ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

Get real time updates directly on you device, subscribe now.

 

ಪರಮಪೂಜ್ಯ ಲಿಂ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರ ಪುಣ್ಯ ಸ್ಮರಣೋತ್ಸವನಿಮಿತ್ಯ  ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ಶ್ರೀ ಗವಿಸಿದ್ಧೇಶ್ವರ ಜಾತ್ರೆ ೨೦೨೫ರ ಅಂಗವಾಗಿ ಮಹಾವಿರ್ ಲಿಂಬ್ ಸೆಂಟರ್ ಹುಬ್ಬಳ್ಳಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳ ಇವರ ಸಹಯೋಗದ ’ಸಕಲ ಚೇತನ’ ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೃತಕ ಅಂಗಾಂಗ ವಿತರಣಾ ಕಾರ್ಯಕ್ರಮ ಅಯೋಜಿಸಲಾಗಿದೆ.

ಕೊಪ್ಪಳ- ನಗರದ ಸಂಸ್ಥಾನ ಶ್ರೀಗವಿಮಠದ ಪರಮಪೂಜ್ಯ ಲಿಂ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರ ನೇ ಪುಣ್ಯಸ್ಮರಣೋತ್ಸವದ ನಿಮಿತ್ಯ ಜಗದ್ಗುರು ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಂii ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ೨೩.೦೩.೨೦೨೫ರಂದು ರವಿವಾರಬೆಳಿಗ್ಗೆ ೦೯:೦೦ ಗಂಟೆಯಿಂದ ಮದ್ಯಾಹ್ನ ೩ :೦೦ ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ಶ್ರೀ ಗವಿಸಿದ್ಧೇಶ್ವರ ಜಾತ್ರೆ ೨೦೨೫ರ ಅಂಗವಾಗಿ ಮಹಾವಿರ್ ಲಿಂಬ್ ಸೆಂಟರ್ ಹುಬ್ಬಳ್ಳಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳ ಇವರ ಸಹಯೋಗದಲ್ಲಿ ನಡೆದ ’ಸಕಲ ಚೇತನ’ ಜಾಥಾ ಮತ್ತು ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೃತಕ ಅಂಗಾಂಗ ವಿತರಣಾ ಕಾರ್ಯಕ್ರಮ ಅಯೋಜಿಸಲಾಗಿದೆ. ಕಾರಣ ಆಯ್ಕೆಯಾದವರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾಶಿಬಿರದಲ್ಲಿ ಮಧುಮೇಹ, ಮನೋರೋಗಗಳು, ಆಮ್ಲಪಿತ್ತ, ಉಸಿರಾಟದ ತೊಂದರೆ, ಜೀರ್ಣಾಂಗ ಸಮಸ್ಯೆ, ಕೆಮ್ಮು, ಕೂದಲು ಮತ್ತು ಸೌಂದರ್ಯ ಸಂಬಂಧಿ, ಮಸ್ಕುಲರ್ ಡಿಸ್ಟ್ರೋಪಿ, ಎಂಡೋಕ್ರೇನ್ ಡಿಸಾರ್ಡರ್, ಕಾಮಲಾ, ಮೂತ್ರಪಿಂಡ ಸಂಬಂಧಿ ರೋಗಗಳು(ಕಿಡ್ನಿ)
ಸಂಧಿರೋಗ, ನರರೋಗ, ಸಯಾಟಿಕಾ, ಪಾಶ್ಚವಾಯು, ಬೆನ್ನುಹುರಿ ಸಮಸ್ಯೆ, ಮಕ್ಕಳಲ್ಲಿ ಕುಂಠಿತ ಬೆಳವಣಿಗೆ, ಬುದ್ಧಿಮಾಂಧ್ಯತೆ, ಅಸ್ತಮಾ, ಅಲರ್ಜಿ ಲಕ್ಷ, ಅಪಸ್ಮಾರ, ಮೂಲವ್ಯಾಧಿ, ಮೂತ್ರದ ಹರಳುಗಳು (ಕಿಡ್ನಿ ಸ್ಟೋನ್), ಮೂತ್ರನಾಳದ ಸೋಂಕು, ಪಪುರುಷ ಗ್ರಂಥಿ ಗೃದ್ದೀ, ದೂರದೃಷ್ಠಿ ಸಮೀಪದೃಷ್ಠಿ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಕಣ್ಣಿನ ದುರ್ಮಾಂಸ ಇತರ ಕಣ್ಣಿನ ರೋಗಗಳು, ಕಿವಿ ನೋವು, ಕಿವಿ ಸೋರುವುದು, ಕಿವುಡುತನ, ಮೂಗಿನ ತೊಂದರೆ, ಅಲರ್ಜಿ ಹಾಗೂ ಸೈನಸ್ ತೊಂದರೆಗಳು, ತಲೆನೋವು, ಅರ್ಧತಲೆ ನೋವು (ಮೈಗ್ರೆನ್), ಬಾಯಿ ಹುಣ್ಣು ಮತ್ತು ಗಂಟಲು ರೋಗಗಳು, ಬಿಳಿಸೆರಗು ಬಂಜೆತನ, ಗರ್ಭಿಣಿಯರಿಗೆ ಗರ್ಭ ಸಂಸ್ಕಾರ, ಮಟ್ಟಿನ ಸಮಸ್ಯೆ, ಸ್ತನರೋಗ, ಗರ್ಭಕೋಶ ಸಮಸ್ಯೆ, ಚರ್ಮದ ಅಲರ್ಜಿ, ಔಷದ ಅಲರ್ಜಿ, ಸಪ್ಸುತ್ತು, ಕೀಟಗಳ ಕಡಿತ, ಜೇಡ ಕಡಿತ, ಬೊಜ್ಜು ರೋಗ vಮತ್ತ ಆಮ್ಲ ಪಿತ್ತ,. ಹಾಗೆಯೇ ಅಗತ್ಯ ಇರುವವರಿಗೆ ಉಚಿತವಾಗಿ ರಕ್ತ ಮತ್ತು ಮೂತ್ರ ಪರಿಕ್ಷೆ ಮಾಡಲಾಗುವುದು ಎಂದು
ಇತ್ಯಾದಿ ರೋಗಗಳಿಗೆ ತಜ್ಞ ಆಯುರ್ವೇದ ವೈದ್ಯರುಗಳಿಂದ ಆರೋಗ್ಯ ತಪಾಸಣೆ, ಸಲಹೆ, ಮಾರ್ಗದರ್ಶನ ಹಾಗೂ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬಹುದು ಎಂದು ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೬೩೨೦೦೨೮೦೮, ೯೭೪೦೯೧೨೪೫೭, ೮೨೧೭೩೯೫೨೪೨ ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.

 

Get real time updates directly on you device, subscribe now.

Comments are closed.

error: Content is protected !!