ಪ್ರಿಯಾಂಕ, ಬಸವರಾಜ, ಪೂರ್ಣಿಮಾ, ಕೃತಿ, ಸುಷ್ಮಾ, ವಿನುತಾ, ಮೇಘನಾ, ಜಗದೀಶ, ವೆನಲಾಗೆ ಬಾಪೂಜಿ ಪ್ರಬಂಧ ಬಹುಮಾನ

Get real time updates directly on you device, subscribe now.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸ್ಪರ್ಧೆ ಆಯೋಜನೆ

Breaking News ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯ ಜಿಲ್ಲಾಮಟ್ಟದ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಾದ ಪ್ರಿಯಾಂಕ ಬಿನ್ನಾಳ, ಬಸವರಾಜ ಪಿ., ಪೂರ್ಣಿಮಾ ಕಂದಕೂರ, ಕೃತಿ ಕರುಗಲ್, ಸುಷ್ಮಾ ಎಂ.ಶ್ಯಾಗೋಟಿ, ವಿನುತಾ ಎಚ್ ಹಳ್ಳಿ, ಮೇಘನಾ ಹೊಸಳ್ಳಿ, ಜಗದೀಶ ಎನ್., ವೆನಲಾ ಬಿ ಅವರು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಬಾಪೂಜಿ ಪ್ರಬಂಧ ಬಹುಮಾನ ಗಿಟ್ಟಿಸಿ ಸಾಧನೆ ತೋರಿದ್ದಾರೆ. ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಈ ವಿದ್ಯಾರ್ಥಿಗಳಿಗೆ ಅಕ್ಟೋಬರ್ 02ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆಯಲಿರುವ ಗಾಂಧೀ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೌಢಶಾಲೆ ವಿಭಾಗದಲ್ಲಿ : ಯಲಬುರ್ಗಾ ತಾಲೂಕಿನ ಬೇವೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕ ಬಿನ್ನಾಳ ಅವರು ಬರೆದ `ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ’ ಪ್ರಬಂಧಕ್ಕೆ ಪ್ರಥಮ ಸ್ಥಾನ, ಕೊಪ್ಪಳದ ಶಾರದಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಕೃತಿ ಕರುಗಲ್ ಅವರು ಬರೆದ `ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ’ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಹಾಗೂ ಟಣಕನಕಲ್ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಮೇಘನಾ ಹೊಸಳ್ಳಿ ಅವರು ಬರೆದ `ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ’ ಪ್ರಬಂಧಕ್ಕೆ ತೃತೀಯ ಸ್ಥಾನ ದೊರೆತಿದೆ.
ಪಿಯುಸಿ ವಿಭಾಗದಲ್ಲಿ : ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿ ಬಸವರಾಜ ಪಿ ಅವರು ಬರೆದ `ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ’ ವಿಷಯದ ಪ್ರಬಂಧಕ್ಕೆ ಪ್ರಥಮ, ಇದೆ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸುಷ್ಮಾ ಎಂ ಶ್ಯಾಗೋಟಿ ಅವರು ಬರೆದ ‘ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿಯವರ ಪ್ರಯೋಗಗಳು’ ವಿಷಯದ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಹಾಗೂ ಪಿ.ಎಸ್.ಎಂ.ಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಜಗದೀಶ ಎನ್ ಅವರು ಬರೆದ `ನನ್ನ ಬದುಕಿನಲ್ಲಿ ಗಾಂಧೀಜಿಯ ತತ್ವಗಳನ್ನು ಅಳವಡಿಸುವ ಬಗೆ’ ವಿಷಯದ ಪ್ರಬಂಧಕ್ಕೆ ತೃತೀಯ ಸ್ಥಾನ ಲಭಿಸಿದೆ.
ಪದವಿ-ಸ್ನಾತಕೋತ್ತರ ಪದವಿ ವಿಭಾಗದಲ್ಲಿ: `ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ’ ವಿಷಯದ ಮೇಲೆ ಪ್ರಬಂಧ ಬರೆದ ಕೊಪ್ಪಳದ ಕೆ.ಎಸ್. ಕಾಲೇಜಿನ ಪೂರ್ಣಿಮಾ ಕಂದಕೂರ, ಶಾರದಮ್ಮ ವಿ ಕೊತಬಾಳ ಬಿಬಿಎ ಬಿಸಿಎ ಬಿಕಾಂ ಕಾಲೇಜಿನ ವಿನುತಾ ಎಚ್ ಹಳ್ಳಿ, ಗಂಗಾವತಿಯ ಟಿಎಂಎಇ ಸೊಸೈಟಿ ಆಫ್ ಎಜುಕೇಶನ್ ಸಂಸ್ಥೆಯ ವಿದ್ಯಾರ್ಥಿನಿ ವೆನ್ನಲಾ ಬಿ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಿಟ್ಟಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!