ಅಕ್ರಮ ಮದ್ಯ -ಕರವೇಯಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ, ಪ್ರತಿಭಟನೆ Illegal Liquor – Karave protest
ಕೊಪ್ಪಳ, ಮೇ.೧೮: ನಗರ ಮತ್ತು ಗ್ರಾಮೀಣ ಭಾಗದಲ್ಲಿ ತುರ್ತು ಔಷಧಿಗಳು, ರೈತರ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಸಿಗದೇ ಹೋದರೂ, ಎಲ್ಲಾ ಕಡೆಗಳಲ್ಲಿ ಅಕ್ರಮದ ಮದ್ಯ ಸರಬರಾಜುದಾರರು ಮತ್ತು ಮಾರಾಟಗಾರರು ರಾಜಾರೋಷವಾಗಿ ನಾಯಿಕೊಡೆಗಳಂತೆ ಮೊಳಕೆಯೊಡೆದು ಯುವ ಸಮೂಹ, ಕೃಷಿ ಕಾರ್ಮಿಕರು, ದಿನಗೂಲಿಗಳು ಹಾಗೂ ವಯೋವೃದ್ಧರ ಬದುಕನ್ನು ನರಕಕ್ಕೆ ತಳುತ್ತಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಆರೋಪಿಸಿದರು.
ಅವರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮದ್ಯವನ್ನು ಅಕ್ರಮವಾಗಿ ರಪ್ತು/ಆಮದು ಮಾಡುವುದು, ಹಾಗೂ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಸಿಎಲ್-೨ ವ್ಯಾಪಾರ ಮಳಿಗೆಯಲ್ಲಿ ಅನಧೀಕೃತವಾಗಿ ಹೆಚ್ಚಿನ ಬೆಲೆಗೆ ಮದ್ಯ ಸರಬರಾಜು ಮಾಡುತ್ತಿರುವ ಅಂಗಡಿ ಮಾಲಕರ ಮೇಲೆ ಕಾನೂನು ಕ್ರಮ ಕೈಗೊಂಡು ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸೋಮವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಕೊಪ್ಪಳ ವಲಯದ ಅಬಕಾರಿ ನಿರೀಕ್ಷಕರಿಗೆ ಹಾಗೂ ಅಬಕಾರಿ ಉಪ ಆಯುಕ್ತರು ಮನವಿ ಪತ್ರ ಸಲ್ಲಿಸಿದ್ದು, ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣಿಕೆ ನಡೆಯುತ್ತಿದ್ದು, ಜಿಲ್ಲಾ ಮತ್ತು ತಾಲೂಕ ಕೇಂದ್ರಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸಿಎಲ್-೨ ಸನ್ನದ್ದುದಾರರ ಎಲ್ಲಾ ಅಂಗಡಿಗಳಲ್ಲಿ ಕೌಂಟರ್‌ನಿAದ ಗ್ರಾಹಕರ ಟೇಬಲ್‌ಗಳಿಗೆ ರಾಜಾರೋಷವಾಗಿ ಮದ್ಯ ಸರಬರಾಜು ಮಾಡಿತ್ತಿರುವುದನ್ನು ಗ್ರಾಹಕರು ಕಳುಹಿಸಿರುವ ಹಲವು ವಿಡಿಯೋ ಸಮೇತವಾಗಿ ವಿವರವಾಗಿ ತೋರಿಸಿ ಮಾತನಾಡಿ ಕರ್ನಾಟಕ ಅಬಕಾರಿ ನಿಯಮಗಳು, ೧೯೬೮ರ ನಿಯಮ ೫(೨)ರ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದು, ಈ ಅಂಗಡಿಗಳು ಚಿಲ್ಲರೆ ಮಾರಾಟದ ಪರವಾನಿಗಿಯನ್ನು ದುರುಪಯೋಗಪಡಿಸಿಕೊಂಡು, ಅಬಕಾರಿ ಶುಲ್ಕವನ್ನು ಪಾವತಿಸದೇ ಕಾನೂನುಬದ್ಧ ಮಾನದಂಡಗಳನ್ನು ಅನುಸರಿಸದೇ ಯಾವುದೇ ಮದ್ಯದ ರೇಟ್ ಬೋರ್ಡ ಹಾಕದೇ ಸಿಎಲ್-೯ ಬಾರ್ ಮತ್ತು ರೆಸ್ಟೋರೆಂಟ್‌ಳAತೆ ಅನಧಿಕೃತವಾಗಿ ವರ್ತಿಸುತ್ತಿವೆ. ಜನವಸತಿ ಪ್ರದೇಶವಿರುವುದರಿಂದ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವಯೋಸಹಜ ಕಾಯಿಲೆ ಹೊಂದಿರುವವರಿಗೆ ಕಿರಿಕಿರಿ ಉಂಟುಮಾಡಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ ಎಂದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೋ.ಪಾಟೀಲ ಮಾತನಾಡಿ ಅಕ್ರಮದ ಬಗ್ಗೆ ಕ್ರಮ ಕೈಗೊಂಡು ತಪ್ಪಿತಸ್ಥರ ಪರವಾನಿಗೆಯನ್ನು ಅಮಾನ್ಯಗೊಳಿಸಿ ದಂಡ ವಸೂಲಾತಿ ಮಾಡಬೇಕು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳ ದೂರುಗಳಿಗೆ ಸ್ಪಂದಿಸದ ಅಧಿಕಾರಿಗಳಿಗೆ ಶಿಸ್ತುಕ್ರಮ ಕೈಗೊಂಡು ಕೊಪ್ಪಳ ಜಿಲ್ಲೆಯನ್ನು ಅಕ್ರಮ ಮದ್ಯ ಮುಕ್ತವನ್ನಾಗಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಗವಿಸಿದ್ದಪ್ಪ ಚಕ್ಕಡಿ, ಜಿಲ್ಲಾ ಮಹಿಳಾಘಟಕ ಅಧ್ಯಕ್ಷೆ ಭುವನೇಶ್ವರಿ ಮೊಟಗಿ, ಯಲಬುರ್ಗಾ ತಾ. ಮಹಿಳಾಧ್ಯಕ್ಷೆ ಕಾವ್ಯ ಹುಂಬಿ, ಜಿಲ್ಲಾ ರೈತಘಟಕ ಅಧ್ಯಕ್ಷ ಆರ್.ಜಿ ತಿಮ್ಮನಗೌಡ, ಜಿಲ್ಲಾ ಕಾರ್ಮಿಕಘಟಕ ಅಧ್ಯಕ್ಷ ಮಹೇಶ ನಾಯಕ ಅಗಳಕೇರಾ, ಕೊಪ್ಪಳ ತಾಲೂಕಾಧುಕ್ಷ ಹುಸೇನಬಾಶಾ ಮಣ್ಣೂರು, ಕನಕಗಿರಿ ತಾಲೂಕಾಧ್ಯಕ್ಷ ಹರೀಶ ಪೂಜಾರ, ಗಂಗಾವತಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗಿಣಿಮೋತಿ, ಕುಕನೂರು ತಾಲೂಕಾಧ್ಯಕ್ಷ ರಮೇಶ ಚಂಡೂರು, ಕೊಪ್ಪಳ ತಾ.ಉಪಾಧ್ಯಕ್ಷ ಶ್ರೀಧರ ಭೂತಣ್ಣವರ, ಭಾಗ್ಯನಗರ ಅಧ್ಯಕ್ಷ ವಿರೇಶ ಮುಂಡಾಸದ, ನಗರಘಟಕ ಅಧ್ಯಕ್ಷ ಸಾಯಿಕುಮಾರ ಅಳ್ಳಳ್ಳಿ, ಕನಕಗಿರಿ ನಗರಘಟಕ ಅಧ್ಯಕ್ಷ ಬಸವರಾಜ ಕೋರಿ, ಸಾ.ಜಾ ಸಂಚಾಲಕ ಹನುಮೇಶ ಕಟ್ಟಿಮನಿ, ಗಂಗಾವತಿ ತಾ.ಪ್ರ. ಕಾರ್ಯದರ್ಶಿ ಮಂಜುನಾಥ ಸೋಮಸಾಗರ, ಆಟೋ ಚಾಲಕಘಟಕ ಅಧ್ಯಕ್ಷ ದ್ಯಾಮೇಶ ಪೂಜಾರ, ಕರವೇ ಮುಖಂಡರಾದ ಶಂಕರಗೌಡ ಪೋ.ಪಾಟೀಲ, ಮಂಜಪ್ಪ ಹಳ್ಳಿಕೇರಿ, ಆನಂದ ಕೊಳ್ಳಿ, ಹನುಮಂತ ಪೂಜಾರ, ಕುಮಾರಸ್ವಾಮಿ ನಾಗರಳ್ಳಿ, ಶಿವು ಹಲಗೇರಿ, ಗವಿಸಿದ್ದಪ್ಪ ಗಿಣಗೇರಿ, ಗಂಗಯ್ಯ ಚಿಕ್ಕಮಠ, ರಮೇಶ ಪೂಜಾರ, ಪ್ರವೀಣಕುಮಾರ, ಗುರು ಗಿಣಿಮೋತಿ, ಬಸವರಾಜ ಮಲ್ಲಾಪುರ, ಸುನೀಲ ಸಾವಜಿ, ವಿಜಯಲಕ್ಷಿö್ಮÃ ಹೂಗಾರ ಹಾಗೂ ಅನೇಕರು ಭಾಗವಹಿಸಿದ್ದರು.

runfunc: 0; algolist: 0;
multi-frame: 0;
brp_mask:0;
brp_del_th:null;
brp_del_sen:null;
motionR: 0;
delta:null;
module: photo;hw-remosaic: false;touch: (-1.0, -1.0);sceneMode: 13107200;cct_value: 0;AI_Scene: (-1, -1);aec_lux: 84.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 47;
Illegal Liquor – Karave protest
Koppala, May 18: Despite the lack of emergency medicines, seeds and fertilizers in urban and rural areas, illegal liquor suppliers and sellers are sprouting like raging dogs everywhere, making the lives of the youth, agricultural workers, daily wage earners and the elderly a living hell, alleged Karave District President B. Girishananda Gyanasundara.
He demanded that legal action be taken against the shopkeepers who are illegally exporting/importing liquor in urban and rural areas and illegally supplying liquor at high prices in CL-2 shops, flouting government rules, and demanding that their licenses be cancelled.
The Koppal zone excise inspector and the excise deputy commissioner have submitted a petition, stating that illegal sale and transportation of liquor is taking place across the district, and that many CL-2 franchisees operating in the district and taluka headquarters have been supplying liquor to the tables of customers at the counters in a state of rage, along with several videos sent by customers. They have spoken in detail and said that the Karnataka Excise Rules, Rule 5(2) of 1968 are being completely violated. These shops are misusing the retail license, not paying excise duty, not following the legal norms, not putting up any liquor rate boards, and are acting illegally as CL-9 bars and restaurants. Since it is a populated area, it is causing inconvenience to women, children and people with age-related diseases, creating an atmosphere of unrest, he said.
Karave State Organizing Secretary Basanagouda Po. Patil said that action should be taken against the illegality, the licenses of the guilty should be invalidated and fines should be collected, and disciplinary action should be taken against the officials who did not respond to the complaints of public organizations and Koppal district should be made free from illegal liquor. On this occasion, District General Coordinator Gavisiddappa Chakkadi, District Women’s Union President Bhuvaneshwari Motagi, Yelaburga Ta. Women’s President Kavya Humbi, District Farmers’ Union President R.G. Thimmanagouda, District Workers’ Union President Mahesh Nayak Agalakera, Koppal Taluka President Hussain Basha Mannur, Kanakagiri Taluka President Harish Poojar, Gangavathi Taluka President Mallikarjuna Ginimothi, Kukanur Taluka President Ramesh Chandur, Koppal Taluka Vice President Sridhar Bhutannavar, Bhagyanagar President Viresh Mundasada, Urban Unit President Saikumar Allalli, Kanakagiri Urban Unit President Basavaraj Kori, SAJ Convener Hanumesh Kattimani, Gangavathi Taluka President Secretary Manjunath Somasagar, Auto Drivers Association President Dayamesh Poojara, Karave leaders Shankar Gowda Po. Patil, Manjappa Hallikeri, Anand Kolli, Hanumantha Poojara, Kumaraswamy Nagaralli, Shivu Halageri, Gavisiddappa Ginageri, Gangaiah Chikkamath, Ramesh Poojara, Praveen Kumar, Guru Ginimothi, Basavaraj Mallapur, Sunil Savaj, Vijayalakshim Hugara and many others participated.