ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವ

Get real time updates directly on you device, subscribe now.

ಕೊಪ್ಪಳ: ತಾಲೂಕಿನ ಅಳವಂಡಿ ಗ್ರಾಮದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಭಾವಚಿತ್ರ ಮೆರವಣಿಗೆ ಹಾಗೂ ವಿವಿಧ ವಾದ್ಯಗೋಷ್ಠಿಗಳೊಂದಿಗೆ, ಕುಂಭ ಕಳಸಗಳೊಂದಿಗೆ ಅದ್ದೂರಿಯಾಗಿ ಜಯಂತೋತ್ಸವವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಮುಖಂಡರಾದ ಬಸವರಾಜ ಸಿ.ವಿ ಚಂದ್ರಶೇಖರ ಭಾಗಿಯಾಗಿ ನಂತರ 

ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಜೀವನವೇ ಒಂದು ಸಂದೇಶ. ಅವರ ಆದರ್ಶಗಳು, ದೈವಭಕ್ತಿ ಮತ್ತು ಪವಾಡಗಳ ಕುರಿತು ನಮಗೆಲ್ಲ ತಿಳಿದಿದೆ. ಜಾನಪದ ಹಾಡುಗಳಲ್ಲಿ ಮತ್ತು ಸಂತ ಶಿಶುನಾಳ ಷರೀಫರ ಕೃತಿಗಳಲ್ಲಿ ಅವರ ಬಗ್ಗೆ ಉಲ್ಲೇಖಗಳಿವೆ

ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಮಹಾಸಾದ್ವಿ ಅವರಾಗಿದ್ದು ಮುಂಬರುವ ಪೀಳಿಗೆಗೆ ಮಲ್ಲಮ್ಮನ ಜೀವನದ ಕುರಿತು ತಿಳಿಸಬೇಕಿದೆ ಮತ್ತು ಅವರಂತೆ ನಾವುಗಳು ಸಮಾಜಕ್ಕಾಗಿ ಬದುಕಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಪ್ರದೀಪಗೌಡ್ರ ಮಾಲಿಪಾಟೀಲ್, ಯಂಕರೆಡ್ಡಿ ಕಲಾದಗಿ, ಶಂಕ್ರಪ್ಪ ಕಲಾದಗಿ, ಬಸವರೆಡ್ದೆಪ್ಪ ಹಳ್ಳಿಕೇರಿ, ದೇವಪ್ಪ ಕಟ್ಟಿಮನಿ, ಸುರೇಶ ದಾಸರೆಡ್ಡಿ, ಭೀಮರೆಡ್ಡಿ ಗದ್ದಿಕೇರಿ, ವಸಂತರೆಡ್ಡಿ ನಾಗರಳ್ಳಿ, ಈಶಪ್ಪ ಜೋಳದ, ಗವಿಸಿದ್ದರೆಡ್ಡಿ ಗದ್ದಿಕೇರಿ, ಉಮೇಶಗೌಡ ಮಾಲಿಪಾಟೀಲ್, ಸತೀಶ ಜಾನಗಾರ ಸೇರಿದಂತೆ ಮಹಿಳೆಯರು  ಮಕ್ಕಳು ಸಮಾಜದ ಗುರು ಹಿರಿಯರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: