ಗೃಹಲಕ್ಷ್ಮೀ ಯೋಜನೆಗೆ ಸಿ.ಎಂ ಚಾಲನೆ ಪುರಸಭೆಯಿಂದ ವೀಕ್ಷಣೆಗೆ ಅವಕಾಶ
ಕುಷ್ಟಗಿ.ಅ.29; ರಾಜ್ಯ ಸರ್ಕಾರದ ವಿಶೇಷ ಗೃಹ ಲಕ್ಷ್ಮೀ ಯೋಜನೆ ಅ.30 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನಲ್ಲಿ ಸಿ.ಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡುತ್ತಿದ್ದು, ಪಟ್ಟಣದಲ್ಲಿ ವಿವಿಧಡೆ ಟಿ.ವಿ ಹಾಗೂ ಎಲ್.ಇ.ಡಿ ಪರದೆಯಲ್ಲಿ ಕಾರ್ಯಕ್ರಮ ವಿಕ್ಷೇಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುವ ಉದ್ದೇಶದಿಂದ ಕುಟುಂಬದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ನೀಡುವ ಗೃಹ ಲಕ್ಷ್ಮೀ ಯೋಜನೆ ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಈಗಾಗಲೇ ಈ ಯೋಜನೆ ಅಡಿಯಲ್ಲಿ ನೊಂದಣಿ ಮಾಡಿದ ಫಲಾನುಭವಿಗಳಿಗೆ ನಾಳೆ ತಲಾ 2000 ರೂಪಾಯಿ ಹಣವನ್ನು ಖಾತೆಗೆ ಜಮಾ ಮಾಡುವ ಗೃಹಲಕ್ಷ್ಮೀ ಯೋಜನೆಯನ್ನು ಅ.30 ರಂದು ಮೈಸೂರಿನಲ್ಲಿ ಸಿ.ಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡುತ್ತಿದ್ದು, ಸದರಿ ಕಾರ್ಯಕ್ರಮವನ್ನು ಪಟ್ಟಣದ ಸಾರ್ವಜನಿಕರು ವೀಕ್ಷಣೆ ಮಾಡಲು ಪುರಸಭೆ ಕಾರ್ಯಾಲಯ, ಬುತ್ತಿ ಬಸವೇಶ್ವರ ದೇವಸ್ಥಾನ ಹತ್ತಿರ, ಉರ್ದು ಶಾಲೆ ಹತ್ತಿರ, ದ್ಯಾಮವ್ವನ ಪಾದಗಟ್ಟೆ ಹತ್ತಿರ, ಸಂತೆ ಮೈದಾನದಲ್ಲಿ ಎಲ್.ಎ.ಡಿ ಪರದೆ ಹಾಗೂ ಟಿ.ವಿ ಯನ್ನು ಇಡಲಾಗಿದೆ ಕಾರಣ ಪಟ್ಟಣದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೃಹಲಕ್ಷ್ಮೀ ಯೋಜನೆ ಚಾಲನಾ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ತಿಳಿಸಿದ್ದಾರೆ.
Comments are closed.