ಅನಿರ್ಧಿಷ್ಟಾವಧಿ ಧರಣಿಯ ೧೨ನೇ ದಿನದ ಹೋರಾಟ : ಸಣ್ಣ ನಾಟಕಗಳ ಮೂಲಕ ಜನಜಾಗೃತಿಗೆ ಸಿದ್ಧತೆ : ಲಕ್ಷö್ಮಣ ಪೀರಗಾರ

Get real time updates directly on you device, subscribe now.

ಕರ್ನಾಟಕ ರೈತ ಸಂಘ (ಬಸವರಾಜಪ್ಪ ಬಣ) ಧರಣಿಗೆ ಬೆಂಬಲ
ಕೊಪ್ಪಳ: ಇಲ್ಲಿನ ಜನರ ಜೀವ ಹಿಂಡುತ್ತಿರುವ ಮತ್ತು ಬರುವ ದಿನಗಳನ್ನು ನರಕಕ್ಕೆ ಕಳಿಸಲು ತವಕಿಸುತ್ತಿರುವ
ಬಲ್ಡೋಟಾ ಕಾರ್ಖಾನೆ ಸೇರಿ ಅನೇಕ ಕಾರ್ಖಾನೆಗಳ ವಿರುದ್ಧ ಜನ ಸಂಘಟಿಸಲು, ಅರಿವು ಮೂಡಿಸಲು ಸಣ್ಣ ನಾಟಕಗಳನ್ನು ಮಾಡುತ್ತೇವೆ ಎಂದು ರಂಗಕರ್ಮಿ ಹೇಳಿದರು.
ಅವರು ನಗರಸಭೆ ಸಂಕೀರ್ಣದ ಮುಂದೆ ನಡೆದಿರುವ ಅನಿರ್ಧಿಷ್ಟಾವಧಿ ಧರಣಿಯ ೧೨ನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಶುದ್ಧ ಗಾಳಿ ಸುದ್ಧ ಸುಳ್ಳು, ಅದೊಂದು ಪ್ರಾಯೋಜಿತ ವ್ಯವಸ್ಥಿತ ಅಧ್ಯಯನವಷ್ಟೇ ಆಗಿದ್ದು, ಅದನ್ನು ಇಲ್ಲಿನ ಜನ ನಂಬುವ ಬದಲು ಕಾರ್ಖಾನೆಯ ಮುಠ್ಠಾಳತನವನ್ನು ನೋಡಿ ನಗುತ್ತಿದ್ದಾರೆ ಎಂದರು.
ಇಲ್ಲಿನ ಅವಳಿ ನಗರ ಮತ್ತು ಸುಮಾರು ಇಪ್ಪತ್ತು ಬಾದಿತ ಹಳ್ಳಿಗಳ ಸುಮಾರು ೧.೫ ಲಕ್ಷ ಜನರ ಆರೋಗ್ಯದ ಮೇಲೆ ತೀವ್ರ ತೆರನಾದ ದುಷ್ಪರಿಣಾಮ ಬೀರಿದ ಕಾರ್ಖಾನೆ ವಿರುದ್ಧ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ೧೨ನೇ ದಿನ ಪೂರೈಸಿತು.
ಕಲಾವಿದರು ಜನರಿಗೆ ಸದಾ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಾರೆ, ಅದೇ ರೀತಿ ನಾವು ಕಲಾವಿದರಾಗಿ ಅಂತಹ ಕಲಾ ಸೇವೆ ಮೂಲಕ ಜನರಿಗೆ ಸರಿಯಾದ ಮಾಹಿತಿ ಒದಗಿಸುತ್ತೇವೆ, ಜನ ಇನ್ನೂ ಸುಖಾಸೀನರಾಗಿ ಉಳಿಯಬಾರದು ಎಂದರು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ, ರಾಜಕೀಯ ನಾಯಕರು ಜನರ ಕಷ್ಟವನ್ನು ನೋಡಬೇಕು, ಅವರನ್ನು ಸಾಮಾನ್ಯ ಜನ ದೇವರಂತೆ ಕಾಣುತ್ತಾರೆ, ದೇವರು ಕಣ್ಣುಮುಚ್ಚಿ ಕುಳಿತರೂ ದಿವ್ಯ ಶಕ್ತಿಯಿಂದ ಜನರ ಕಷ್ಟ ಆಲಿಸುತ್ತಾನೆ, ಹಾಗೆ ಜನಪ್ರತಿನಿಧಿಗಳು ಇಲ್ಲಿನ ಜನರು ಮನಸಾರೆ ಆಯ್ಕೆ ಮಾಡಿ ತಮಗೆ ಒಳ್ಳೆಯದು ಮಡುತ್ತಾರೆ ಎಂಬ ನಂಬಿಕೆ ಹೊಂದಿರುತ್ತಾರೆ, ಅಂತಹ ನಂಬಿಕೆ ಕಳೆಯಬಾರದು, ತುರ್ತಾಗಿ ಜನರಿಗೆ ನ್ಯಾಯ ಒದಗಿಸಿ, ಜನರ ಅಪೇಕ್ಷೆಯಂತೆ ಕಾರ್ಖಾನೆ ಮುಚ್ಚಬೇಕು, ಬಿಜೆಪಿ ಜೆಡಿಎಸ್ ಕೆಂದ್ರದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ತಮ್ಮ ಪಾತ್ರ ನಿಭಾಯಿಸಬೇಕು ಎಂದರು.

12th day of indefinite strike: Preparation for public awareness through short plays: Lakshman Peergar

ರೈತ ಮುಖಂಡ ಗಣೇಶರಡ್ಡಿ. ಮಾತನಾಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸಂಚಾಲಕರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಸಾಹಿತಿ ಡಿ.ಎಂ.ಬಡಿಗೇರ, ಮಹಾಂತೇಶ ಕೊತಬಾಳ, ಮಖಬೂ¯ ರಾಯಚೂರು, ಮೂಕಪ್ಪ ಮೇಸ್ತಿç ಬಸಾಪುರ, ಮಹಾದೇವಪ್ಪ ಎಸ್. ಮಾವಿನಮಡು, ಚನ್ನವೀರಯ್ಯ ಹಿರೇಮಠ, ಕಾಶಪ್ಪ ಚಲವಾದಿ, ಪ್ರಕಾಶ ಹೊಳೆಯಪ್ಪನವರ, ಗವಿಸಿದ್ಧಪ್ಪ ಹಲಿಗಿ. ಖಾಸಿಂಸಾಬ ಬೆಂಡೆಕಾಯಿ, ಭೈರಾಜಿ ಎಂ ಪೂಜಾರಿ. ಮಂಗಳೇಶ ರಾಠೋಡ, ರಂಗಕರ್ಮಿ ಶಿವಪ್ಪ ಸಿ. ಬಸವರಾಜ ದೇಸಾಯಿ, ಹನುಮಂತಪ್ಪ ಮಲ್ಲರಡ್ಡಿ, ಕೆ. ಕೃಷ್ಣಾ, ಮಾರುತೇಶ ಚಿಕ್ಕಬಗನಾಳ. ಕರೀಮ್ ಪಾಷಾ, ಮುದಕಪ್ಪ ಎಂ ಹೊಸಮನಿ, ಬಸವರಾಜ ಶೀಲವಂತಲ, ಚನ್ನಬಸಪ್ಪ ಅಪ್ಪಣ್ಣವರ, ಎಸ್. ಎ. ಗಫಾರ್, ರವಿ ಕಾಂತನವರ, ಸುಂಕಮ್ಮ ಪಡಚಿಂತಿ, ಗಂಗಮ್ಮ ಕವಲೂರು, ಗೌರಿ ಗೋನಾಳ, ದುರುಗೇಶ ಬರಗೂರ, ಭೀಮಪ್ಪ ಯಲಬುರ್ಗಾ, ಸುಂಕಪ್ಪ ಮೀಸಿ ಪಾಲ್ಗೊಂಡರು. ಅನುದಾನ

Get real time updates directly on you device, subscribe now.

Comments are closed.

error: Content is protected !!