ವೀಲಿಂಗ್ ಹುಚ್ಚಾಟ: ಪ್ರಕರಣ ದಾಖಲು, ಯುವಕನ ಬಂಧನ

0

Get real time updates directly on you device, subscribe now.

ಕೊಪ್ಪಳ  : ವೀಲಿಂಗ್  ಹುಚ್ಚಾಟ  ಕೊಪ್ಪಳಕ್ಕೂ ಕಾಲಿಟ್ಟಿದೆ . ಈ ಹಿಂದೆ ಬೇರೆ ಬೇರೆ ನಗರಗಳಲ್ಲಿ ಕಂಡು ಬರುತ್ತಿದ್ದ ಇಂತಹ ಪ್ರಕರಣಗಳು ಈಗ ಕೊಪ್ಪಳ ಜಿಲ್ಲೆಯಲ್ಲಿಯೂ ಕಂಡು ಬರುತ್ತಿವೆ.

ನಿನ್ನೆ ಸಂಜೆ ನಗರದ ಬೈಪಾಸ್ ಹೈವೇಯಲ್ಲಿ ಯುವಕರಿಬ್ಬರು ವೀಲಿಂಗ್ ಉಚ್ಚಾಟದಲ್ಲಿ ತೊಡಗಿಕೊಂಡಿದ್ದು ಅದನ್ನು ಗಮನಿಸಿದ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ. ವೀಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿಯೇ ಸ್ಥಳಕ್ಕೆ ಪೊಲೀಸರ ಆಗಮಿಸಿದ್ದಾರೆ. ಪೊಲೀಸರನ್ನು ಕಂಡ ಮುಂಭದಿಸವಾರ ಓಡಿ ಹೋಗಿದ್ದಾನೆ. ಹಿಂಬದಿಸವಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊಪ್ಪಳದ ಮಿರಾಜ್ ಹಾಗೂ ಹೊಸಪೇಟೆಯ ಜಾಫರ್ ವೀಲಿಂಗ್ ಮಾಡುತ್ತಿದ್ದವರು. ಇವರ ವಿರುದ್ಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬೈಪಾಸ್ ರಸ್ತೆಯಲ್ಲಿ ಹಾಗೂ ಹೈವೇಗಳಲ್ಲಿ  ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಈ ರೀತಿಯ ವೀಲಿಂಗ್ ಸಹ ಕಾರನ  ಎಂದು ಹೇಳಲಾಗುತ್ತದೆ ಅಪಘಾತ ಪ್ರಕರಣಗಳಲ್ಲಿ ಹೆಚ್ಚಾಗಿ ಯುವಕರೇ ಗಾಯಗೊಳ್ಳುವುದು ಅಷ್ಟೇ ಅಲ್ಲದೆ ಸಾವನಪ್ಪತ್ತಿದ್ದಾರೆ.   ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾಲಕರು ಸಹ ಗಮನಹರಿಸಬೇಕಾಗಿದೆ.

 

Get real time updates directly on you device, subscribe now.

Leave A Reply

Your email address will not be published.

error: Content is protected !!