ಅರಣ್ಯ ಭೂಮಿ ಸಂರಕ್ಷಣೆಗೆ ಡಿಎಸ್ ಎಸ್ ಮನವಿ
ಕೊಪ್ಪಳ ತಾಲ್ಲೂಕಿನ ಇಂದರಗಿ ಗ್ರಾಮದ ಆದಿ ಬಸವಣ್ಣ ಏರಿಯಾದ ಸರ್ವೇ ನಂ : 40 ಪ್ರಕಾರ ಅರಣ್ಯ ಭೂಮಿಯ ಲೂಟಿ ನಡೆಯುತ್ತಿದ್ದೆ ಇದನ್ನು ರಕ್ಷಿಸಬೇಕು ಎಂದು ಡಿಎಸ್ ಎಸ್ ಮುಖಂಡರು ಮನವಿ ಮಾಡಿದ್ದಾರೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಹನುಮೇಶ ಇಂದರಗಿ ಇಂದರಗಿ ಗ್ರಾಮದ ಅರಣ್ಯ ಭೂಮಿ ಸಾಗುವಳಿಗಾಗಿ ಮರಗಳನ್ನು ನಾಶ ಮರಣಹೋಮ ನಡೆಯುತ್ತಿದೆ. ರಾತ್ರಿ ಹಗಲು ಆನ್ನೇದ ಮರಗಳನ್ನು ಕಡಿಯುತ್ತಿದ್ದಾರೆ. ಸ್ವಾಭಾವಿಕವಾಗಿ ಬೆಳೆದ ಮರಗಳಾದ ತುಗ್ಗಿ, ನೀಲಗಿರಿ, ಬೆಟ್ಟ, ಆಲಗತ್ತಿ ಇನ್ನು ಹಲವರು ಮಿಶ್ರಜಾತಿ ಮರಗಳನ್ನು ಕಡಿದು ಸುಟ್ಟು ಹಾಕುತ್ತಿದ್ದಾರೆ, ರಾತ್ರಿಯೋ ರಾತ್ರಿ ಮರಗಳ್ಳರು ಲೋಡುಗಟೆಲೆ ಸಾಗಿಸುತ್ತಿದ್ದಾರೆ. ಅರಣ್ಯ ಸಿಬ್ಬಂದಿ ವರ್ಗದವರಾಗಲಿ ಮತ್ತು ಅಧಿಕಾರಿಗಳಾಲಿ ಯಾರು ಇತ್ತ ಕಡೆ ಗಮನ ಹರಿಸುತ್ತಿಲ್ಲ, ದಿನ ನಿತ್ಯ ಕಣ್ಣು ಮುಂದೆ ಕಟಾವು ನಡೆಯುತ್ತಿದೆ, ಅಧಿಕಾರಿಗಳಿಗೆ ಆ ಏರಿಯಾ ಪರಿಚಯವೇವಿಲ್ಲ. ಸುಮಾರು ನಾಲ್ಕು ಸಾವಿರ ಎಕರೆ ಅರಣ್ಯ ಪ್ರದೇಶವನ್ನು (ಇದ್ದು) ಹೊಂದಿದ್ದು, ಈ ಕಾಡಿನಲ್ಲಿ ವಾಸಿಸುವ ವನ್ಯ ಮೃಗಗಳಾದ ಕರಡಿ, ಚಿರತೆ, ನರಿ, ತೋಳ, ಮೂಲ, ಹಲವಾರು ಜಾತಿಯ ಪ್ರಾಣಿಗಳು ಇದ್ದು, ಇವುಗಳಿಗೆ ವಾಸಿಸಲು ತುಂಬಾ ತೊಂದರೆಯಾಗುತ್ತದೆ. ಹಲವಾರು ರೀತಿಯ ಪಕ್ಷಿಗಳು ವಾಸಿಸುತ್ತವೆ. ಇವುಗಳನ್ನು ಮತ್ತು ಅರಣ್ಯ ರಕ್ಷಣೆಯಾಗಬೇಕು. ಸಾಗುವಳಿ ನೆಪದಲ್ಲಿ ಭೂಮಿಯನ್ನು ಕಂಬಳಿಸುತ್ತಾರೆ. ಇಂತಹ ಕೃತ್ಯಗಳಿಗೆ ತೊಡಗಿದವರನ್ನು ಕಾನೂನು ಕ್ರಮವನ್ನು ಕೈಗೊಳಬೇಕು, ಇಷ್ಟಕೇಲಾ ಅರಣ್ಯ ಅಧಿಕಾರಿಗಳ ನಿಲರ್ಕ್ಷವೇ ಕಾರಣ. ಆದ್ದರಿಂದ ಜರುರಾಗಿ ಅರಣ್ಯ ಒತ್ತುವರಿ ಭೂಮಿಯನ್ನು ತಮ್ಮ ಖಬ್ಬಾಕ್ಕೆ ತೆಗೆದುಕೊಂಡು ಗುಂಡಿ ತೆಗೆಸಿ ಸಸಿಗಳನ್ನು ಹಚ್ಚಬೇಕು (ಪ್ಲಾನಟೇಶನ ಮಾಡಬೇಕು), ಗ್ರಾಮದ ಅರಣ್ಯ ಭೂಮಿ ರಕ್ಷಣೆಯಾಗಬೇಕು ಗ್ರಾಮದ ಹಿತ ದೃಷ್ಟಿಯಿಂದ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Comments are closed.