ಈ ನಾಡಹಬ್ಬ ಕೇವಲ ಹಬ್ಬವಲ್ಲ, ಇದು ನಮ್ಮ ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸ ಹಾಗೂ ಕಲೆಯ ಪ್ರತೀಕ: ಶಿವರಾಜ್ ಎಸ್. ತಂಗಡಗಿ

Get real time updates directly on you device, subscribe now.

ದಸರಾ ಹಬ್ಬದಲ್ಲಿ ಕೆಲವೇ ಕೆಲವು ಕಲಾವಿದರು ಅಥವಾ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಕೊಪ್ಪಳ ಜಿಲ್ಲೆಯ ಎಲ್ಲಾ ಸಂಘಟನೆಗಳು, ಸಾರ್ವಜನಿಕರು ಒಟ್ಟಾಗಿ ಸೇರಿ ಹಬ್ಬವನ್ನು ಯಶಸ್ವಿಗೊಳಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಹೇಳಿದರು.

ಅವರು ಮಾತನಾಡಿ ದಸರಾ ಹಬ್ಬವು ಕೇವಲ ಒಂದು ಆಚರಣೆಯಲ್ಲ, ಬದಲಾಗಿ ದುಷ್ಟಶಕ್ತಿಗಳ ನಿಗ್ರಹ ಹಾಗೂ ಶಕ್ತಿ ದೇವತೆಯಾದ ದುರ್ಗಾದೇವಿಯ ಧರ್ಮ ವಿಜಯದ ಸಂಕೇತವಾಗಿದೆ ಎಂದು ಅವರು ತಿಳಿಸಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕುಮ್ಮಟದುರ್ಗ ಹಾಗೂ ಹೇಮಕೂಟ ಪ್ರದೇಶದಲ್ಲಿ ಗಂಡುಗಲಿ ಕುಮಾರರಾಮನ ಆಡಳಿತಾವಧಿಯಲ್ಲಿ ಶಕ್ತಿ ಪ್ರದರ್ಶನ ಹಾಗೂ ವಿಜಯದ ಸಂಕೇತವಾಗಿ ದಸರಾ ಮತ್ತು ನವರಾತ್ರಿ ಆಚರಣೆಗಳಿಗೆ ಭದ್ರ ಅಡಿಪಾಯ ಹಾಕಿದರು ಎಂದು ಹೇಳಿದರು.

ಆನಂತರ ಆನೆಗುಂದಿ ಹಾಗೂ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ 300ಕ್ಕೂ ಹೆಚ್ಚು ವರ್ಷಗಳ ಕಾಲ ಆಚರಿಸಿಕೊಂಡು ಬರಲಾಯಿತು ಎಂದರು.

ವಿಜಯನಗರ ಸಾಮ್ರಾಜ್ಯದ ನಂತರ ಮೈಸೂರಿನ ಒಡೆಯರ್ ರಾಜವಂಶಸ್ಥರ ಕಾಲದಿಂದ ಇಂದಿನವರೆಗೆ ಅದೇ ಭವ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ದಸರಾ ಹಾಗೂ ಸ್ಥಳೀಯ ಜಾತ್ರೆಗಳು ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಂತಹ ಸೌಹಾರ್ದ ಆಚರಣೆಗಳು ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸುವ ಮತ್ತು ನಾಡಿನ ಒಗ್ಗಟ್ಟನ್ನು ಸಾರುವ ಜೀವಂತ ಉದಾಹರಣೆಗಳಾಗಿವೆ ಎಂದು ತಿಳಿಸಿದರು.

ಕನ್ನಡ ನಾಡಿನ ಕಲೆ, ಸಂಸ್ಕೃತಿ ಮತ್ತು ಸೈನಿಕ ಬಲವನ್ನು ಪ್ರದರ್ಶಿಸುವ ಈ ಮಹೋತ್ಸವವನ್ನು ಸಾರ್ವಜನಿಕರೆಲ್ಲರೂ ವಿಜೃಂಭಣೆಯಿಂದ ಆಚರಿಸಿ, ಪರಂಪರೆಯನ್ನು ಎತ್ತಿಹಿಡಿಯಬೇಕೆಂದು ಎಂದು ಹೇಳಿದರು.

Get real time updates directly on you device, subscribe now.

Comments are closed.

error: Content is protected !!