ಅರ್ಥಶಾಸ್ತ್ರ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು – ಪ್ರೊ.ತಿಮ್ಮಾರೆಡ್ಡಿ ಮೇಟಿ

Economics students should achieve high performance - Prof. Thimmareddy Matee

Get real time updates directly on you device, subscribe now.

Economics students should achieve high performance – Prof. Thimmareddy Matee

ಕೊಪ್ಪಳ, ಡಿ -3: ಅರ್ಥ ಶಾಸ್ತ್ರ ವಿಭಾಗದಲ್ಲಿ ಅದ್ವಿತೀಯ ಸಾಧನೆ ಮಾಡಿದ ಖ್ಯಾತ ಅರ್ಥ ಶಾಸ್ತ್ರಜ್ಞರಾದ  ಅಮರ್ಥ್ಯಸೇನ, ಡಾ. ಮನಮೋಹನ್ ಸಿಂಗ್, ಸಿ. ರಂಗರಾಜನ್ ರಂತವರನ್ನು ಅರ್ಥಶಾಸ್ತ್ರ ವಿದ್ಯಾರ್ಥಿಗಳು ಆದರ್ಶ ವಾಗಿ ತೆಗೆದುಕೊಂಡು  ಅಧ್ಯಯನ ಮಾಡುವ ಮೂಲಕ ಭವಷ್ಯದಲ್ಲಿ‌ ಉನ್ನತ ಸಾಧನೆ ಮಾಡಬೇಕು ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಘನತೆ ಎತ್ತಿ ಹಿಡಿಯುವಂತಾಗಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಪ್ರೊ.ತಿಮ್ಮಾರೆಡ್ಡಿ ಮೇಟಿಯವರು ಆಶಯ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲೆಯ ಭಾನಾಪುರ ಬಳಿಯ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ  ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಆಯೋಜಿಸಲಾಗಿದ್ದ ಫ್ರಶರ್ಸ್ ಫೆಸ್ಟ್ ಎನ್ನುವ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನ ಅವಧಿ ಅಮೂಲ್ಯವಾಗಿದ್ದು, ಈ ಸಮಯದಲ್ಲಿ ಕಠಿಣ ಪರಿಶ್ರಮವಹಿಸಿ, ಚನ್ನಾಗಿ ಅಧ್ಯಯನ ಮಾಡಬೇಕು. ಅರ್ಥ ಶಾಸ್ತ್ರ ಅಧ್ಯಯನ ಮಾಡಿದರೆ ದೇಶದ ಹಣಕಾಸು ಆಯೋಗ, ಐ.ಎಂಎಫ್, ಹಣಕಾಸು ಇಲಾಖೆ, ಆರ್ಥಿಕ  ಖಾತೆ, ಹಣಕಾಸು ಸಂಸ್ಥೆಗಳಲ್ಲಿ‌ ಸಾಕಷ್ಡು ಅವಕಾಶಗಳಿವೆ. ಇಂತಹ ಅವಕಾಶಗಳನ್ನು ಸದುಪಯೊಗಪಡಿಸಿಕೊಂಡು ಜೀವನದಲ್ಲಿ ಮಂದೆ ಬರಲು, ವಿಶ್ವವಿದ್ಯಾಲಯದ ಕೀರ್ತಿ ಪತಾಕೆಯನ್ನು ಹಾರಿಸಲು, ವಿಶ್ವವಿದ್ಯಾಲಯದ ಘನತೆ ಹೆಚ್ಚುವಂತೆ  ಮಾಡಿ , ಮುಂದೆ ಬರಲು  ಅವರು  ತಿಳಿಸಿದರು.
      ಈ ವೇಳೆ ಪತ್ರಿಕೋದ್ಯಮ ವಿಭಾಗದ ಡಾ. ಬಸವರಾಜ‌ ಎಸ್. ಗಡಾದ ಇವರು ಮಾತನಾಡಿ ಪತ್ರಿಕೋದ್ಯಮದ ವಾಣಿಜ್ಯ ಪತ್ರಿಕೆ, ಅಂಕಣಗಳಲ್ಲಿ ಲೇಖನ ಬರೆಯುವ , ಆರ್ಥಿಕ ಪತ್ರಿಕೆಗಳ ನಡೆಸುವಲ್ಲಿನ ಉದ್ಯೋಗಾವಕಾಶಗಳ ತಿಳಿಸಿದರು ಅರ್ಥಶಾಸ್ತ್ರ ವಿಭಾಗದ ಪ್ರಾದ್ಯಾಪಕರಾದ ಡಾ: ಮೌನೇಶ್ವರಿ ಜಿ, ನಾಗರಾಜ್, ರಮೇಶ ಕಂಪ್ಲಿ ಇವರುಗಳು ಮಾತನಾಡಿ,  ಅರ್ಥಶಾಸ್ತ್ರದ ಅಧ್ಯಯನದ ಮಹತ್ವವನ್ನು ತಿಳಿಸಿ, ಹಲವು ಸಲಹೆಗಳನ್ನು ನೀಡಿದರು.
ವಿವಿಧ ಆಟೋಟ ಸ್ಪರ್ಧೆಗಳಲ್ಲಿ  ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಈ ವೇಳೆ ಸನ್ಮಾನಿಸಲಾಯಿತು.  ಈ ವೇಳೆ ಹಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಚೈತ್ರಾ ಸಂಗಡಿಗರು ಪ್ರಾರ್ಥಿಸಿದರು, ಮುಸ್ತಾಕ ಸ್ವಾಗತಿಸಿದರು, ಡಾ. ಕುಮಾರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು, ಪವಿತ್ರ ಅಗಸಿಮುಂದಿನ ನಿರೂಪಿಸಿದರು. ಕಿರಣ್ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!