ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ : ಎಸ್ ಡಿ ಪಿ ಐ ವತಿಯಿಂದ, ಪ್ರತಿಭಟನೆ, ಕ್ಯಾಂಡಲ್ ಮಾರ್ಚ್ , ಶ್ರದ್ದಾಂಜಲಿ
ಕೊಪ್ಪಳ : ನಗರದ ಸರ್ಕಾರಿ ಬಾಲಕರ ಕಾಲೇಜ್ ನಿಂದ ಅಶೋಕ್ ಸರ್ಕಲ್ ವರೆಗೆ ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು.
ನಿನ್ನೆ ನಡೆದ ಕಾಶ್ಮೀರ ರಾಜ್ಯದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ ಸುಮಾರು 27 ರಿಂದ 28 ಜನ ಮೃತಪಟ್ಟಿರುತ್ತಾರೆ, ಕರ್ನಾಟಕ ರಾಜ್ಯದಿಂದ 3 ರಿಂದ 4 ಜನ ಮೃತಪಟ್ಟಿದ್ದು ಖಂಡಿಸಿ ಸೋಶಿಯಲ್ ಡೆಮೊಗ್ರಟಿ ಪಾರ್ಟಿ ಆಫ್ ಇಂಡಿಯಾ ಎಸ್ ಡಿ ಪಿ ಐ ವತಿಯಿಂದ, ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು,
ಈ ಸಂಧರ್ಭದಲ್ಲಿ sdpi ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ, ಸೈ ಸಲೀಮ್ ಖಾದ್ರಿ ಮಾತನಾಡಿದರು.
ದೇಶವಿರೋಧಿ ಚಟುವಟಿಕೆಗಳನ್ನು ಮಾಡುವವರನ್ನು ದೇಶದ ಜನತೆ ಸಹಿಸುವುದಿಲ್ಲ. ಅಮಾಯಕರ ರಕ್ತಪಾತ ಮಾಡುವ ಭಯೋತ್ಪಾದಕರ ವಿರುದ್ಧ ನಾವು ಎಲ್ಲರೂ ಒಂದಾಗಬೇಕು. ದೇಶದ ಶಾಂತಿಯನ್ನು ಕದಡುವ, ಕಿಡಿಗೇಡಿತನ ಮತ್ತು ಅಶಾಂತಿ ಹರಡುವವರ ವಿರುದ್ಧ ತೀವ್ರವಾಗಿ ವಿರೋಧ ವ್ಯಕ್ತಪಡಿಸಬೇಕು.
ಧರ್ಮ, ಜಾತಿ, ಭಾಷೆ ಎನ್ನುವ ಎಲ್ಲ ಭೇದಗಳನ್ನು ಮರೆತು, ದೇಶದ ಏಕತೆ ಮತ್ತು ಸಹೋದರತೆಯನ್ನು ಕಾಪಾಡಬೇಕು. ಹಿಂಸೆಯನ್ನು ಪ್ರಚೋದಿಸುವ ಮತ್ತು ದೇಶದ ವಿರುದ್ಧ ವಿಷ ಹರಡುವವರ ವಿರುದ್ಧ ದೇಶದ ಪ್ರತಿಯೊಬ್ಬನೂ ಏಕಮತದಿಂದ ನಿಲ್ಲಬೇಕು. ಎಂದು ಹೇಳಿದರು.
ಮತ್ತು ಜಿಲ್ಲಾ ಜನರಲ್ ಸೆಕ್ರೆಟರಿಗಳಾದ ರಾಜೀವ್ ಉರ್ ರಹೇಮಾನ್ ಜಿಲ್ಲಾ ಸದಸ್ಯರಾದ ನಿಜಾಮುದ್ದೀನ್ ಮೊಳೆಕೋಪ್ಪ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಗಳಾದ ಮೊಹಮ್ಮದ್ ಸಾಧಿಕ್, ಸಹಕಾರದರ್ಶಿಗಳಾದ ಅರ್ಶದ್ ಶೈಖ್. ಉಪಾಧ್ಯಕ್ಷರಾದ ಫಾರೂಕ್ ಅತ್ತಾರ್, ರಿಜ್ವಾನ್ ಪೀರ್ಜಾದೆ, ಹಾಗೂ ಎಲ್ಲಾ ಕಾರ್ಯಕರ್ತರು ಮತ್ತು ಬೆಂಬಲಿಗರು ಕ್ಯಾಂಡಲ್ ಮಾರ್ಚ್ ಶ್ರದ್ದಾಂಜಲಿನಲ್ಲಿ ಪಾಲ್ಗೊಂಡಿದ್ದರು
Comments are closed.