ಲೋಕ ಅದಾಲತ್‌ನಲ್ಲಿ 2,802 ಪ್ರಕರಣಗಳ ಇತ್ಯರ್ಥ

0

Get real time updates directly on you device, subscribe now.

): ಕೊಪ್ಪಳ ಜಿಲ್ಲೆಯಲ್ಲಿ (ಸೆ. 19ರಂದು) ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 4,834 ಪ್ರಕರಣಗಳ ಪೈಕಿ 2,802 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು.
ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ತೆರಿಗೆ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್, ಜನನ–ಮರಣ, ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಸೇರಿದಂತೆ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಈ ಸಂದರ್ಭದಲ್ಲಿ ಐದು ದಂಪತಿಗಳು ತಮ್ಮ ಮನಸ್ತಾಪಗಳನ್ನು ಬದಿಗೊತ್ತಿ, ಮಧ್ಯಸ್ಥರು, ವಕೀಲರು ಹಾಗೂ ನ್ಯಾಯಾಧೀಶರ ಸೂಕ್ತ ಮಾರ್ಗದರ್ಶನದ ಮೇರೆಗೆ ಮತ್ತೆ ಒಟ್ಟಾಗಿ ಜೀವನ ನಡೆಸಲು ಒಪ್ಪಿಕೊಂಡರು.
ಪೂರ್ವ ದಾವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 49,160 ಪ್ರಕರಣಗಳ ಪೈಕಿ 43,374 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥಪಡಿಸಲಾದ ಪ್ರಕರಣಗಳ ಒಟ್ಟು ಮೌಲ್ಯ ರೂ. 2,63,88,308 ಆಗಿದೆ. ಒಟ್ಟಾರೆ ಒಂದೇ ದಿನದಲ್ಲಿ 53,994 ಪ್ರಕರಣಗಳ ಪೈಕಿ 46,176 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥಪಡಿಸಲಾದ ಒಟ್ಟು ಮೊತ್ತದ ಮೌಲ್ಯ ರೂ. 26,64,90,739 ಆಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ತಿಳಿಸಿದೆ.
ದಾಖಲೆ ಪ್ರಮಾಣದಲ್ಲಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ಸಹಕರಿಸಿದ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಹಾಗೂ ಮಧ್ಯಸ್ಥಿಕೆ ವಕೀಲರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕೃತಜ್ಞತೆ ಸಲ್ಲಿಸಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!