ಕೆಯುಡಬ್ಲ್ಯೂಜೆ ಪ್ರಜಾಪ್ರಗತಿ ದತ್ತಿ ಪ್ರಶಸ್ತಿ ಎಚ್.ಎನ್.ಮಲ್ಲೇಶ್ ಆಯ್ಕೆ
ಬೆಂಗಳೂರು:
ತುಮಕೂರಿನಲ್ಲಿ ಜರುಗಿದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಘೋಷಿಸಿದಂತೆ ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದಲ್ಲಿ ಒಂದು ಲಕ್ಷ ರೂ. ದತ್ತಿನಿಧಿ ಸ್ಥಾಪಿಸಿದ್ದಾರೆ.
ಈ ದತ್ತಿನಿಧಿಯ ಪ್ರಥಮ ಪ್ರಶಸ್ತಿಗೆ ಸೇವಾ ಹಿರಿತನ, ಪತ್ರಿಕಾರಂಗದ ಸಾಧನೆಯನ್ನು ಗುರುತಿಸಿ ತುಮಕೂರಿನ ಹಿರಿಯ ಪತ್ರಕರ್ತರು, ಸತ್ಯದರ್ಶಿನಿ ಉಪಸಂಪಾದಕ ಎಚ್. ಎನ್. ಮಲ್ಲೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಾ.9ಕ್ಕೆ ಕೊಪ್ಪಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಗೆ ಭಾಜನರಾದ ಎಚ್. ಎನ್. ಮಲ್ಲೇಶ್ ಹಾಗೂ ಪ್ರಜಾಪ್ರಗತಿ ದತ್ತಿ ಪ್ರಶಸ್ತಿ ಸ್ಥಾಪಿಸಿದ ಹಿರಿಯ ಸಂಪಾದಕ ಎಸ್. ನಾಗಣ್ಣ ಅವರಿಗೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ.