ಶಿಕ್ಷಕಿ ಅಕ್ಕಮ್ಮ ಹಿರೇಮಠಗೆ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ ಪ್ರದಾನ
ಕೊಪ್ಪಳ : ತಾಲೂಕಿನ ಶಿವಪುರ ಗ್ರಾಮದ ಶಿಕ್ಷಕಿ, ಪ್ರತಿಷ್ಠಿತ ಬೋರುಕಾ ಪ್ರೌಢ ಶಾಲೆಯಲ್ಲಿ ಎರಡು ದಶಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಉಚಿತವಾಗಿ ಬಡ ಹಿಂದುಳಿದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಶಿಬಿರ, ಮನೆ ಪಾಠ,ಅಂಜನಾದ್ರಿ ಕೋಚಿಂಗ್ ಸೆಂಟರ್ ನಡೆಸುತ್ತಿರುವ ಅಕ್ಕಮ್ಮ ಸಿದ್ದಲಿಂಗಯ್ಯ ಹಿರೇಮಠ ಅವರ ಶಿಕ್ಷಣ ಕ್ಷೇತ್ರದ ಸಾಧನೆ ಪರಿಗಣಿಸಿ ರಾಜ್ಯ ಮಟ್ಟದ ನಿಸರ್ಗ ಶಿಕ್ಷಣ ರತ್ನ ಪ್ರಶಸ್ತಿ ನೀಡಿ
ಗೌರವಿಸಲಾಯಿತು. ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರದ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ
ಸಂಘದ ಆಶ್ರಯದಲ್ಲಿ ನಡೆದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ದಿ.ಪಿ.ಬಿ.ಧುತ್ತರಗಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪರಸ್ಕೃತ ದಿ. ಸರೋಜಮ್ಮ
ಧುತ್ತರಗಿ ಇವರ ಸ್ಮರಣಾರ್ಥ ನಿಸರ್ಗ ಸಂಗೀತ ವಿದ್ಯಾಲಯದ ೨೫೦ನೇ ನಿರಂತರ ಸಂಗೀತ ಸರಣಿ ಮತ್ತು ೨೩ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡ ಮಾಡುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ, ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪೂರ, ಸಿ, ಮಹಾಲಕ್ಷ್ಮಿ ಗಂಗಾವತಿ ಮತ್ತು
ಮುತ್ತು ವಡ್ಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಬಿನಂದನೆ : ಶಿಕ್ಷಣ ಕ್ಷೇತ್ರದ ಸಾಧನೆ ಪರಿಗಣಿಸಿ ರಾಜ್ಯ ಮಟ್ಟದ ನಿಸರ್ಗ ಶಿಕ್ಷಣ ರತ್ನ ಪ್ರಶಸ್ತಿಗೆ ಭಾಜನರಾದ ಅಕ್ಕಮ್ಮ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ಸಂಘ- ಸಂಸ್ಥೆಗಳು, ಮುಖಂಡರುಗಳು, ಗಣ್ಯರು, ಶಿಕ್ಷಕರವೃಂದ ವಿದ್ಯಾರ್ಥಿಗಳು ಆಭಿನಂದಿಸಿದ್ದಾರೆ.
Comments are closed.