ಅಗಸ್ಟ್ 15ರೊಳಗೆ ಒಳ ಮೀಸಲಾತಿ ಜಾರಿಗೆ ಕಾರಜೋಳ ಒತ್ತಾಯ
ಜಾರಿ ಮಾಡದಿದ್ದರೆ ಉಗ್ರಹೋರಾಟ: ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ
ಕೊಪ್ಪಳ

ಒಳ ಮೀಸಲಾತಿ ಜಾರಿ ಮಾಡಲು ನಾವು ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ, ಅಗಸ್ಟ್ 1 ರಿಂದ ನಾವು ಉಗ್ರ ಹೋರಾಟ ಮಾಡುತ್ತೇವೆ, ಅಗಸ್ಟ್ 15 ಚಳುವಳಿ ಮಾಡುತ್ತೇವೆ, ಸಿದ್ದರಾಮಯ್ಯ ಸರ್ಕಾರವನ್ನು ಆಡಳಿತ ಮಾಡಲಿಕ್ಕೆ ಬಿಡುವುದಿಲ್ಲ, ಇಡೀ ರಾಜ್ಯದಲ್ಲಿ ನಮ್ಮ ಜನಾಂಗ ಕಾದು ಕುಳಿತಿದೆ ಎಂದು ಸಂಸದ ಗೋವಿಂದ ಕಾರಜೋಳ್ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು
ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತ್ನಾಡಿ,
ಈ ದೇಶದಲ್ಲಿ ದಲಿತರು ಮಲಮೂತ್ರವನ್ನು ತಲೆಯ ಮೇಲೆ ಹೊತ್ತು ಹೋಗುವ ಪದ್ದತಿ ಇತ್ತು, ಗಟಾರ್ ಸ್ವಚ್ಚಮಾಡುವ ಪದ್ಧತಿ ಇತ್ತು, ಕಸಗೂಡಿಸುವ, ಚಪ್ಪಲಿ ಹೊಲಿಯುವ ಕೆಲಸ ಅಸ್ಪೃಶರು ಮಾಡುತ್ತಿದ್ದರು, ಇವರನ್ನು ಮೇಲೆತ್ತುವ ಕೆಲಸ ನಮ್ಮ ಪೂರ್ವಜರು ಸಂವಿಧಾನ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ ಸಂಸದ ಗೋವಿಂದ ಕಾರಜೋಳ ಹೇಳಿದರು
ಅಸ್ಪೃಶ್ಯ ಜನಾಂಗಕ್ಕೆ ಉದ್ಯೋಗ, ಶಿಕ್ಷಣ, ರಾಜಕೀಯ ಮೀಸಲಾತಿ ಕೊಡುವ ಕೆಲಸ ಸಂವಿಧಾನದಲ್ಲಿ ಕೊಟ್ಟಿದೆ
1950ರಲ್ಲಿ ಎಸ್ಸಿ ಮೀಸಲಾತಿ ಮಾಡಲಾಯಿತು, ಎಸ್ಸಿ ಸಮುದಾಯದಲ್ಲಿ ಆರು ಜಾತಿ, ಎಸ್ಟಿ ಸಮುದಾಯದಲ್ಲಿ ಆರು ಜಾತಿ ಇದ್ದವು, ಇಂದು ಎಸ್ಸಿ ಸಮುದಾಯದಲ್ಲಿ 101 ಜಾತಿ ಇವೆ, ಎಸ್ಟಿ ಸಮುದಾಯದಲ್ಲಿ 56 ಜಾತಿಗಳಿವೆ
ಹೀಗಾಗಿ ಕೆಲವು ಸಮುದಾಯಗಳನ್ನು ಪೈಪೋಟಿ ಮಾಡುವ ಶಕ್ತಿ ಅಸ್ಪಶ್ಯರಿಗೆ ಇಲ್ಲದಂತ್ತಾಗಿದೆ ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯಲ್ಲೇ ಒಳಮೀಸಲಾತಿ ಕೊಡಬೇಕೆಂದು ಕಳೆದ 30 ವರ್ಷಗಳಿಂದ ಅಸ್ಪೃಶ್ಯ ಜಾತಿಗಳು ಮಾಡುತ್ತಿವೆ. ಈ ಹಿನ್ನೆಲೆ ಸದಾಶಿವ ಆಯೋಗ ರಚನೆ ಆಗಿದೆ, ವರದಿ ಕೂಡ ಕೊಡಲಾಗಿದೆ, ಸಿದ್ದರಾಮಯ್ಯ ಅವರು 2013-18ರವರೆಗೆ ಸಿಎಂ ಇದ್ರು ಒಳ ಮೀಸಲಾತಿ ಜಾರಿ ಮಾಡಲಿಲ್ಲ. 2023ರ ಚುನಾವಣೆಯಲ್ಲಿ ಇದೇ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಸೇರಿಸಿದ್ರು, ಗೆದ್ದ ಕೂಡಲೇ ಅಧಿವೇಶನ ಹಾಗೂ ಮೊದಲ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಮಾಡ್ತಿವಿ ಎಂದ್ರು, ಎರಡು ವರ್ಷ ಆಯ್ತು ಒಳಮೀಸಲಾರಿ ಜಾರಿ ಮಾಡಿಲ್ಲ ಅಸ್ಪೃಶ್ಯರಿಗೆ ನ್ಯಾಯ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಇದ್ದಾಗ ಬಸವರಾಜ್ ಬೊಮ್ಮಾಯಿ ಅವರು ಒಂದು ಕಮಿಟಿ ಮಾಡಿದ್ರು, ಮಾದವಸ್ವಾಮಿ ನೇತೃತ್ವದಲ್ಲಿ ಮಾಡಿದರು ಒಳಮೀಸಲಾತಿ ಜಾರಿಗಾಗಿ ಆ ಕಮಿಟಿಯಲ್ಲಿ ನಾನು ಕೂಡ ಇದ್ದೆ, ಆ ಕಮಿಟಿಯಲ್ಲಿ ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಯಿತು.. ಶೇ 15 ರಷ್ಟು ಇದ್ದ ಮೀಸಲಾತಿಯನ್ನು ಶೇ 17ರಷ್ಟು ಮಾಡಲಾಯಿತು. ಮಾದಿಗರಿಗೆ ಶೇ 6, ಛಲವಾದಿಗಳಿಗೆ ಶೇ 5ಕ್ಕಿಂತ ಹೆಚ್ಚು, ಲಂಬಾಣಿ, ಕೊರವಂಜಿ ಅವರಿಗೆ ಶೇ 4ಕ್ಕಿಂತ ಹೆಚ್ಚು, ಅಲೆಮಾರಿಗಳಿಗೆ ಶೇ 1 ರಷ್ಟು ನೀಡಲಾಯಿತು ಅದರ ವರದಿ ಕೇಂದ್ರಕ್ಕೆ ನೀಡಲಾಗಿತ್ತು ಎಂದರು
ಮೋದಿಜಿ ಅವರು ಹೈದ್ರಾಬಾದ್ ನಲ್ಲಿ ಮಾದಿಗ ಸಮಾವೇಶ ಮಾಡಿ, ನಾನು ನಿಮ್ಮಲ್ಲಿ ಒಬ್ಬ ದಲಿತ ಎಂದು ಕೊಟ್ಟ ಮಾತಿನಂತೆ ಒಳ ಮೀಸಲಾತಿ ಜಾರಿ ಮಾಡಿದರು, ಆದರೆ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೆ ಮೋಸ ಮಾಡಿದೆ, ಸುಪ್ರೀಂಕೋರ್ಟ್ ಆದೇಶ ಇದ್ರು ಹೊಸ ಸಮಿತಿ ರಚನೆ ಮಾಡಿದೆ, ಇದು ಕಾನೂನು ಬಾಹೀರ, ಇದುವರೆಗೆ ವರದಿ ಇಲ್ಲ ಒಳ ಮೀಸಲಾತಿ ಜಾರಿ ಇಲ್ಲ, ಹಾಗಾಗಿ ನಾವು ಒತ್ತಾಯ ಮಾಡುತ್ತೇವೆ ಜಾರಿ ಮಾಡದಿದ್ದರೆ ಅಗಸ್ಟ್ 1 ರಿಂದ ನಮ್ಮ ಹೋರಾಟ ಉಗ್ರ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಒಂದ ನಿರ್ಣಯಕ್ಕೆ ಬರಬೇಕು ಆಗಸ್ಟ್ 15ರೊಳಗೆ ಒಳಮೀಸಲಾತಿ ಜಾರಿ ಮಾಡಬೇಕು, ಅಗಸ್ಟ್ 11ರಿಂದ ಅಧಿವೇಶನ ಆರಂಭವಾಗುತ್ತೆ, ಇದೇ ಅಧಿವೇಶನದಲ್ಲಿ ಜಾರಿ ಮಾಡಬೇಕು ಡೇಟಾ ಇಲ್ಲ ಎಂದು ಕುಂಟು ನೆಪ ಹೇಳಬೇಡಿ, ಸದಾಶಿವ ಆಯೋಗದ ವರದಿ ಅತ್ಯಂತ ಶಾಸನಬದ್ಧ ವರದಿಯಾಗಿದೆ ಇದನ್ನು ಜಾರಿ ಮಾಡಬೇಕು ಎಂದು ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಸವರಾಜ ದಡೆಸುಗೂರ್, ಹನುಮಂತಪ್ಪ ಬಳ್ಳಾರಿ, ಬಲ್ಲಾಹುನಿಸಿ ರಾಮಣ್ಣ, ಗಣೇಶ್ ಹೊರತಟ್ನಾಳ, ಪರಶುರಾಮ ಗಂಗಾವತಿ, ಮಹಾಲಕ್ಷ್ಮಿ ಕಂದಾರಿ ಇತರರು ಇದ್ದರು.
Comments are closed.