ಹಿರೇಕಾಸನಕಂಡಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಶೆ.100ರಷ್ಟು

0

Get real time updates directly on you device, subscribe now.

: ಕೊಪ್ಪಳ ತಾಲ್ಲೂಕಿನ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿರೇಕಾಸನಕಂಡಿ(609) ಶಾಲೆಯ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಅತ್ಯುತ್ತಮವಾಗಿ ಬಂದಿರುತ್ತದ್ದು, ಒಟ್ಟು 49 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶಾಲೆಯ ಒಟ್ಟು ಫಲಿತಾಂಶ ಶೆ.100 ಕ್ಕೆ 100 ಬಂದಿರುತ್ತದೆ.

ಫಲಿತಾಂಶ ವಿವರ: 39 ವಿದ್ಯಾರ್ಥಿಗಳು ಅತ್ಯುತ್ತಮ (Distinction) ಮತ್ತು 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ. ವಿಜಯಲಕ್ಷ್ಮಿ ಎಸ್.ಎಚ್ ಎಂಬ ವಿದ್ಯಾರ್ಥಿನಿ 625ಕ್ಕೆ 619 ಅಂಕಗಳನ್ನು ಪಡೆದು ಶೆ.99.04 ಅಂಕ ಪಡೆಯುವುದರ ಮೂಲಕ ವಸತಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕೀರ್ತಿಯನ್ನು ತಂದಿರುತ್ತಾಳೆ. ಲಕ್ಷ್ಮೀ ವಾಲಿಕಾರ ಎಂಬ ವಿದ್ಯಾರ್ಥಿನಿ 625ಕ್ಕೆ 616 ಅಂಕಗಳನ್ನು ಪಡೆದು ಶೆ.98.56 ದ್ವಿತೀಯ ಸ್ಥಾನ ಪಡೆದರೆ. ಅಕ್ಷತಾ ಜಿ.ಕೆ ಹಾಗೂ ವಿಕಾಸ ಎಮ್.ಕೆ. ಈ ಇಬ್ಬರೂ ವಿದ್ಯಾರ್ಥಿಗಳು 625ಕ್ಕೆ 615 ಅಂಕಗಳನ್ನು ಪಡೆದು ಶೆ.98.4 ತೃತೀಯ ಸ್ಥಾನ ಪಡೆದಿರುತ್ತಾರೆ.

ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡುವುದರ ಮೂಲಕ ಶಾಲೆಗೆ ಹಾಗೂ ಇಲಾಖೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ನಾಗಮಣಿ ಹಾಗೂ ವಸತಿ ಶಾಲೆಯ ಪ್ರಾಚಾರ್ಯರಾದ ಮಂಜುನಾಥ ಬೇಳೂರು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!