ಸಿವಿಸಿ ಫೌಂಡೇಶನ್ ವತಿಯಿಂದ ರಾಜ್ಯೋತ್ಸವ ಚಿತ್ರಕಲಾ ಸ್ಪರ್ಧೆ

Get real time updates directly on you device, subscribe now.

ಕೊಪ್ಪಳ : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಿವಿಸಿ ಫೌಂಡೇಶನ್ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದು,
ಎರಡು ಹಂತಗಳಲ್ಲಿ ಇರಲಿದೆ ಎಂದು ಸಿ ವಿ ಸಿ ಫೌಂಡೇಶನ್ ನಿರ್ದೇಶಕರಾದ ಲಕ್ಷ್ಮೀದೇವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೌಢಶಾಲಾ ವಿಭಾಗದ ವಿಷಯ ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ಣಾಟಕ ಮಾತೆ’ ಹಾಗೂ ಪದವಿ ಪೂರ್ವ ವಿಭಾಗದ ವಿಷಯ
‘ಕನ್ನಡ ನಾಡಿಗೆ ಕೋಪಣ ನಗರಿ’.‌

ಎರಡೂ ವಿಭಾಗಗಳಲ್ಲಿ ತಲಾ ಮೂರು ನಗದು ಬಹುಮಾನಗಳನ್ನು‌ ಹಾಗೂ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ನವಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.

ವಿದ್ಯಾರ್ಥಿಗಳು ಬಿಳಿ A4  ಹಾಳೆಯಲ್ಲಿ ಚಿತ್ರ ಬಿಡಿಸಿ, ಅದನ್ನು ತಮ್ಮ ಪ್ರಾಂಶುಪಾಲರಿಂದ
ದೃಢೀಕರಣಪಡಿಸಿಕೊಂಡು ಕಳುಹಿಸಬೇಕು. ತಮ್ಮ ಹೆಸರು, ತರಗತಿ, ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಲಗತ್ತಿಸಬೇಕು.

ಸ್ಕ್ಯಾನ್ ಮಾಡಿದ
ಚಿತ್ರಗಳನ್ನು ವಾಟ್ಸಾಪ್ (9886653399) ಮೂಲಕ, ಮಿಂಚಂಚೆ (cvcfoundationkoppal@gmail.com) ಮೂಲಕ ಕಳುಹಿಸಬಹುದು. ಈ ಕೆಳಗಿನ ವಿಳಾಸಕ್ಕೂ ಅಂಚೆಯ ಮೂಲಕ ಕಳುಹಿಸಬಹುದು: ಸಿವಿಸಿ ಫೌಂಡೇಶನ್, ಸಿವಿಸಿ ಸದನ, ಕುಷ್ಟಗಿ ರಸ್ತೆ, ಕೊಪ್ಪಳ -೫೮೩೨೩೧.

ಚಿತ್ರಕಲೆಯನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 28.

ಹೆಚ್ಚಿನ ಮಾಹಿತಿಗೆ ಸಂಪರ್ಕ: 9886653399

Get real time updates directly on you device, subscribe now.

Comments are closed.

error: Content is protected !!