ಹಾರ ಹಂಚಿಕೊಂಡ ಸಚಿವ ತಂಗಡಗಿ
ಕೊಪ್ಪಳ : ಇಂದು ಗವಿಮಠಕ್ಕೆ ಭೇಟಿ ನೀಡಿದ್ದ ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಗವಿಸಿದ್ದೇಶ್ವರ ಸ್ವಾಮೀಜಿ ಯವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಚಿವ ಶಿವರಾಜ್ ತಂಗಡಗಿಯವರಿಗೆ ಸ್ವಾಮಿಜಿ ಶಾಲು ಹಾಕಿ ಹಾರವಹಾಕಿದರು. ತಕ್ಷಣವೇ ಸಚಿವ ತಂಗಡಗಿ ತಮಗೆ ಹಾಕಿದ್ದ ಹಾರವನ್ನು ಶಾಸಕ ರಾಘವೇಂದ್ರ ಹಿಟ್ನಾಳರ ಜೊತೆ ಹಂಚಿಕೊಂಡರು. ಇದನ್ನು ಕಂಡ ಅಭಿಮಾನಿಗಳು, ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು.
Comments are closed.