ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪರವಾನಿಗೆ ಭೂಮಾಪಕ
ಶ್ರೀ ಸಲೀಂಪಾಷಾ, ಪೊಲೀಸ್ ಉಪಾಧೀಕ್ಷಕರು, ಲೋಕಾಯುಕ್ತ ಕೊಪ್ಪಳ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶ್ರೀ ಗಿರೀಶ ರೋಡ್ಕರ್ ಪಿ.ಐ, ಶ್ರೀ ಚಂದ್ರಪ್ಪ ಈಟಿ ಪಿ.ಐ, ಶ್ರೀ ರಾಜೇಶ ಬಟಗುರ್ಕಿ ಪಿ.ಐ, ಶ್ರೀ ರಾಮಣ್ಣ ಸಿಹೆಚ್‌ಸಿ, ಶ್ರೀ ಬಸವರಾಜ ಸಿಹೆಚ್‌ಸಿ, ಶ್ರೀ ಚನ್ನವೀರ ಸಿಹೆಚ್‌ಸಿ, ಶ್ರೀ ಗಣೇಶಗೌಡ ಸಿಪಿಸಿ, ಶ್ರೀ ನಾಗಪ್ಪ ಸಿಪಿಸಿ, ಶ್ರೀ ಮಂಜುನಾಥ ಸಿಪಿಸಿ, ಶ್ರೀ ಗವಿಕುಮಾರ ಸಿಪಿಸಿ, ಶ್ರೀ ಆನಂದ ಎಪಿಸಿ, ಶ್ರೀ ಪೀರಸಾಬ ಎಪಿಸಿ, ಶ್ರೀ ವಿರುಪಾಕ್ಷಪ್ಪ ಎಪಿಸಿ ಅವರು ಭಾಗವಹಿಸಿದ್ದರು.
ಘಟನೆ ಏನು: ನಾಗಪ್ಪ ತಂದೆ ಸಣ್ಣಯಮನಪ್ಪ ಕುದರಿಮೋತಿ ಸಾ:ಇರಕಲಗಡ ಇವರ ತಂದೆಯವರು ಇರಕಲಗಡ ಸೀಮಾದ ತಮಗೆ ಸಂಬAಧಿಸಿದ ಜಮೀನಿನ ತತ್ಕಾಲ ಪೋಡಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ವಿಷಯವಾಗಿ ನಾಗಪ್ಪ ಅವರು ಪರವಾನಿಗೆ ಭೂಮಾಪಕರಾದ ಶ್ರೀ ಬಸವರಾಜ ಪಾಟೀಲ್ ಇವರಿಗೆ ಸೆ.13ರಂದು ಭೇಟಿ ಮಾಡಿ ತಮ್ಮ ಅರ್ಜಿಯ ಬಗ್ಗೆ ವಿಚಾರಿಸಿದಾಗ ಬಸವರಾಜ ಪಾಟೀಲ್, ಪರವಾನಿಗೆ ಭೂಮಾಪಕರು ಈ ಕೆಲಸ ಮಾಡಿಕೊಡಲು 5,000 ರೂ ಲಂಚದ ಹಣಕ್ಕೆ ಒತ್ತಾಯಿಸಿದ್ದರು ಎಂದು ಕೊಪ್ಪಳ ಲೋಕಾಯುಕ್ತ ಠಾಣೆ ಗುನ್ನೆ ನಂ: 08/2023 ಕಲಂ: 7(ಚಿ) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ರೀತ್ಯ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ರಾಯಚೂರು ಇವರ ಕಚೇರಿಯ ಪ್ರಕಟಣೆ ತಿಳಿಸಿದೆ.