ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ಹೆಚ್ಚಿನ ಅನುಕೂಲ- ಹಿಟ್ನಾಳ್

ಬಡವರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ-ಶಾಸಕ ಕೆ ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

ಕೊಪ್ಪಳ : ಶಾಸಕ ಕೆ ರಾಘವೇಂದ್ರ ಹಿಟ್ನಾಳ  ಗೊಂಡಬಾಳ ಜಿ. ಪಂ ವ್ಯಾಪ್ತಿಯ ಚುಕ್ಕನಕಲ್, ಮುದ್ದಾಬಳ್ಳಿ, ಹೊಸ ಗೊಂಡಬಾಳ, ಹಳೇ ಗೊಂಡಬಾಳ, ಹ್ಯಾಟಿ, ಮುಂಡರಗಿ,ಮೆಳ್ಳಿಕೇರಿ, ಹೊಸಹಳ್ಳಿ, ಬಹದ್ದೂರ್ ಬಂಡಿ ಹಾಗೂ ಹೂವಿನಾಳ ಗ್ರಾಮಗಳಲ್ಲಿ ಅಭಿನಂದನ ಹಾಗೂ ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡು ಜನರ ಅಹವಾಲು ಆಲಿಸಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅವರು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ಹೆಚ್ಚಿನ ಅನುಕೂಲ ಆಗಿದೆ ರಾಜ್ಯದಲ್ಲಿ ಬಡವರು ನೆಮ್ಮದಿಯಿಂದ ಜೀವನ ಮಾಡಲು ಸಹಕಾರಿ ಆಗಿದೆ. ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಹೀಗಾಗಲೇ ನಾಲ್ಕು ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎಂದರು.ಯುವನಿಧಿ ಯೋಜನೆಯನ್ನು ಡಿಸೆಂಬರ್ ತಿಂಗಳ ಅಂತ್ಯಕ್ಕೆ ಜಾರಿ ಮಾಡಲಾಗುವುದು ಎಂದರು.

103 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು:
ಕೊಪ್ಪಳ ತಾಲೂಕಿನ 103 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನ ಒದಗಿಸುವ 260 ಕೋಟಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಟೆಂಡರ್ ಹಂತದಲ್ಲಿದ್ದು ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಿ ತುಂಗಾಭದ್ರ ಹಿನ್ನಿರನ್ನು ಉಪಯೋಗಿಸಿಕೊಂಡು ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿ ಇದಾಗಿದೆ. ಪ್ರತಿ ಗ್ರಾಮದಲ್ಲಿ ಜನಸಂಖ್ಯೆ ಆಧಾರದಡಿಯಲ್ಲಿ OSD ಟ್ಯಾಂಕ್ ನಿರ್ಮಾಣ ಮಾಡಲಾಗುವುದು ಎಂದರು.

ಎಲ್ಲಾ ರಸ್ತೆಗಳ ಅಭಿವೃದ್ದಿಗೆ ಬದ್ಧ :

ಕ್ಷೇತ್ರದಲ್ಲಿ ಹದಗೆಟ್ಟಿರುವ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡಿ ಅನುಧಾನವನ್ನು ತಂದು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಹೀಗಾಗಲೇ ಹದಗೆಟ್ಟಿರುವ ಎಲ್ಲಾ ರಸ್ತೆಗಳ ಎಸ್ಟಿಮೇಟ್ ನ್ನು ತಯ್ಯಾರು ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಇಂದು   ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ನಗರದ ಡಾಲರ್ಸ್ ಕಾಲೋನಿ ಪಕ್ಕದಲ್ಲಿ 2.50 ಕೋಟಿ ಮೊತ್ತದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿ. ಪಂ ಮಾಜಿ ಅಧ್ಯಕ್ಷರಾದ ಎಸ್ ಬಿ ನಾಗರಾಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದ್ರಿ ಜಿ. ಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ, ಜಿಲ್ಲಾ ಎಸ್ ಸಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಗಾಳೆಪ್ಪ ಪೂಜಾರ್,ಮುಖಂಡರುಗಳಾದ ಶರಣಪ್ಪ ಸಜ್ಜನ,ಬಾಲಚಂದ್ರನ ಮುನಿರಬಾದ್, ಹನುಮರಡ್ಡಿ ಹಂಗನಕಟ್ಟಿ,ತೋಟಪ್ಪ ಕಾಮನೂರು,ಹನಮೇಶ ಹೊಸಳ್ಳಿ,ಹನಮಂತ ಕಿಡದಾಳ, ಸುರೇಶರೆಡ್ಡಿ ಮಾದಿನೂರು,ರಾಜೀವ್ ಮುದ್ದಾಬಳ್ಳಿ,ಆನಂದ ಹಾಲವರ್ತಿ,ಚಾಂದಪಾಷಾ ಕಿಲ್ಲೆದರ್, pld ಬ್ಯಾಂಕ್ ಅಧ್ಯಕ್ಷರಾದ ಗವಿಸಿದ್ದಪ್ಪ ಹುಳ್ಳಿ,ಪರದಾನಪ್ಪ ಹಂಡಿ,ತಾಲೂಕು ಪಂಚಾಯತ್ ಇಓ ಡುಂದೇಶ ತುರಾದಿ,ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ, ಜಿಲ್ಲಾ ಕಾಂಗ್ರೆಸ್ ವಕ್ತಾರ ಕುರ್ಗೋಡ್ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!