ಜೆಡಿಎಸ್ ಪಕ್ಷದ ಸರಣಿ ಹೋರಾಟಕ್ಕೆ ಮಣಿದ ಸರಕಾರ – ಸಿ ವಿ ಚಂದ್ರಶೇಖರ

0

Get real time updates directly on you device, subscribe now.

ಜೆಡಿಎಸ್ ಪಕ್ಷದ ಸರಣಿ ಹೋರಾಟಕ್ಕೆ ಸರಕಾರ ಮಣಿದಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು

ಕೊಪ್ಪಳ ಜನತೆಯ ಬೇಡಿಕೆಯನ್ನು ತಾರ್ಕಿಕ ಅಂತ್ಯಕ್ಕೆ ಜೆಡಿಎಸ್ ಕೊಂಡೊಯ್ದಿದೆ ಎಂದು ಹೇಳಿದ್ದಾರೆ.

11-5-2026: ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು
ಸರಿಯಾದ ಸಮಯದಲ್ಲಿ ಪೂರೈಸಲು ಮಾಧ್ಯಮದ ಮೂಲಕ ಸರಕಾರಕ್ಕೆ ಆಗ್ರಹ.

18-5-2026: ಅಕಾಲಿಕ ಮಳೆಗೆ ಹಾಳಾದ ಕೃಷಿ ಜಮೀನುಗಳಿಗೆ ಭೇಟಿ. ಪ್ರತಿ ಎಕರೆಗೆ 5 ಲಕ್ಷ ರೂಪಾಯಿ ಪರಿಹಾರಕ್ಕೆ ಒತ್ತಾಯ.

27-7-2026: ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಬರ ಅಧ್ಯಯನ ಪ್ರವಾಸ, ಸಮೀಕ್ಷೆ.

29-7-2026: ಕೊಪ್ಪಳ ಬರಪೀಡಿತ ಎಂದು ಘೋಷಿಸಬೇಕು, ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಹಾಗೂ ಪ್ರತಿ ಎಕರೆಗೆ ರೂ.30,000 ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿ
ಕೊಪ್ಪಳದ ಬನ್ನಿಕಟ್ಟಿಯಿಂದ ಡಿಸಿ ಆಫೀಸ್ ತನಕ ಪಾದಯಾತ್ರೆ, ಮನವಿ ಪತ್ರ ಸಲ್ಲಿಕೆ.

27-8-2026: ಬರ ಪೀಡಿತ ತಾಲೂಕುಗಳ ಪಟ್ಟಿ ಘೋಷಣೆ. ಕೊಪ್ಪಳವನ್ನು ನಿರ್ಲಕ್ಷಿಸಿದ ಕಾಂಗ್ರೆಸ್.

15-9-26-16-9-26: ಕೊಪ್ಪಳ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಎರಡು ದಿನಗಳ ಕಾಲ
50 ಕಿಲೋ ಮೀಟರ್ ಪಾದಯಾತ್ರೆ. ಬರಪೀಡಿತ ಪಟ್ಟಿಗೆ ಕೊಪ್ಪಳ ಸೇರಲೇಬೇಕು ಎಂಬ ಒತ್ತಾಯ.

27-9-26: ಜೆಡಿಎಸ್ ಒತ್ತಾಯಕ್ಕೆ ಮಣಿದು ಕೊಪ್ಪಳ ಬರ ಪೀಡಿತ ಎಂದು ಒಪ್ಪಿಕೊಂಡ ಸರ್ಕಾರ.

22-9-26: ಜೆಡಿಎಸ್ ಹೋರಾಟಕ್ಕೆ ಸಂದ ಜಯ. ಬರ ಪೀಡಿತ ತಾಲೂಕುಗಳ ಪಟ್ಟಿಗೆ ಕೊಪ್ಪಳ ಸೇರ್ಪಡೆ ಯಾಗಿದೆ ಎಂದು ಹೇಳಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!