ಗಾಂಜಾ,ಮಾದಕ ವಸ್ತುಗಳ ಅಕ್ರಮ ಮಾರಾಟ ತಡೆಯಲು ಸಲೀಂ ಅಳವಂಡಿ ಮನವಿ
ಕೊಪ್ಪಳ : ಜಿಲ್ಲೆಯಾದ್ಯಂತ ಹಿಂದುಳಿದ ಪ್ರದೇಶಗಳು,ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಗಾಂಜಾ, ಅಕ್ರಮ ಮದ್ಯ, ಮತ್ತು ಮಾದಕ ವಸ್ತುಗಳ ಅಕ್ರಮವಾಗಿ ಮಾರಾಟ ಹಾಗೂ ಸೇವನೆಯಿಂದಾಗಿ ಅನೇಕ ಯುವಜನರ ಭವಿಷ್ಯ ಹಾಳಾಗುತ್ತಿದ್ದು,
ಹಲವು ಯುವಕರು ಮಾದಕ ವ್ಯಸನಕ್ಕೆ ತುತ್ತಾದ ಕಾರಣ ಅಪರಾಧ ಪ್ರಕರಣಗಳು,ಮನೆಗಳಲ್ಲಿ ಕಲಹ ಹೆಚ್ಚಾಗಿ ಸಾಮಾಜಿಕ ಹಾಗೂ ಆರ್ಥಿಕವಾಗಿ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಹಾಗಾಗಿ ಗಾಂಜಾ,ಮಾದಕ ವಸ್ತುಗಳ ಅಕ್ರಮವಾಗಿ ಮಾರಾಟ ಮತ್ತು ಸೇವನೆಯ ವ್ಯಸನವನ್ನು ಗಂಭೀರವಾಗಿ ಪರಿಗಣಿಸಿ, ಇದನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಪೊಲೀಸ್’ಅಧಿಕಾರಿಗಳ ತಂಡವನ್ನು ರಚಿಸಿ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಜೆಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭೇಟಿಯಾಗಿ ಕಾಂಗ್ರೆಸ್ ಯುವ ಮುಖಂಡ ಸಲೀಂ ಅಳವಂಡಿ ಮನವಿ ಸಲ್ಲಿಸಿದ್ದಾರೆ.

ಮನವಿ ಮೂಲಕ ಕೋರಲಾಯಿತು.
SP Koppal District
Comments are closed.