ಕೊಪ್ಪಳ ಸಾಮೂಹಿಕ ವಿವಾಹಗಳಿಗೆ ಜೋಡಿಗಳ ಹೆಸರು ನೊಂದಾಯಿಸಲು ಮನವಿ

Get real time updates directly on you device, subscribe now.

ಕೊಪ್ಪಳ ನಗರದ ಸರದಾರಗಲ್ಲಿಯ ಮುಸ್ಲಿಮ್ ಪಂಚ ಕಮೀಟಿಯ ಪರವಾಗಿ ದಿನಾಂಕ: 05 ನೇ ನವೆಂಬರ್ 2023 ರವಿವಾರ ಮುಂಜಾನೆ 11.00 ಘಂ.ಗೆ ಹಜರತ್ ಮಹಬೂಬ ಸುಲ್ತಾನ (ರ.ಅ.) ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಸತತವಾಗಿ ಹತ್ತೊಂಭತ್ತನೇ ವರ್ಷದ ಬಡ ಮುಸ್ಲಿಮ್ ಜೋಡಿಗಳ ಸಾಮೂಹಿಕ ಮದುವೆಗಳ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ನೆರವೇರಿಸಲಾಗುವದು. ಯಾವತ್ತೂ ಮುಸ್ಲಿಮ ಬಾಂಧವರು ತಮ್ಮ ಸಂಬಂಧಿಕರು ಅಥವಾ ಸ್ನೇಹಿತರ ಕಡೆಯಿಂದ ಜೋಡಿಗಳ ಬಗ್ಗೆ ಹೆಸರು ನೊಂದಾಯಿಸಲು ಇಚ್ಚಿಸಿದಲ್ಲಿ, ಕೊಪ್ಪಳ ನಗರದ ಸರದಾರ ಗಲ್ಲಿಯ ಮುಸ್ಲಿಂ, ಪಂಚ ಕಮೀಟಿಯ ಪದಾಧಿಕಾರಿಗಳಾದ (1) ಖಾದರಸಾಬ ಕುದ್ರಿಮೋತಿ (ಮೊ.9036967122), (2)ನಗರಸಭೆಯ ಮಾಜಿ ಸದಸ್ಯರಾದ ಮೆಹಬೂಬ ಪಾಷಾ ಮಾನ್ವಿ (ಮೊ. 9900576586), (3) ಮರ್ದಾನಸಾಬ ಲುಂಗಿ (9741581671) ಅಥವಾ (4) ಮೀರಾಸಾಬ ಬನ್ನಿಗೋಳ 7899336766), ಇವರನ್ನು ಖುದ್ದಾಗಿ ಸಂಪರ್ಕಿಸಿ ದಿನಾಂಕ 29-10-2023 ರ ಒಳಗಾಗಿ ವಿವರಗಳೊಂದಿಗೆ ಹೆಸರು ನೊಂದಾಯಿಸ ಬೇಕೆಂದುಅಧ್ಯಕ್ಷರು, ಮುಸ್ಲಿಮ್ ಪಂಚಕಮೀಟಿ ಸರದಾರ ಗಲ್ಲಿ ಕೊಪ್ಪಳ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!