ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರೆಸಿಡೆನ್ಷಿಯಲ್ ಪಿಯು ಕಾಲೇಜು, (ಲಿಂಗದಹಳ್ಳಿ )ಕೊಪ್ಪಳ – 100% ಫಲಿತಾಂಶ
ಕೊಪ್ಪಳ: ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರೆಸಿಡೆನ್ಷಿಯಲ್ ಪಿಯು ಕಾಲೇಜು, (ಲಿಂಗದಹಳ್ಳಿ )ಕೊಪ್ಪಳವು ಈ ವರ್ಷದ ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ.100 ಫಲಿತಾಂಶ ಸಾಧಿಸಿ ಶ್ರೇಷ್ಠ ಸಾಧನೆ ಮಾಡಿದೆ.
ಒಟ್ಟು 36 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಇದರಲ್ಲಿ
06 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ (Distinction)(ಕುಮಾರಿ ರಾಧಿಕಾ(92%), ಕುಮಾರಿ ಕಮಲಾಕ್ಷಿ(89.16%), ಕುಮಾರಿ ಕಾವೇರಿ(88%),
ಕುಮಾರಿ ಅಂಬಿಕಾ (87%)
ಕುಮಾರ್ ಪ್ರಮೋದ್(86%), ಕುಮಾರ್ ಪ್ರವೀಣ್ (85.16%)
28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ (First Class)
02 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ (Second Class)
ಫಲಿತಾಂಶ ಪಡೆದಿದ್ದಾರೆ.
ಕಾಲೇಜಿನ ಈ ಅದ್ಭುತ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರ ಪ್ರಮುಖ ಕಾರಣವಾಗಿದೆ. ಈ ಸಾಧನೆಗೆ ಶಿಕ್ಷಣ ಕ್ಷೇತ್ರದಲ್ಲಿ ಕಾಲೇಜಿನ ಹೆಸರು ಮತ್ತಷ್ಟು ಎತ್ತರಕ್ಕೆ ಏರಿದೆ.
ಪ್ರಾಂಶುಪಾಲರಾದ
“ನಮ್ಮ ಕಾಲೇಜು 100% ಫಲಿತಾಂಶ ಸಾಧಿಸಿರುವುದು ತುಂಬಾ ಹೆಮ್ಮೆಯ ವಿಷಯ. ವಿದ್ಯಾರ್ಥಿಗಳ ಶ್ರಮ ಮತ್ತು ಉಪನ್ಯಾಸಕರ ಸಮರ್ಪಣೆ ಇದಕ್ಕೆ ಕಾರಣ. ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.”- ದ್ಯಾಮಣ್ಣ ಗದ್ದಿ
“ಈ ಸಾಧನೆ ನಮ್ಮ ಉಪನ್ಯಾಸಕರ ತಂಡದ ಒಗ್ಗಟ್ಟು ಪ್ರಯತ್ನದ ಫಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಕ್ಕಾಗಿ ನಾವು ಪ್ರಯತ್ನಿಸುತ್ತೇವೆ.”- ಪ್ರಮೋದ್.ಕೆ. ಉಪಪ್ರಾಂಶುಪಾಲ
ಉಪನ್ಯಾಸಕರುಗಳಾದ (Lecturers):ಕನ್ನಡ ಉಪನ್ಯಾಸಕರಾದ ಅಮರೇಶ್, ಗಣಕಯಂತ್ರ ವಿಜ್ಞಾನ ಉಪನ್ಯಾಸಕರಾದ ಅನಂತ ಪತ್ತಾರ್,ಗಣಿತ ಉಪನ್ಯಾಸಕರಾದ ಬಾಲರಾಜ ಮುಗಳಕರ್, ರವುರುಗಳಿಂದ
“ವಿದ್ಯಾರ್ಥಿಗಳ ಶ್ರಮ ಹಾಗೂ ನಿಯಮಿತ ಅಧ್ಯಯನದಿಂದ ಈ ಸಾಧನೆ ಸಾಧ್ಯವಾಗಿದೆ. ಜೊತೆಗೆ ನಮ್ಮ ಕಾಲೇಜ್ ನ ಪ್ರಾಂಶುಪಾಲರು,ಇಲಾಖೆಯ ಜಿಲ್ಲಾ ಅಧಿಕಾರಿಗಳು, ಕೊಪ್ಪಳ, & ಮೇಲಿನ ಅಧಿಕಾರಿಗಳ ಸಹಕಾರದಿಂದ್… ಸಾಧ್ಯ ವಾಯಿತು,
ನಮ್ಮ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಬೆಳಗಲಿ ಎಂದು ಹಾರೈಸುತ್ತೇವೆ.”ಕುಮಾರಿ ರಾಜೇಶ್ವರಿ ರಸಾಯನ ಶಾಸ್ತ್ರ,ಕುಮಾರಿ ಹರ್ಷಿತಾ & ವೀರೇಂದ್ರ,ಭೌತಶಾಸ್ತ್ರ
ವೀರನಗೌಡ ಜೀವಶಾಸ್ತ್ರ ಹಾಜರಿದ್ದು ವಿದ್ಯಾರ್ಥಿಗಳಿಗೆ ಶುಭಕೋರಿದರು, ಗ್ರಂಥಪಾಲಕ್ರು, ನಿಲಯಪಾಲಕರಾ ನಾಗರಾಜ್ ಎಸ್ : “ನಮ್ಮ ಕಾಲೇಜಿನ ವಿದ್ಯಾರ್ಥಿಗಳು 100% ಫಲಿತಾಂಶ ಪಡೆದಿರುವುದು ನಮಗೆ ಅಪಾರ ಸಂತೋಷ ತಂದಿದೆ. ಎಲ್ಲರಿಗೂ ಶುಭಾಶಯಗಳು.”ಎಂದು ತಮ್ಮ ಸಂತೋಷ ಹಂಚಿ ಕೊಂಡರು.