೧೮ನೇ ರಾಷ್ಟಮಟ್ಟದ ಕರಾಟೆ ಪಂದ್ಯಾವಳಿ ಹಿರೇಬೆಣಕಲ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆ
ಗಂಗಾವತಿ: ಭಾನುವಾರದಂದು ನಡೆದ ೧೮ನೇ ರಾಷ್ಟçಮಟ್ಟದ ಕರಾಟೆ ಪಂದ್ಯಾವಳಿಯನ್ನು ಶಿವಮೊಗ್ಗದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಒಂದನೇ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ೮ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ತಾವರೆಪ್ಪ ಲಂಬಾಣಿ ಇವರು ಪ್ರಕಟಣೆಯಲ್ಲಿ ತಿಳಿಸಿದರು.
ಬಾಲಕಿಯರ ೧೨ ವರ್ಷದ ಕಾಲ್ಪನಿಕ ಯುದ್ಧದಲ್ಲಿ ಸೌಮ್ಯ ಅಂಗಡಿ ಪ್ರಥಮ ಸ್ಥಾನ ಫೈಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ ೧೪ ವರ್ಷದ ವಿಭಾಗದಲ್ಲಿ ಕಾಲ್ಪನಿಕ ಯುದ್ಧದಲ್ಲಿ ಆಫಿಯ ಪ್ರಥಮ ಸ್ಥಾನ ಮತ್ತು ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ, ಬಾಲಕಿಯರ ೧೩ ವರ್ಷದ ವಿಭಾಗದಲ್ಲಿ ಶಾಹಿನ್ ಕಾಲ್ಪನಿಕ ಯುದ್ಧದಲ್ಲಿ ದ್ವಿತೀಯ ಸ್ಥಾನ ಮತ್ತು ವೀಣಾ ಕಾಲ್ಪನಿಕ ಯುದ್ಧದಲ್ಲಿ ದ್ವಿತೀಯ ಸ್ಥಾನ ಫೈಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ೧೫ ವರ್ಷದ ಬಾಲಕಿಯರ ವಿಭಾಗದಲ್ಲಿ ಸುಬಿಯ ಕಾಲ್ಪನಿಕ ಯುದ್ಧದಲ್ಲಿ ಪ್ರಥಮ ಸ್ಥಾನ ಫೈಟಿಂಗ್ ವಿಭಾಗದಲ್ಲಿ ತೃತೀಯ ಸ್ಥಾನ, ಬಾಲಕರ ೧೨ ವರ್ಷದ ವಿಭಾಗದಲ್ಲಿ ಮೊಹಮ್ಮದ್ ಅಲಿ ಕಾಲ್ಪನಿಕ ಯುದ್ಧದಲ್ಲಿ ಪ್ರಥಮ ಸ್ಥಾನ, ಅಮಿತ್ ಕಾಲ್ಪನಿಕ ಯುದ್ಧದಲ್ಲಿ ದ್ವಿತೀಯ ಸ್ಥಾನ, ೧೪ ವರ್ಷದ ಬಾಲಕರ ವಿಭಾಗದಲ್ಲಿ ಕಾಲ್ಪನಿಕ ಯುದ್ಧದಲ್ಲಿ ಸಾಜನ್ ದ್ವಿತೀಯ ಸ್ಥಾನ ಮತ್ತು ಫೈಟಿಂಗ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ ಎಂದು ತಿಳಿಸಿದರು.
ಈ ಸಾಧನೆಗೈದ ವಿದ್ಯಾರ್ಥಿಗಳಿಗೆ ವಸತಿ ಶಾಲೆಯ ಮುಖ್ಯೋಪಾಧ್ಯಯರು, ದೈಹಿಕ ಶಿಕ್ಷಕರಾದ ಮಾರುತಿ ಭಜಂತ್ರಿ ಹಾಗೂ ಮುಖ್ಯ ಕರಾಟೆ ತರಬೇತಿದಾರರಾದ ಡಾ. ಶಿಹಾನ್ ಜಬಿವುಲ್ಲಾ ಅವರು ಮತ್ತು ಶಾಲೆಯ ಇತರೆ ಸಿಬ್ಬಂದಿ ವರ್ಗ ಹಾಗೂ ಪಾಲಕರು ಅಭಿನಂದನೆ ತಿಳಿಸಿದ್ದಾರೆ.
Comments are closed.