ಕೊಪ್ಪಳದಲ್ಲಿ ಅರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ-ಕೆ. ರಾಘವೇಂದ್ರ ಹಿಟ್ನಾಳ.

Get real time updates directly on you device, subscribe now.

 

ಮುನಿರಬಾದ್ ನಲ್ಲಿ 4.47 ಕೋಟಿ ವೆಚ್ಚದಲ್ಲಿ 50 ಹಾಸಿಗೆ ಸಮುದಾಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು.

Foundation stone laid for construction of 50-bed community center building at a cost of Rs 4.47 crore in Munirabad.

 

ಕೊಪ್ಪಳ : ಇಂದು ಕೊಪ್ಪಳದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ಮತಕ್ಷೇತ್ರದ ಮುನಿರಬಾದ್ ನಲ್ಲಿ 50 ಹಾಸಿಗೆ ಸಮುದಾಯ ಅರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು.

 

ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮುನಿರಬಾದ್ ನಲ್ಲಿರುವ ಸಮುದಾಯ ಅರೋಗ್ಯ ಕೇಂದ್ರವು ಅದ್ಬುತವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆಸ್ಪತ್ರೆ ಈ ಹಿಂದೆ 30 ಬೆಡ್ಡಿನ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿತ್ತು ಇದನ್ನು 50 ಬೆಡ್ಡಿನ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು.

ಕಟ್ಟಡ ನಿರ್ಮಾಣಕ್ಕೆ 4.47 ಕೋಟಿ ಅನುಧಾನವನ್ನು ಮಂಜೂರು ಮಾಡಿಸಿದ್ದೇವು.ಆದ್ದರಿಂದ ಇಂದು ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದ್ದೇವೆ.

Foundation stone laid for construction of 50-bed community center building at a cost of Rs 4.47 crore in Munirabad.

ಕೊಪ್ಪಳದಲ್ಲಿ ಅರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆಗುತ್ತಿದೆ. ಕೊಪ್ಪಳಕ್ಕೆ 135 ಕೋಟಿ ವೆಚ್ಚದಲ್ಲಿ ಮೆಡಿಕಲ್ ಕಾಲೇಜ್, 198 ಕೋಟಿ ವೆಚ್ಚದಲ್ಲಿ 450 ಬೆಡ್ಡಿನ ಆಸ್ಪತ್ರೆ, 20 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 100 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಟೆಂಡರ್ ಆಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ. ಮೊನ್ನೆ 28.69 ಕೋಟಿ ವೆಚ್ಚದಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 50 ಹಾಸಿಗೆ ಸಾಮರ್ಥ್ಯಯುಳ್ಳ ತೀವ್ರ ನಿಗಾ ಘಟಕ (ಕ್ರಿಟಿಕಲ್ ಕೇರ್ ಪ್ಲಾಂಟ್) ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.

ನಂತರ ಮಾತನಾಡಿದ ಮಾಜಿ ಸಂಸದರಾದ ಸಂಗಣ್ಣ ಕರಡಿ ಅವರು ಕೆ. ರಾಘವೇಂದ್ರ ಹಿಟ್ನಾಳ ಅದ್ಬುತ ಕೆಲಸಗಾರರು. ಕ್ಷೇತ್ರಕ್ಕೆ ಅನೇಕ ದೊಡ್ಡ ದೊಡ್ಡ ಯೋಜನೆಗಳನ್ನು ತಂದಿದ್ದಾರೆ ಆದರೆ ಅವರು ಪ್ರಚಾರ ಪ್ರಿಯರಲ್ಲ. ಪ್ರಚಾರ ಇಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದರು.

 

ಈ ವೇಳೆ ಮುನಿರಬಾದ್ ಗ್ರಾಮ ಪಂಚಾಯತ್ ಅಯೂಬ್ ಖಾನ್, ಉಪಾಧ್ಯಕ್ಷರಾದ ಸೌಭಾಗ್ಯ ನಾಗರಾಜ್,ಮುಖಂಡರಾದ ವಿ. ಆರ್ ಪಾಟೀಲ್, ಗ್ಯಾರಂಟಿ ಸಮಿತಿ ತಾಲೂಕ ಅಧ್ಯಕ್ಷರಾದ ಬಾಲಚಂದ್ರನ ಮುನಿರಬಾದ್, ಯಂಕಪ್ಪ ಹೊಸಳ್ಳಿ, ಪಾಲಾಕ್ಷಪ್ಪ ಗುಂಗಾಡಿ, ಶಿವಬಾಬು ಶಿವಪುರ, ಈರಣ್ಣ ಹುಲಿಗಿ, ರಾಮೂರ್ತಿ ಮುನಿರಬಾದ್, ಹನಮಂತಪ್ಪ ಹ್ಯಾಟಿ,ಜಿಲ್ಲಾ ಅರೋಗ್ಯ ಇಲಾಖೆ ಅಧಿಕಾರಿ ಡಾ. ಲಿಂಗರಾಜ್, ಡಾ. ತೊಗರಿ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!