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಕೆ.ಪ್ರಹ್ಲಾದರಾವ್ ಅವರು ಉದಯ ಟಿವಿ ಜಿಲ್ಲಾ ವರದಿಗಾರರಾಗಿ, ಪಿಟಿಐ ವರದಿಗಾರರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಸ್ಮರಣಾರ್ಥವಾಗಿ ಪ್ರಶಸ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ.
ಪ್ರತಿವರ್ಷ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತ ಕೆ.ಪ್ರಹ್ಲಾದರಾವ್ ಹೆಸರಿನಲ್ಲಿ ಒಬ್ಬರು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಪ್ರಶಸ್ತಿಗೆ ತಂದೆಯ ಹೆಸರಿನಲ್ಲಿ ದೇಣಿಗೆ ನೀಡಿದ ಕೆಪಿಎಸ್ ಪ್ರಮೋದ್ ಅವರಿಗೆ ಕೆಯುಡಬ್ಲ್ಯೂಜೆ ಅಭಿನಂದನೆ ಸಲ್ಲಿಸಿದೆ.
Comments are closed.