ಯಾವುದೇ ಅಭಿವೃದ್ಧಿ ಜೀವ ತೆಗೆಯುವಂತಿರಬಾರದು : ಶಿಕ್ಷಕಿ ರಂಗಮ್ಮ

Get real time updates directly on you device, subscribe now.

ಮಕ್ಕಳಿಗೆ ಶಿಕ್ಷಣ ಕೊಡುವುದಷ್ಟೇ ಸಂಸ್ಥೆಗಳ ಕೆಲಸವಲ್ಲ : ಪಟ್ಟಣಶೆಟ್ಟಿ

ಚಿಪ್ಕೋ, ಕೈಗಾ, ಅಪ್ಪಿಕೋ, ನರ್ಮದಾ, ಸೈಲೆಂಟ್ ವ್ಯಾಲಿ ಚಳವಳಿ ಪ್ರಸ್ತಾಪಿಸಿದ
ಎನ್.ಕೆ.ಪಿ.ಎಂ. ಪ್ರೌಢ ಶಾಲಾ ವಿದ್ಯಾರ್ಥಿಗಳು

ಕೊಪ್ಪಳ: ನಗರ ಎನ್.ಕೆ.ಪಿ.ಎಂ. ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆ ಸಂಸ್ಥಾಪಕ ಅಧ್ಯಕ್ಷ ಇಂಜಿನಿಯರ್ ಬಿ.ಕೆ. ಪಟ್ಟಣಶೆಟ್ಟಿ ರವರು ಧರಣಿ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿ ಜಿಲ್ಲಾ ಕೇಂದ್ರ, ಭಾಗ್ಯನಗರದ ೧.೫ ಲಕ್ಷ ಜನರ ಜೀವ, ಆರೋಗ್ಯ ಕಾಳಜಿ ಇಲ್ಲದೆ ಸರ್ಕಾರ ೫೪ ಸಾವಿರ ಕೋಟಿ ವೆಚ್ಚ ಮಾಡಿ ಬಲ್ಡೋಟಾವಿಸ್ತರಣೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ ಎಂದರು.
ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕಾಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿಯ ೫೧ನೇ ದಿನದ ಹೋರಾಟಕ್ಕೆ ಎನ್.ಕೆ.ಪಿ.ಎಂ. ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಹೋರಾಟ ಬೆಂಬಲಿಸಿ ಮಾತನಾಡಿದರು.
ಈಗಿರುವ ಪೆಲೆಟ್ ಒಂದು ಘಟಕದಿಂದ ಆಗುತ್ತಿರುವ ಅನಾಹುತವೇ ದೊಡ್ಡದು ಮತ್ತೆ ಸ್ಟೀಲ್- ವಿದ್ಯುತ್ ಉತ್ಪಾದನೆಗಾಗಿ ವಿಸ್ತರಣೆ ಮಾಡಲು ಮುಂದಾಗಿದ್ದು ಸರಿಯಲ್ಲ. ಕೈಗಾರಿಕೆಗಳು ಜನ ವಸತಿ ಇದ್ದಕಡೆ ಇರಕೂಡದು. ವಿಷಾನಿಲ ಉಗುಳಿ ಮಾಲಿನ್ಯ ಮಾಡುವ ಕಾರ್ಖಾನೆಗಳಂತೂ ಜನವಸತಿಯಿಂದ ದೂರವಿದ್ದು, ಬಫರ್ ವಲಯ ಇಟ್ಟುಕೊಂಡು ೧೫-೨೦ ಕಿ.ಮೀ. ದೂರವಿರಬೇಕು. ನಾವ್ಯಾರೂ ಕೈಗಾರಿಕಾ ವಿರೋಧಿಗಳಲ್ಲ. ಅಭಿವೃದ್ಧಿ ಕೃಷಿಯಿಂದಾದರಷ್ಟೇ ದೇಶದ ಜಿ.ಡಿ.ಪಿ. ಸ್ಥಿರವಾಗಿರುತ್ತದೆ. ಕೈಗಾರಿಕೆಗಳಿಂದ ಆಗುವ ಅಭಿವೃದ್ಧಿ ಯಾವಾಗಲೂ ಬಿದ್ದು ಹೋಗಬಹುದು. ಕಾರ್ಖಾನೆ ಸ್ಥಾಪನೆಗಾಗಿ, ಜನವಸತಿಗಾಗಿ ಭೂಮಿ ಅನಗತ್ಯವಾಗಿ ಬಳಕೆಯಾಗುತ್ತಿದೆ. ಇದು ಭವಿಷ್ಯದ ಕೃಷಿಗೆ ಎದುರಾಗುವ ಅಪಾಯವಾಗಿದೆ.
ತದನಂತರ ಮಾಲಿನ್ಯದಿಂದ ಸಮಸ್ಯೆ ಆಗಿದೆ ಎಂದರೆ ಏನು ಪ್ರಯೋಜನ. ಪೂರ್ವಾಲೋಚನೆ, ಜನರು ಅಹವಾಲು ಆಲಿಸದ ಸರ್ಕಾರಗಳು ಇರುವಾಗ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಗಂಭೀರವಾಗಿ ಚಿಂತಿಸಿ ಈ ಹೋರಾಟದಲ್ಲಿ ಸೇರಿಕೊಳ್ಳಬೇಕು. ನಾವು ಸಂಸ್ಥೆಗಳನ್ನು ಸ್ಥಾಪಿಸಿ ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣ ಕೊಡುತ್ತೇವೆ. ಆ ಮಕ್ಕಳಾದಿಯಾಗಿ ನಾವೂ ರೋಗಗ್ರಸ್ಥರಾದರೆ ಶಿಕ್ಷಣ ಮತ್ತು ಸಂಸ್ಥೆ ಯಾರ ಉದ್ಧಾರಕ್ಕೆ ಎನ್ನುವ ಪ್ರಶ್ನೆ ನನ್ನೊಳಗೆ ಮೂಡಿತು. ಶಿಕ್ಷಣದಲ್ಲಿ ಆರೋಗ್ಯ, ಪೌಷ್ಟಿಕತೆ, ನಿಸರ್ಗ, ಪರಿಸರ ಕುರಿತಾದ ಮೌಲ್ಯಯುತ ಪಾಠ ಮಾಡುತ್ತೆವೆ. ಈಗ ನಮ್ಮ ಊರು ಮಾಲಿನ್ಯದಿಂದ ನಲುಗಿ ಹೋಗುತ್ತದೆ ಇಲ್ಲಿನ ಮಕ್ಕಳ ಜೀವನದ ಭವಿಷ್ಯ ಅಪಾಯಕ್ಕೆ ಸಿಲುಕಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಎನ್.ಕೆ.ಪಿ.ಎಂ. ಹೈಸ್ಕೂಲ್ ವಿದ್ಯಾರ್ಥಿಗಳಾದ ದೀಪಕ್, ವೈಷ್ಣವಿ, ಆದಿಲ್, ಸುಮಯ್ಯ, ಇವರುಗಳು ಚಿಪ್ಕೋ,ಕೈಗಾ,ಅಪ್ಪಿಕೋ,ನರ್ಮದಾ,ಸೈಲೆಂಟ್ವ್ಯಾಲಿಚಳವಳಿ ಮತ್ತು ಸಾಲುಮರದ ತಿಮ್ಮಕ್ಕ ಅವರನ್ನು ಉದಾಹರಿಸಿ ಆಂಗ್ಲ ಭಾಷೆಯಲ್ಲಿ ಮತ್ತು ಕನ್ಡಡದಲ್ಲಿ ಮನಕಲಕುವಂತೆ ಭಾಷಣ ಮಾಡಿದರು. ಶಿಕ್ಷಕರಾದ ಬಿ.ಎಂ.ನಿತಿನ್ ಶರ್ಮಾ, ರಂಗಮ್ಮ ಮಾತನಾಡಿ ನಮ್ಮ ಅನಾರೋಗ್ಯಕ್ಕೆ ಕಾರಣವಾಗುವ ಈ ಕಾರ್ಖಾನೆಗಳು ಜೀವ ತೆಗೆಯುವಾಗಲೂ ಎಚ್ಚರಿಕೆ ವಹಿಸದಿದ್ದರೆ ಭವಿಷ್ಯ ಮುಂದಿಟ್ಟು ನೋಡಿದರೆ ಭಯಂಕರವಾಗಿದೆ. ನಾವಲ್ಲದೆ ಎಲ್ಲಾ ತಿಳಿದವರು, ಪ್ರಜ್ಞಾವಂತ ಜನರು ಮುಂದೆ ಬಂದು ಪ್ರತಿರೋಧ ತೋರಲಿ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಶಾಲಾ ಶಿಕ್ಷಕರಾದ ಉದಯಕುಮಾರ್ ಎಂ.ಕೆ, ಮಲ್ಲಪ್ಪ ಕಿನ್ನಾಳ, ಶಿಕ್ಷಕಿ ವಿಜೇತಾ ಎಂ,, ಬಿಂದಿಯಾ ಬಿ., ವೆಂಕಟಲಕ್ಷ್ಮಿ, ಸವಿತಾ ಸಾಕ್ರೆ, ಲಕ್ಷ್ಮೀ ವಿಜಯಮುದ್ರಿ, ಜ್ಯೋತಿ, ಪುಷ್ಪಲತಾ ಏಳುಭಾವಿ, ಸಾಹಿತಿ ಎ.ಎಂ.ಮದರಿ, ಜಿ.ಬಿ.ಪಾಟೀಲ್, ರವಿ ಕಾಂತನವರ, ಮಹಾದೆವಪ್ನ ಮಾವಿನಮಡು, ಮೂಕಪ್ಪ ಮೇಸ್ತ್ರಿ ಬಸಾಪುರ, ಮಂಜುನಾಥ ಕವಲೂರು, ಸುಂಕಮ್ಮ ಪಡಚಿಂತಿ ಹಾಗೂ ಎನ್.ಕೆ.ಪಿ.ಎಂ.ಹೈಸ್ಕೂಲ್ ವಿದ್ಯಾರ್ಥಿಗಳು ಪಾಲ್ಗೊಂಡರು. ಹೋರಾಟಕ್ಕೆ ಬಿ.ಕೆ.ಪಟ್ಟಣಶೆಟ್ಟಿ ಎಂದು ೫೦೦೦ ರೂ. ದೇಣಿಗೆ ಚೆಕ್ ನೀಡಿದರು.

Get real time updates directly on you device, subscribe now.

Comments are closed.

error: Content is protected !!