ವ್ಯಕ್ತಿಪೂಜೆ ಸಮಾಜದ ಒಂದು ದೊಡ್ಡ ದುರಂತ-ಯೋಗೀಶ್ ಮಾಸ್ಟರ್

Get real time updates directly on you device, subscribe now.

Koppal ವ್ಯಕ್ತಿಪೂಜೆ ಸಮಾಜಕ್ಕೆ ಒಂದು ದೊಡ್ಡ ದುರಂತ, ಚರಿತ್ರೆಯ ವ್ಯಕ್ತಿಗಳನ್ನು ಧರ್ಮದ ಜೊತೆ ಜೋಡಿಸಬಾರದು ಎಂದು ಚಿಂತಕ ಯೋಗೀಶ್ ಮಾಸ್ಟರ್ ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ (ಸ) ವಿಚಾರಗೋಷ್ಠಿ ಯಲ್ಲಿ ನಿರ್ದೇಶಕ, ಚಿಂತಕ, ಬರಹಗಾರ ಯೋಗೀಶ್ ಮಾಸ್ಟರ್ ಮಾತನಾಡಿದ ನಿರ್ದೇಶಕ, ಚಿಂತಕ, ಬರಹಗಾರ ಯೋಗೀಶ್ ಮಾಸ್ಟರ್ ಮಾತನಾಡಿ

 

ಜಾತಿ, ಧರ್ಮ ಮತ್ತು ವ್ಯವಸ್ಥೆಯ ಹೆಸರಲ್ಲಿ ಎಲ್ಲವನ್ನೂ ಸಮರ್ಥನೆ ಮಾಡಿಕೊಳ್ಳುವದನ್ನು ಇಸ್ಲಾಂ ವಿರೋಧಿಸುತ್ತದೆ. ರಾಜಕಾರಣಿಗಳು, ಆಡಳಿತಗಾರರನ್ನು ಧರ್ಮಗಳ ಜೊತೆಗೆ ಸಮ್ಮಿಲನಗೊಳಿಸುವುದೇ ದೊಡ್ಡ ತಪ್ಪು. ಇಸ್ಲಾಂ ಎಂದ. ತಕ್ಷಣ ಖುರಾನ್ ಮತ್ತು ಪ್ರವಾದಿ ಮೊಹಮ್ಮದರ ಕಡೆಗೆ ನೋಡಬೇಕೆ ಹೊರತು ಟಿಪ್ಪು ಅಥವಾ ಔರಂಗಜೇಬರನಲ್ಲ, ಅವರು ಕೇವಲ ರಾಜ ಮತ್ತು ಐತಿಹಾಸಿಕ ಪುರುಷರು ಮಾತ್ರ, ಅವರನ್ನು ಇತಿಹಾಸಕಾರರು ಮಾತ್ರ ಬರೆದು ತಿಳಿಸಬೇಕು ಅದು ಕೇವಲ ಇತಿಹಾಸವೇ ಹೊರತು ಧರ್ಮ ಅಲ್ಲವೇ ಅಲ್ಲ. ಸ್ವಗೋತ್ರಪ್ರೇಮದ ಕಾರಣಕ್ಕೆ ತಪ್ಪು ಮಾಡುವವರನ್ನೂ ಸಹ ಸಮರ್ಥನೆ ಮಾಡುತ್ತ ಸಮಾಜವನ್ನು ಹಾಳುಗೆಡುವುದು ತೀರಾ ದೊಡ್ಡ ತಪ್ಪು. ನ್ಯಾಯಪಾಲನೆಯಲ್ಲಿ ತಪ್ಪಬಾರದು ಅಂದರೆ ಮನುಷ್ಯ ವ್ಯಕ್ತಿಪೂಜೆಯನ್ನು ನಿಲ್ಲಿಸಬೇಕು, ಇಲ್ಲವಾದರೆ ಮಾನವಕುದ ಇತಿಹಾಸವೇ ತಪ್ಪಾಗಿ ಬಿಂಬಿತವಾಗುತ್ತದೆ ಎಂದರು.
ಕೊಪ್ಪಳದ ಇತಿಹಾಸದಲ್ಲಿಯೇ ಒಂದು ಧರ್ಮ ಸಂಕಟದ ಅರಿವು ಅಡಕವಾಗಿರುವದನ್ನು ಗಮನಿಸಿ ಮುಕ್ತುಂ ಮೋದಿನ್ ಖಾನ್ ಎಂಬ ಬಂಡಾಯಗಾರನಿದ್ದ ಆಗ ಬ್ರಿಟೀಷರ ಆಡಳಿತದಲ್ಲಿ ಇಲ್ಲಿನ ಆಗಿನ ತಹಶೀಲ್ದಾರ್ ಆಗಿದ್ದವರು ಮೊಹಮ್ಮದ್ ಆಸೀಫ್ ಎಂಬ ಮುಸ್ಲಿಂ ಸಮಾಜದ ತಹಶೀಲ್ದಾರನ ಮುಂದಾಳತ್ವದಲ್ಲಿ ಖಾನ್‌ನನ್ನು ಗಲ್ಲಿಗೇರಿಸಲಾಯಿತು, ಅಂದರೆ ಅಲ್ಲಿಗೆ ಎರಡು ವ್ಯತಿರಿಕ್ತ ಸಂಗತಿ ಅರ್ಥ ಮಾಡಿಕೊಳ್ಳಬೇಕು, ಇಲ್ಲಿ ಅವರವರ ಕೆಲಸ ಅವರು ಮಾಡಿದ್ದಾರೆ ಅಷ್ಟೇ. ಅವರವರ ಇಷ್ಟದ ಧರ್ಮ ಪಾಲನೆ ಮಾಡಲು ಬಿಟ್ಟುಬಿಡಬೇಕು ಹೊರತು ಅವರ ಆಚರಣೆಯಲ್ಲಿ ಯಾಕೆ ಮೂಗು ತೂರಿಸಬೇಕು ಎಂದು ಪ್ರಶ್ನಿಸಿದರು. ನನಗೆ ಇಷ್ಟದ ಧರ್ಮ ಪಾಲಿಸಲು ಬೇರೆಯರನ್ನು ಯಾಕೆ ದ್ವೇಷಿಸಬೇಕು, ಯೋಗ್ಯತೆ ಇದ್ದರೆ ಆಹಾರವನ್ನು ಹಂಚಿತಿನ್ನೋಣ ಇಲ್ಲವಾದರೆ ಅವರ ಪಾಡಿಗೆ ಅವರು ಇದ್ದರೆ ಜೀವನ ಸಾರ್ಥಕ ಎಂದು ಅನೇಕ ವಿಚಾರಗಳ ಮೂಲಕ ವಿಶ್ಲೇಷಣೆ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಡಿ. ಹೆಚ್. ಪೂಜಾರ ಅವರು ಮಾತನಾಡಿ, ಧರ್ಮಗಳ ಮದ್ಯೆ ವಿಷಬೀಜ ಬಿತ್ತಿ ಆದಾನಿ ಅಂಬಾನಿಯವರನ್ನು ಬೆಳೆಸುವ ಹಿಟ್ಲರ್ ವಾದಿಗಳನ್ನು ಫ್ಯಾಸಿಸ್ಟಗಳನ್ನು ಮಟ್ಟ ಹಾಕಿ ಬರುವ ಲೋಕಸಭೆ ಚುನಾವಣೆಯಲ್ಲಿ ಸೋಲಿಸದಿದ್ದರೆ ಬಹುಶಃ ನನಗೆ ಈಗಿರುವ ಆತಂಕವೇ ಸತ್ಯವಾಗಿ ನಾವು ಈಗ ನಿಂತುಕೊಂಡು ಮಾತನಾಡುತ್ತಿರುವ ಶಕ್ತಿಯನ್ನೂ ಸಹ ಕಲೆದುಕೊಳ್ಳುತ್ತೇವೆ ಎಂದರು.
ಕೊಪ್ಪಳದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಚೈತನ್ಯಾನಂದ ಸ್ವಾಮೀಜಿ ಅವರು ಮಾತನಾಡಿ, ಎಲ್ಲ ಧರ್ಮಗಳು ಇರುವದು ಜನರನ್ನು ನೆಮ್ಮದಿಯಾಗಿ ಇಡುವದಕ್ಕೆ ಆದ್ದರಿಂದ ನಾವು ಮಹಾತ್ಮರನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿರುವದು ತಪ್ಪು, ಎಲ್ಲಾ ಧರ್ಮ ಗ್ರಂಥಗಳನ್ನುಸರಿಯಾಗಿ ಪರಿಪೂರ್ಣವಾಗಿ ಓದಬೇಕಿದೆ, ಒಂದೇ ಧರ್ಮ ಆಚರಿಸುವ ದೇಶಗಳು ಪರಸ್ಪರ ಯುದ್ಧ ಮಾಡುತ್ತಿರುವದನ್ನು ನೋಡಿದರೆ ಕೇವಲ ಅಲ್ಲಿ ಸ್ವಾರ್ಥವಿದೆ ಎಂಬುದು ಸ್ಪಷ್ಟ ಎಂದು ಹೇಳಿದರು.

Get real time updates directly on you device, subscribe now.

Comments are closed.

error: Content is protected !!