ಪೆಂಕಾಕ್ ಸಿಲತ್ ರಾಷ್ಟ್ರೀಯ ಕ್ರೀಡಾಕೂಟ ಯಶಸ್ವಿಯಾಗಲಿ – ಸಚಿವ ತಂಗಡಗಿ

Get real time updates directly on you device, subscribe now.

ಕೊಪ್ಪಳ: ನಗರದಲ್ಲಿ ಇದೇ ಸೆಪ್ಟೆಂಬರ್ ೨೬ ರಿಂದ ಮೂರು ದಿನಗಳ ಕಾಲ ನಡೆಯುವ ೧೩ನೇ ರಾಷ್ಟ್ರೀಯ ಪೆಂಕಾಕ್ ಸಿಲತ್ ಕ್ರೀಡಾಕೂಟದ ಲೋಗೊ (ಲಾಂಛನ) ಅನಾವರಣಗೊಳಿಸಿ ಸಚಿವ ಶಿವರಾಜ ತಂಗಡಗಿ ಯಶಸ್ಸಿಗೆ ಶುಭ ಹಾರೈಸಿದ್ದಾರೆ.
ಇದೇ ಮೊದಲ ಬಾರಿಗೆ ಸುಮಾರು ೨೭ ರಾಜ್ಯಗಳ ೧೨ ನೂರಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸುತ್ತಿರುವದು ದೊಡ್ಡ ಕಾಂiiಕ್ರಮವಾಗಿದೆ ಕ್ರೀಡಾಕೂಟ ಯಶಸ್ವಿಯಾಗಲಿ ಸಾಧ್ಯವಾದ ಅಗತ್ಯ ಸಹಕಾರ ನೀಡುವದಾಗಿ ಸಂಘಟಕರಿಗೆ ಭರವಸೆ ನೀಡಿದರು.
ಇದೇ ವೇಳೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕ್ರೀಡಾಕೂಟಕ್ಕೆ ಎಲ್ಲರೂ ಕೈಜೋಡಿಸಿ ರಾಜ್ಯದಲ್ಲಿ ಮಾರ್ಷಿಯಲ್ ಆರ್ಟ್ಸ (ಸ್ವಯಂ ರಕ್ಷಣಾ ಕಲೆ) ಗೆ ಉತ್ತೇಜನ ನೀಡುವ ಜೊತೆಗೆ ಇಲ್ಲಿನ ಮಕ್ಕಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಶ್ರಮಿಸೋಣ ಎಂದರು.
ಸಂಸದ ಹಾಗೂ ರಾಜ್ಯ ಪೆಂಕಾಕ್ ಸಿಲತ್ ಕಾರ್ಯಾಧ್ಯಕ್ಷರಾದ ಕೆ. ರಾಜಶೇಖರ ಹಿಟ್ನಾಳ ಇಡೀ ಕಾರ್ಯಕ್ರಮವನ್ನು ಮುತುವರ್ಜಿವಹಿಸಿಕೊಂಡು ನಡೆಸುತ್ತಿದ್ದು, ಕೊಪ್ಪಳವನ್ನು ದೇಶದಲ್ಲಿ ಹೆಸರು ಮಾಡುವಂತಹ ಕ್ರೀಡಾಕೂಟ ನಡೆಸುತ್ತಿದ್ದು, ಪ್ರತಿಯೊಬ್ಬರೂ ಇಲ್ಲಿ ಕ್ರೀಡೆ ಬೆಳೆಸಲು ಪ್ರೋತ್ಸಾಹ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಶ್ರೀನಿವಾಸ ಗುಪ್ತಾ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ರಡ್ಡಿ ಶ್ರೀನಿವಾಸ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮತ್ತು ರಾಜ್ಯ ಸಿಲತ್ ಜಂಟಿ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ರಾಷ್ಟ್ರೀಯ ಪೆಂಕಾಕ್ ಸಿಲತ್ ಫೆಡರೇಷನ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಟೈಲರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಬದಾಮಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!