ಎಂಎಸ್ ಪಿಎಲ್ ಕಾರ್ಖಾನೆ ಸ್ಥಾಪನೆಗೆ, ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ವಿರೋಧ

Get real time updates directly on you device, subscribe now.


ಕೊಪ್ಪಳ : ಎಂಎಸ್ ಪಿಎಲ್ ಉಕ್ಕು ಕಾರ್ಖಾನೆ ಸ್ಥಾಪನೆಗೆ, ಮುದ್ದಾಬಳ್ಳಿ-ಗೊಂಡಬಾಳ ಮಧ್ಯ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುದ್ದಾಬಳ್ಳಿ ಹಾಗೂ ಗೊಂಡಬಾಳ ಗ್ರಾಮಸ್ಥರ ಹೋರಾಟ ಸಮಿತಿ ವಿರೋಧಿಸಿದೆ ಎಂದು ಸಂಚಾಲಕ ಡಾ.ಮಂಜುನಾಥ್ ಸಜ್ಜನ್ ಹೇಳಿದರು.
ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಮುದ್ದಾಬಳ್ಳಿ ಗ್ರಾಮದ ಸಮೀಪದಲ್ಲಿ ಕಳೆದ ಕೆಲವು ತಿಂಗಳ ಹಿಂದಷ್ಟೇ ಯುಇಎಂ ಅಗ್ರಿ ಎಸ್ಟ್ರಾಲ್ ಲಿಮಿಟೆಡ್ ಎನ್ನುವ ಸಕ್ಕರೆ ಕಾರ್ಖಾನೆ ಆರಂಭಿಸಲು ಉದ್ದೇಶಿಸಿದ್ದು ಈ ಕಾರ್ಖಾನೆ ಆರಂಭಕ್ಕೂ ಮೊದಲು ರೈತರ ಜಮೀನು ಖರೀದಿ ಮಾಡಿದೆ, ಸರಕಾರದಿಂದ ಅನುಮತಿ ಪಡೆದಿದೆ, ಕೆಲವು ತಿಂಗಳ ಹಿಂದೆ ಮುದ್ದಗೊಳ್ಳಿ ಗ್ರಾಮದ ಸಮೀಪದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಾರ್ವಜನಿಕರ ಅಹವಾಲು ಸಭೆ ನಡೆಸಿ ಆ ಸಭೆಯಲ್ಲಿ ಗೊಂಡಬಾಳ ಮುದ್ದಗೊಳ್ಳಿ ಗ್ರಾಮಸ್ಥರು ಈ ಕಾರ್ಖಾನೆ ಬೇಡ ಎಂದು ವಿರೋಧಿಸಿದ್ದಾರೆ, ಅಲ್ಲದೆ ಕೈಗಾರಿಕೆ ಅವರು ಮುದ್ದಾಬಳ್ಳಿ ಗ್ರಾಮಕ್ಕೆ ಹೊಂದಿಕೊಂಡು ಭೂಮಿ ಖರೀದಿ ಮಾಡಿದ್ದಾರೆ, ಕಾರ್ಖಾನೆಯು ಮುದ್ದಾಬಳ್ಳಿ ಗ್ರಾಮಕ್ಕೆ ಸಮೀಪದಲ್ಲಿದ್ದು ಇದು ಗ್ರಾಮಸ್ಥರಿಗೆ ಆತಂಕ ತರಿಸಿದ್ದು ಈ ಕಾರ್ಖಾನೆ ಆರಂಭವಾದರೆ ಮುಂದಿನ ದಿನಗಳಲ್ಲಿ ಕೆಟ್ಟ ವಾಸನೆ ಜೊತೆ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಎದುರಾಗಲಿವೆ, ಮುದ್ದಾಬಳ್ಳಿ ಗೊಂಡಬಾಳ ಗ್ರಾಮಗಳು ತುಂಗಭದ್ರ ಹಿನ್ನೀರಿನ ಪ್ರದೇಶದ ವ್ಯಾಪ್ತಿಯಲ್ಲಿದ್ದು ಪರಿಸರ ಉತ್ತಮವಾಗಿದೆ, ಈ ಕಾರ್ಖಾನೆಗಳು ಆರಂಭವಾಗುವುದರಿಂದ ಇಡೀ ಪರಿಸರ ಹಾಳಾಗಿ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟಾಗಲಿದೆ, ಈ ಕಾರ್ಖಾನೆ ಬೇಡವೇ ಬೇಡ ಎಂದರು ಸಹ ಆ ಕಾರ್ಖಾನೆ ಮುದ್ದಾಬಳ್ಳಿ ಸಮೀಪದಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ನಾನಾ ರೀತಿಯಿಂದ ಪ್ರಯತ್ನಿಸುತ್ತಿದ್ದು, ಈ ಕಾರ್ಖಾನೆ ಸ್ಥಾಪನೆಗೆ ಗ್ರಾಮಸ್ಥರ ಪ್ರಬಲ ವಿರೋಧವಿದೆ ಜೊತೆಗೆ ಎಂಎಸ್ ಪಿಎಲ್ ಉಕ್ಕು ಕಾರ್ಖಾನೆ ಆರಂಭಕ್ಕೂ ನಮ್ಮ ವಿರೋಧವಿದ್ದು, ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಗೊಂಡಬಾಳ ಬಳಿಯ ಸಕ್ಕರೆ ಕಾರ್ಖಾನೆ ಆರಂಭಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ, ಫೆಬ್ರವರಿ 24ರಂದು ನಡೆಯುವ ಕೊಪ್ಪಳ ಬಂದ್ ನಲ್ಲಿ ನಾವು ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಗವಿಸಿದ್ದನಗೌಡ ಪಾಟೀಲ್, ರಾಜೀವ್ ರೆಡ್ಡಿ ಮಾದಿನೂರ್, ದತ್ತು ಕಮ್ಮಾರ್, ಮಂಜುನಾಥ್ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!