ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಬಜೆಟ್ ನಲ್ಲಿ ನಿರೀಕ್ಷೆಯೇ ಇಲ್ಲ

Get real time updates directly on you device, subscribe now.

ಕೊಪ್ಪಳ: ಮಾರ್ಚ್ 7 ರಂದು ಮಂಡನೆಯಾಗಲಿರುವ ಬಜೆಟ್ ನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಏನಾದರೂ ಸಿಗಬಹುದು ಎಂಬ ನಿರೀಕ್ಷೆಯನ್ನು ಜೆ ಡಿ (ಎಸ್) ಕೈ ಬಿಟ್ಟಿರುವುದಾಗಿ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹೇಳಿದ್ದಾರೆ.
15 ವರ್ಷಗಳ ಹಿಂದೆ ಕೊಪ್ಪಳ ಹೇಗಿತ್ತು ಈಗಲೂ ಹಾಗೆ ಇದೆ.‌ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಇನ್ನೂ ಕುಂಠಿತವಾಗಿದೆ. ಕಳೆದ ಬಜೆಟ್ ನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮೀಸಲಾಗಿಟ್ಟ ಅನುದಾನ ಎಲ್ಲಿ ಹೋಯಿತು? ಹೇಗೆ ಖರ್ಚಾಯಿತು? ಖರ್ಚಾಗಿದ್ದರೆ ಅಭಿವೃದ್ಧಿ ಏಕೆ ಕಣ್ಣಿಗೆ ಕಾಣುತ್ತಿಲ್ಲ? ಎಂದು ಕ್ಷೇತ್ರಾದ್ಯಂತ ಜನರು ಕೇಳುತ್ತಿದ್ದಾರೆ.
ಮೂಲಭೂತ ಸೌಕರ್ಯ ಒದಗಿಸಿ ಎಂದು ಕೇಳುವ ಜನರ ಮೇಲೆ ಪ್ರಕರಣ ದಾಖಲಿಸುವ ವ್ಯವಸ್ಥೆಯಿಂದ ಏನನ್ನು ನಿರೀಕ್ಷಿಸಬಹುದು? ಹೊಸ ಯೋಜನೆ ಬಿಟ್ಟುಬಿಡಿ. ಕೊಡುವ ಅನುದಾನವನ್ನಾದರೂ ಸದ್ಬಳಕೆ ಮಾಡಿಕೊಳ್ಳಲಿ. ಜನರ ಸಂಕಷ್ಟಗಳನ್ನು ಬಗೆಹರಿಸಲಿ. ಪಕ್ಕದ ಯಲಬುರ್ಗಾ ಕ್ಷೇತ್ರ ತ್ವರಿತ ತರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೆ ಕೊಪ್ಪಳ ಕ್ಷೇತ್ರ ಅಷ್ಟೇ ತ್ವರಿತವಾಗಿ ಅಭಿವೃದ್ಧಿಯಲ್ಲಿ ಹಿಂದೆ ಸಾಗುತ್ತಿದೆ. ಇದು ಏಕೆ ಎಂಬುದನ್ನು ಅಧಿಕಾರದಲ್ಲಿದ್ದವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಪತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಒಬ್ಬರು ಮಂತ್ರಿಯಾಗಿದ್ದಾರೆ.‌ ಇನ್ನೊಬ್ಬರು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರಾಗಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯರು ಕಾಂಗ್ರೆಸ್ ಪಕ್ಷದವರು.‌ ಆದರೂ ಏಕೆ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿಲ್ಲ ಎಂಬುದನ್ನು ಅವರೇ ಎಂದು ತಿಳಿಸಿದ್ದಾರೆ.
ಪ್ರತಿ ಸಲದಂತೆ ಕಾಟಾಚಾರಕ್ಕೆ ಎಂಬಂತೆ ಒಂದಷ್ಟು ಅನುದಾನ ನೀಡಿ ಕೊಪ್ಪಳವನ್ನು ನಿರ್ಲಕ್ಷಿಸುವ ಕಾರ್ಯ ಮುಂದುವರೆಯುವುದು ಶತಸಿದ್ಧ.‌ ಈ ಜಡತ್ವದ ವಿರುದ್ಧ ಜನರು ಹೋರಾಡಬೇಕಿದೆ ಎಂದು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!