ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟಗಳ ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ

0

Get real time updates directly on you device, subscribe now.

ಕೊಪ್ಪಳ ಏಪ್ರಿಲ್ 09 ):
ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ. ಇಟ್ನಾಳ ಅವರು ಏಪ್ರೀಲ್ 9ರಂದು ಪ್ರವಾಸ ಕೈಗೊಂಡು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು.
ಇದೆ ವೇಳೆ, ತುಂಗಭದ್ರಾ ಜಲಾಶಯದಲ್ಲಿ ಗೇಟ್‌ಗಳ ಫ್ಯಾಬ್ರಿಕೇಶನ್, ಬಿಚ್ಚುವಿಕೆ ಮತ್ತು ಅಳವಡಿಕೆ ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ ಪರಿಶೀಲಿಸಿದರು.
ಜಲಾಶಯದ ಒಟ್ಟು 33 ಕ್ರಸ್ಟ್ ಗೇಟಗಳಲ್ಲಿ 32 ಕ್ರಸ್ಟಗೇಟ್‍ಗಳ ಫ್ಯಾಬ್ರಿಕೇಶನ್ ಪೂರ್ಣಗೊಂಡಿದೆ. 1 ಗೇಟು ಫ್ಯಾಬ್ರಿಕೇಶನ್ ಹಂತದಲ್ಲಿದ್ದು ಹೊಸಪೇಟೆ ಫ್ಯಾಬ್ರಿಕೇಶನ್ ಕೇಂದ್ರದಲ್ಲಿ ಕೆಲಸ ಪ್ರಗತಿಯಲ್ಲಿದೆ. ಗೇಟ್ ಸಂಖ್ಯೆ 1 ರಿಂದ 14 ಮತ್ತು 16 ರಿಂದ 33 ರವರೆಗಿನ ಒಟ್ಟು 32 ಗೇಟ್‌ಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಗೇಟ್ ಸಂಖ್ಯೆ 15 ರ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. 20 ಗೇಟ್‌ಗಳ ಪ್ರಾಯೋಗಿಕ ಚಾಲನೆ ಪೂರ್ಣಗೊಂಡಿದೆ (ಗೇಟ್ ಸಂಖ್ಯೆಗಳು: 01, 02, 03, 04, 11, 12, 17, 18, 19, 20, 24, 25, 26, 27, 28, 29, 30, 31, 32 ಮತ್ತು 33). 24 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದೆ (ಗೇಟ್ ಸಂಖ್ಯೆಗಳು: 01, 02, 03, 04, 05, 06, 07, 11, 12, 17, 18, 19, 20, 21, 24, 25, 26, 27, 28, 29, 30, 31, 32 ಮತ್ತು 33). 07 ಗೇಟ್‌ಗಳ ಕೆಲಸ ಪ್ರಗತಿಯಲ್ಲಿದೆ (ಗೇಟ್ ಸಂಖ್ಯೆಗಳು: 08, 09, 10, 13, 14, 16 ಮತ್ತು 22) ಎಂದು
ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್.ಅರಸಿದ್ದಿ, ಕೆ.ಎನ್.ಎನ್.ಎಲ್. ಮುಖ್ಯ ಎಂಜಿನಿಯರ್ ಶ್ರೀನಿವಾಸ ಮಲ್ಲಿಗವಾಡ, ಟಿಆರ್ ವಿಭಾಗದ ಇಇ ನಾಗನಾಥ, ಎಇಇ ಧರ್ಮರಾಜ್, ಟಿಬಿ ಬೋರ್ಡ್ ಇಇ ಚಂದ್ರಶೇಖರ, ಸೆಕ್ಷನ್ ಅಧಿಕಾರಿಗಳಾದ ಜಿ. ಕಿರಣ ಮತ್ತು ಪಂಪಾಪತಿ ಡಿ.ಕೆ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!