ಡಿಜಿಟಲ್ ಮೀರಿ ಸಿಟಿಜನ್ ಮೀಡಿಯಾ ಮುನ್ನೆಲೆ; ಎಐಗೂ ಮಾಧ್ಯಮ ಕ್ಷೇತ್ರದಲ್ಲಿ ಮಹತ್ವದ ಪಾತ್ರ : ಸಿಪಿಐ ಡಿ. ಸುರೇಶ್

0

Get real time updates directly on you device, subscribe now.

 

ಪತ್ರಕರ್ತರು ಆರೋಗ್ಯದತ್ತವೂ ಗಮನ ಕೊಡಲಿ- ಗವಿಸಿದ್ದಪ್ಪ ಹೊಸಮನಿ

ತಂತ್ರಜ್ಞಾನ ಬದಲಾವಣೆಗೆ ತಕ್ಕಂತೆ ಮಾಧ್ಯಮವೂ ರೂಪಾಂತರ

ಕೊಪ್ಪಳ ಸೆ,24: ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದ್ದು, ಡಿಜಿಟಲ್ ಮಾಧ್ಯಮವನ್ನು ಮೀರಿ ಇದೀಗ ‘ಸಿಟಿಜನ್ ಮೀಡಿಯಾ’ ಮುನ್ನೆಲೆಗೆ ಬಂದಿದೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯ ಸಿಪಿಐ ಡಿ. ಸುರೇಶ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಹಿಂದೆ ಸುದ್ದಿಗಳು ಮರುದಿನ ಪತ್ರಿಕೆಗಳ ಮೂಲಕ ಜನರನ್ನು ತಲುಪುತ್ತಿದ್ದವು. ಡಿಜಿಟಲ್ ಮಾಧ್ಯಮದ ಬೆಳವಣಿಗೆಯಿಂದ ಕೆಲವೇ ಗಂಟೆಗಳಲ್ಲಿ ಮಾಹಿತಿ ಜನರಿಗೆ ತಲುಪುವಂತಾಯಿತು. ಇದೀಗ ಸಾರ್ವಜನಿಕರೇ ತಮ್ಮ ಸಮಸ್ಯೆ ಹಾಗೂ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣ ಹಂಚಿಕೊಳ್ಳುವ ಮೂಲಕ ಸಿಟಿಜನ್ ಮೀಡಿಯಾ ಪ್ರಭಾವ ಹೆಚ್ಚಾಗಿದೆ. ಇದರೊಂದಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವೂ ಮಾಧ್ಯಮ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಯಸಿದೆ ಎಂದರು.

 

 

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಜಿಲ್ಲೆಯ ಪತ್ರಕರ್ತರು ಸ್ಥಳೀಯವಾಗಿ ಪತ್ರಿಕೆಗಳನ್ನು ಆರಂಭಿಸಿದರೆ ಇಲಾಖೆಯಿಂದ ದೊರೆಯಬಹುದಾದ ಸಹಕಾರ ಹಾಗೂ ಸೌಲಭ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಒದಗಿಸಲು ಶ್ರಮಿಸುವುದಾಗಿ  ಇಂದಿನ ಒತ್ತಡದ ಜೀವನದಲ್ಲಿ ಬೆಳಗಿನಿಂದ ರಾತ್ರಿಯವರೆಗೆ ಕೆಲಸ ಮಾಡಲೇಬೇಕಾಗುತ್ತದೆ. ಆದರೆ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೂ ಗಮನ ಕೊಡಬೆಕು ಎಂದು ಹೇಳಿದರು

 

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ವಹಿಸಿದ್ದರು. ಸಂಘದ ಹಿರಿಯ ಪತ್ರಕರ್ತರಾದ ಎಂ.ಎಂ. ದೊಡ್ಡಮನಿರವರು ಪ್ರಾಸ್ತವಿಕ ನುಡಿಗಳನ್ನು ಹೇಳಿದರು. ಕೇಂದ್ರ ಸ್ಥಾನದ ಉಪಾಧ್ಯಕ್ಷರಾದ ರಾಜು ಬಿ.ಆರ್. ಸ್ವಾಗತಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೈ. ನಾಗರಾಜ್ ರವರು ನಿರೂಪಿಸಿದರು. ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ವೀರಣ್ಣ ಕಳ್ಳಿಮನಿಯವರು ವಂದಿಸಿದರು. ಇದೇ ವೇಳೆ ನಗರ ಠಾಣೆ ಸಿಪಿಐ ಡಿ. ಸುರೇಶ್ ಹಾಗೂ ಗವಿಸಿದ್ದಪ್ಪ ಹೊಸಮನಿ ರವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಂ.ಸಾಧಿಕ್ ಅಲಿ, ಎಚ್.ಎಸ್. ಹರೀಶ್, ಜಿ.ಎಸ್. ಗೋನಾಳ, ಜಿಲ್ಲಾ ಖಜಾಂಚಿ ಪಕೀರಪ್ಪ ಗೋಟೂರು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶಿವಕುಮಾರ್ ಹಿರೇಮಠ, ಬ್ರಹ್ಮಾನಂದ ಬಡಿಗೇರ್ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!