ಮಾನವೀಯ ಮೌಲ್ಯಗಳನ್ಮು ಅಳವಡಿಸಿಕೊಂಡು, ಸಮಾಜ ಮುಖಿಯಾಗಿ ಬದುಕುಬೇಕು -ಡಾ. ಎಸ್.ವಿ.ಡಾಣಿ
ಕೊಪ್ಪಳ, ಡಿ 3: ಉನ್ನತ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ಮು ಅಳವಡಿಸಿಕೊಂಡು, ಸಮಾಜ ಮುಖಿಯಾಗಿ ಬದುಕುಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯ ಪ್ರಭಾರಿ ಕುಲಸಚಿವರಾದ ಡಾ. ಎಸ್.ವಿ.ಡಾಣಿಯವರು ಅಭಿಪ್ರಾಯಪಟ್ಟರು.ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಇಂದು ನೂತನ (2025-26ನೇ ಸಾಲಿನ) ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಓರ್ವನ ಜೀವನ ಬದಲಾವಣೆಯಲ್ಲಿ, ವುದ್ಯೆಯೇ ಮಹತ್ವದ ಅಸ್ತ್ರ ಪ್ರತಿಯೊಬ್ಬರು ಒಳ್ಳೆಯ ವಿದ್ಯೆಯ ಜೊತೆಗೆ ವಿಶ್ವವಿದ್ಯಾಲಯಕ್ಕೆ ಕಟ್ಟುವ ಕಾರ್ಯದಲ್ಲಿ ಸಹಕರಿಸಬೇಕು, ಸಜ್ಜನರಾಗಿ ಬೆಳೆದು, ಶಾಂತಿಯುತ, ಸಜ್ಜನ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕೆಂದು ಅವರು ತಿಳಿಸಿದರು.
ಈ ವೇಳೆ ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿಮೇಟಿಯವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚಗಚಿನ ಶ್ರಮವಹಿಸಿ, ಹೆಚ್ಚಿನ, ಗುಣಮಟ್ಟದ ಶಿಕ್ಷಣ ಪಡೆದು ಮುಂದೆ ಬರಬೇಕು. ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿತ ಕೊಪ್ಪಳ ವಿ.ವಿ ಸದುಪಯೋಗ ಪಡರಯಬೇಕು ಹಾಗೂ ಎಲ್ಲರೂ ಬೆಳವಣಿಗೆಗೆ ಸಹಕಾರ ನೀಡಬೇಕೆಂದರು
ಈ ವೇಳೆ ವೇದಿಜೆಯಲ್ಲಿ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಭಾಷ, ಡಾ. ವೀಣಾ, ಡಾ ಪ್ರದೀಪ, ಡಾ.ಬಸವರಾಜ ಎಸ್.ಗಡಾದ ಇನ್ನಿತರರು ಉಪಸ್ಥಿತರಿದ್ದರು.
ಈ ವೇಖೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಬಸವರಾಜ ಸ್ವಾಗತಿಸಿದರೆ, ನಸರೀಸ ನಿರೂಪಿಸಿದರು,ಪಂಚಾಕ್ಷರಿ ವಂದಿಸಿದರು.