ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಸ್ವಾಗತಾರ್ಹ : ರಾಧಾ ಛಲವಾದಿ

Get real time updates directly on you device, subscribe now.


ಕೊಪ್ಪಳ : ಭಾರತದ ನೂತನ ಸಂಸತ್ತಿನಲ್ಲಿ ಕಲಾಪದ ಮೊದಲ ದಿನ ಮಹಿಳಾ ಮೀಸಲಾತಿಗೆ ಲೋಕಸಭೆ ಒಪ್ಪಿಗೆ ನೀಡಿರುವುದನ್ನು ಸ್ವಾಗತಾರ್ಹ ಕ್ರಮವಾಗಿದೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಣಿ ಸದಸ್ಯೆ ಹಾಗೂ ನಗರಸಭೆ ನಾಮನಿರ್ದೇಶನ ಮಾಜಿ ಸದಸ್ಯೆ ಶ್ರೀಮತಿ ರಾಧಾ ಕನಕಮೂರ್ತಿ ಛಲವಾದಿ ತಿಳಿಸಿದ್ದಾರೆ.
ಕೇಂದ್ರ ಸರಕಾರ ಕೈಗೊಂಡಿರುವ ಈ ಮಹತ್ತರ ನಿರ್ಧಾರದಿಂದ ದೇಶದ ಮಹಿಳೆಯರಲ್ಲಿ ಸಂತಸ, ಸಂಭ್ರಮ ಮನೆ ಮಾಡುವಂತೆ ಮಾಡಿದೆ, ಮಹಿಳೆಯರು ಸಂಸತ್ತು, ಶಾಸನಸಭೆ ಪ್ರವೇಶದ ಕನಸು ಇನ್ನು ಮುಂದೆ ನನಸಾಗಲಿದ್ದು ಇದೊಂದು ಐತಿಹಾಸಿಕ ನಿರ್ಧಾರವಾಗಿದೆ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮಸೂದೆ ಕೊನೆಗೂ ಮಂಡನೆಯಾಗಿ ಸಂಸತ್ತಿನ ಒಪ್ಪಿಗೆ ಪಡೆದಿರುವುದು ಮುಂದೆ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಶಕ್ತಿ ದೊರಕಲಿದೆ, ಮಹಿಳೆಯರಿಗೆ ರಾಜಕೀಯ ಶೇ.೩೩% ಮೀಸಲಾತಿ ನೀಡಿರುವುದು ಶ್ಲಾಘನೀಯ, ಪ್ರಸ್ತುತ ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ ೮೨ ಇದೆ. ಈ ಕಾಯ್ದೆ ಜಾರಿಯಾದರೆ ಲೋಕಸಭೆಯಲ್ಲಿ ಮಹಿಳಾ ಸ್ಥಾನಗಳ ಸಂಖ್ಯೆ ೧೮೧ಕ್ಕೆ ಏರಲಿದೆ. ರಾಜ್ಯ ವಿಧಾನಸಭೆಯಲ್ಲಿ ೭೦ಕ್ಕೂ ಅಧಿಕ ಸ್ಥಾನ ಮಹಿಳೆಯರಿಗೆ ಸಿಗಲಿವೆ ಈ ಬಿಲ್ ಮಂಡಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಮಹಿಳೆಯರು ಅಭಿನಂದಿಸುವುದಾಗಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: