ಕೊಪ್ಪಳ: ಕುಡಿಯುವ ನೀರಿನ ಸಮಸ್ಯೆಗೆ ಸಹಾಯವಾಣಿ ಆರಂಭ

0

Get real time updates directly on you device, subscribe now.

Koppal: Helpline launched for drinking water problems
ಕೊಪ್ಪಳ ಏಪ್ರಿಲ್ 17  : ಪ್ರಸಕ್ತ ಬೇಸಿಗೆ ಹಿನ್ನೆಯಲ್ಲಿ ಜಿಲ್ಲೆಯಲ್ಲಿನ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬೇಸಿಗೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವವಿರುವುದರಿAದ ಈ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯ 7 ತಾಲೂಕುಗಳಲ್ಲಿ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ದೂರುಗಳನ್ನು ಸ್ವೀಕರಿಸಲು ಎಲ್ಲಾ ತಾಲ್ಲೂಕು ಪಂಚಾಯತಿಗಳಲ್ಲಿ ಮತ್ತು ಜಿಲ್ಲಾ ಪಂಚಾಯತಿಯಲ್ಲಿ ಕುಡಿಯುವ ನೀರಿನ ಸಹಾಯವಾಣಿ” ತೆರೆಯಲಾಗಿರುತ್ತದೆ.
ಅದರಂತೆ ‎ಕೊಪ್ಪಳ ಜಿಲ್ಲಾ ಪಂಚಾಯತ್ ಸಹಾಯವಾಣಿ ಸಂಖ್ಯೆ: 08539-221207 & 7829658536, ಕೊಪ್ಪಳ ‎ತಾಲ್ಲೂಕು ಪಂಚಾಯತ್ ಸಹಾಯವಾಣಿ ಸಂಖ್ಯೆ: 9620410509 & 9902315311, ‎ಕುಷ್ಟಗಿ ತಾಲ್ಲೂಕು ಪಂಚಾಯತ್ ಸಹಾಯವಾಣಿ ಸಂಖ್ಯೆ: 7899986581, ಗಂಗಾವತಿ ತಾಲ್ಲೂಕು ಪಂಚಾಯತ್ ಸಹಾಯವಾಣಿ ಸಂಖ್ಯೆ: 6361940327 & 9036892963, ಕಾರಟಗಿ ತಾಲ್ಲೂಕು ಪಂಚಾಯತ್ ಸಹಾಯವಾಣಿ ಸಂಖ್ಯೆ: 9845213245 & 6362150339, ಕನಕಗಿರಿ ತಾಲ್ಲೂಕು ಪಂಚಾಯತ್ ಸಹಾಯವಾಣಿ ಸಂಖ್ಯೆ: 8073051234 & 90362205541, ಯಲಬುರ್ಗಾ ತಾಲ್ಲೂಕು ಪಂಚಾಯತ್ ಸಹಾಯವಾಣಿ ಸಂಖ್ಯೆ: 9620414476 & 7259562842 ಹಾಗೂ ಕುಕನೂರು ತಾಲ್ಲೂಕು ಪಂಚಾಯತ್ ಸಹಾಯವಾಣಿ ಸಂಖ್ಯೆ: 8296920386 ಆಗಿದ್ದು, ಆಯಾ ತಾಲ್ಲೂಕುಗಳ ಸಾರ್ವಜನಿಕರು ಸಹಾಯವಾಣಿ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದು.
‎ಮುಂದಿನ 3 ತಿಂಗಳುಗಳಲ್ಲಿ ಜಿಲ್ಲೆಯ 133 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರಬಹುದೆಂದು ಅಂದಾಜಿಸಲಾಗಿದ್ದು, ನೀರಿನ ಸಮಸ್ಯೆ ಉಂಟಾದಲ್ಲಿ ಖಾಸಗಿ ಬೋರ್ ವೆಲ್ ಹಾಗೂ ಖಾಸಗಿ ಟ್ಯಾಂಕರ್‌ಗಳ ಮೂಲಕ ನಿಯಮಾನುಸಾರ ನೀರು ಸರಬರಾಜು ಮಾಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ. ನಂತರ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿಯ ಕುಡಿಯುವ ನೀರಿನ ಮೂಲಗಳನ್ನು ಕಾಲಕಾಲಕ್ಕೆ ನಿಯಮಾನುಸಾರ ಪರೀಕ್ಷೆಗೊಳಪಡಿಸಿ ಶುದ್ಧತೆಯನ್ನು ಖಚಿತಪಡಿಸಿಕೊಂಡು ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ ಮತ್ತು ಓ.ಎಚ್.ಟಿ, ಸಂಪು, ಮಿನಿ ವಾಟರ್ ಟ್ಯಾಂಕ್, ಜಿ.ಎಲ್.ಎಸ್.ಆರ್ ಹಾಗೂ ಇತರೆ ನೀರು ಸಂಗ್ರಾಹಕಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಶುದ್ದೀಕರಿಸಲು ಸಹ ಸೂಚಿಸಲಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!