ಮಾನವ ಕಳ್ಳ ಸಾಗಾಣಿಕೆ ವಿಶ್ವ ವಿರೋಧಿ ದಿನ

Get real time updates directly on you device, subscribe now.

ಕೊಪ್ಪಳ ನಗರದ ರೈಲ್ವೆ ನಿಲ್ದಾಣದಲ್ಲಿ ,ರೈಲ್ವೆ ಪೊಲೀಸ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ಪಂದನ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಮಾಡಲಾಯಿತು.

ಸ್ಪಂದನ ಸಂಸ್ಥೆಯ ಸಂಯೋಜಕರು ಶಂಕರ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪಂದನ ಸಂಸ್ಥೆಯು ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದೆ ಮುಖ್ಯವಾಗಿ ಮಕ್ಕಳ ಕಾನೂನಿನ ನ್ಯಾಯದ ಪ್ರವೇಶ ಮಾಡಲು ಕಾನೂನು ಹಸ್ತಕ್ಷೇಪದ ಮೂಲಕ ಕೆಲಸ ಮಾಡುತ್ತಿದ್ದು ಬಾಲ್ಯ ವಿವಾಹ ,ಬಾಲ ಕಾರ್ಮಿಕರು ,ಮತ್ತು ಮಾನವ ಕಳ್ಳಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.ಹಾಗಾಗಿ ಇಂದು ನಾವು ಆರ್ ಪಿ ಎಪ್ ಹಾಗೂ ಜಿ ಆರ್ ಪಿ ಸಹಕಾರ ಸಹಕಾರದ ಮೂಲಕ ಚಾಲನೆ ನೀಡಲು ಈ ದಿನದಂದು ಈ ಒಂದು ಈ ಅಪಹರಣಗಳನ್ನು ನಿಲ್ಲಿಸಲು ಕೆಲಸಮಾಡಬೇಕಾಗಿದೆ ಅದಕ್ಕಾಗಿ ಇಂದು ಸೇರಿದ್ದೆವೆ  ಮುಂದಿನ ದಿನಗಳಲ್ಲಿ  ನಮಗೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆ ಇಲ್ಲಿ ಮಾಡುವ ಉದ್ದೇಶ .ಸರಕು ಸಾಗಾಣಿಕೆ ಆಗುವ ಸ್ಥಳ ರೈಲ್ವೆ ತಾಣ ಆದ್ದರಿಂದ ಸಂಚರಿಸುವ ಸಂದರ್ಭದಲ್ಲಿ ಯಾವುದಾದರೂ ಅನುಮಾನಾಸ್ಪದ ವ್ಯಕ್ತಿ ಅಥವಾ ಮಕ್ಕಳು ಮಹಿಳೆಯರು ಇವರನ್ಕಂನು ಅಪಹರಣ ಮಾಡುವ ಯಾವುದಾದರೂ ಒಂದು ದೃಶ್ಯ ನಿಮಗೆ ಕಂಡುಬಂದಲ್ಲಿ  ನಮ್ಮ ಸಹಕಾರ ಎಲ್ಲಾ ಇಲಾಖೆಯ ಸಹಕಾರದೊಂದಿಗೆ ಮಾನವ ಕಳ್ಳ ಸಾಗಾಣಿಕೆ ತಡೆಯೋಣ ಎಂದು ಹೇಳಿದರು ನಂತರ ಪೊಸ್ರರ್ ಗಳನ್ನು ASi ಆದ ಉಮೇಶ ಅವರು ಮತ್ತು  ಆರ್ ಪ ಎಪ್ ತಂಡ ಬಿಡುಗಡೆ ಮಾಡಿತು. ಕಾರ್ಯಕ್ರಮದ ಉದ್ದೇಶಿಸಿ ಆರ್ ಪಿ ಎಪ್ ಅಧಿಕಾರಿಗಳು ಮಾತನಾಡಿ ಮಾನವ ಕಳ್ಳ ಸಾಗಾಣಿಕೆ ಕುರಿತು ನಾವು ಕೂಡ ಮಹಿಳೆಯರು ಮಕ್ಕಳು ಯಾರೆ ಇರಬಹುದು ನಮ್ಮ ಗಮನಕ್ಕೆ ಬಂದಾಗ ನಾವು ಅದನ್ನು ತಡೆಹಿಡಿದು ಸಂಬಂಧಿಸಿದ ಇಲಾಖೆ ಮೂಲಕ ಶಿಪಾರಸ್ಸು ಮಾಡುತ್ತೆವೆ ನಾವಷ್ಟೆ ಅಲ್ಲ ಜನರ ಸಹಕಾರ ಮತ್ತು ಸ್ಪಂದನದಂತಹ ಸಂಸ್ಥೆಗಳ ಸಹಕಾರ ನಮಗೆ ಬೇಕು ಮುಂದಿನ ದಿನಗಳಲ್ಲಿ ಎಲ್ಲರ ಬೆಂಬಲದೊಂದಿಗೆ ಕೆಲಸ ಮಾಡೋಣ ಎಂದು ಹೇಳಿದರು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕರಾದ ಶರಣಪ್ಪ ಸಿಂಗನಾಳ ಮಾತನಾಡಿ ನಿಮ್ಮ ಗಮನಕ್ಕೆ ಅನುಮಾನಾಸ್ಪದ ವ್ಯಕ್ತಿ ಗಳು ಅಥವಾ ಮಕ್ಕಳ ಅಪಹರಣ ಮಾಡಿರಬಹುದೆಂಬ ಮಾಹಿತಿ ಇದ್ದಲ್ಲಿ 1098 ಕ್ಕೆ ಕರೆ ಮಾಡಿ ಅಥವಾ ನಮಗೆ ತಿಳಿಸಿ ಮಾನವ ಕಳ್ಳ ಸಾಗಾಣಿಕೆ ಅನ್ನುವಂತದ್ದು ಬೇಗ ನಮ್ಲಗೆ ತಿಳಿಯದೆ ಇರಬಹುದು ಆದರೆ ಒಬ್ಬ ವ್ಯಕ್ತಿಯನ್ನು ರಕ್ಷಣೆ ಮಾಡಬೇಕಂದಾಗ ನಾವು ಅದನ್ನು ಅನುಮಾನಾಸ್ಪದ ಇದೆ ಅಂದಾಗ ಮಾಹಿತಿ ಪಡೆದು ತಕ್ಷಣವೇ ಸಂಬಂಧಿಸಿದ ಇಲಾಖೆಗೆ ತಿಳಿಸುವಂತಹ ಕೆಲಸ ಆಗಬೇಕು ಎಂದು ತಿಳಿಸಿದರು  ಶಿವಲೀಲಾ ಅವರು ಕಾರ್ಯಕ್ರಮದ  ವಂದನಾರ್ಪಣೆಯನ್ನು ಮಾಡಿದರು.ಈ ಒಂದು ಸಂದರ್ಭದಲ್ಲಿ ಆರ್ ಪಿ ಎಪ್ ಸಿಬ್ಬಂದಿ ಯಾದ ಶ್ರೀ ಮತಿ ವಿಜಯಲಕ್ಷ್ಮಿ, ಹಾಗೂ ಸರಕು ಸಾಗಾಣೆ ಹಾಗೂ ಬುಕಿಂಗ್ ಕೌಂಟರ್ ಸಿಬ್ಬಂದಿ ವರ್ಗದವರಾದ ಮಂಜುನಾಥ ಬಾಕಳೆ,ಎಕೆ ಬಸವರಾಜ ಹಾಗೂ ಎನ್ ಆರ್ ಎಲ್ ಎಮ್ ಸಿಬ್ಬಂದಿ ಭಾಗವಹಿಸಿ ಯಶಸ್ವಿಗೋಳಿಸಿದರು.

Get real time updates directly on you device, subscribe now.

Comments are closed.

error: Content is protected !!