ಡಾ. .ಶರಣಬಸಪ್ಪ ಕೋಲ್ಕಾರ್‌ರ ಕೃತಿ ಬಿಡುಗಡೆ

Get real time updates directly on you device, subscribe now.


ಕೊಪ್ಪಳ, ಆ,೩;- ಮೇಘನಾ ಪ್ರಕಾಶನ ಕೊಪ್ಪಳ ಹಾಗೂ ಕೊಪಣನಾಡು ಸಂಶೋಧನಾ ಸಂಸ್ಥೆ, ಗಂಗಾವತಿಇವರ ಸಂಯುಕ್ತಾಶ್ರಯದಲ್ಲಿಗಂಗಾವತಿಯ ಸಂಶೋಧಕರು ಹಾಗೂ ಪ್ರಾಚಾರ್ಯರಾದಡಾ.ಶರಣಬಸಪ್ಪಕೋಲ್ಕಾರ್‌ಇವರ ‘ಕೃಷ್ಣದೇವರಾಯನ ಸಮಾಧಿ ಹಾಗೂ ಕೆಂಪೇಗೌಡ ಬಂಧನದಲ್ಲಿ ಸೆರೆಮನೆ’ ಎಂಬ ಸಂಶೋಧನಾಕಿರುಹೊತ್ತಿಗೆ ಆ,೩ ರವಿವಾರರಂದುಕೊಪ್ಪಳ ನಗರದಕುಷ್ಟಗಿ ರಸ್ತೆಯಲ್ಲಿರುವಸಪ್ತಗಿರಿ ಸಹ್ಯಾದ್ರಿ ನಿವಾಸದಲ್ಲಿಬಿಡುಗಡೆಗೊಳ್ಳಲಿದೆ. ಕೃತಿಯನ್ನು ನಿವೃತ್ತ ಪ್ರಾಧ್ಯಪಕರಾದಡಾ.ಬಸವರಾಜ ಪೂಜಾರ್‌ಇವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ಹಾಗೂ ಗ್ರಂಥದಾನಿಗಳಾದ ಡಾ.ಮಹಾಂತೇಶ ಮಲ್ಲನಗೌಡರ್ ವಹಿಸಿಕೊಳ್ಳಲಿದ್ದಾರೆ.ಪ್ರಾಧ್ಯಾಪಕರಾದ ಪ್ರೊ.ಶರಣಬಸಪ್ಪ ಬಿಯಲೆಯವರುಕೃತಿಯಕುರಿತು ಮಾತನಾಡಲಿದ್ದಾರೆ.ಕೃತಿಯ ಲೇಖಕರಾದಡಾ.ಶರಣಬಸಪ್ಪಕೋಲ್ಕಾರ್ ಹಾಗೂ ಉಪನ್ಯಾಸಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಉಪಸ್ಥಿತಿಯಾಗಲಿದ್ದಾರೆಂದು ಮೇಘನಾ ಪ್ರಕಾಶನದ ಪರವಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!