ದೇಸಿ ತಳಿ ಸಂರಕ್ಷಕ, ಸಾವಯವ ಕೃಷಿಕ ಹಂಚಾಳಪ್ಪ ಹಿರೇಮನಿ ನಿಧನ

Get real time updates directly on you device, subscribe now.


ಕೊಪ್ಪಳ, ಫೆ. 16, 2025:
ದೇಸಿ ತಳಿ ಸಂರಕ್ಷಕ, ಸಾವಯವ ಕೃಷಿಕ ಹಂಚಾಳಪ್ಪ ಹಿರೇಮನಿ (38) ಯಲಮಗೇರಿಯಲ್ಲಿ ಶನಿವಾರ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಅವರ ಅಂತ್ಯಕ್ರಿಯೆ ಭಾನುವಾರ ಸ್ವಗ್ರಾಮದಲ್ಲಿ ನೆರವೇರಿತು.

ಸಾವಯವ ಕೃಷಿ ಹಾಗೂ ದೇಸಿ ತಳಿಗಳನ್ನು ಸಂರಕ್ಷಿಸುವ ಪ್ರಯತ್ನವನ್ನು ಒಂದೂವರೆ ದಶಕದ ಹಿಂದೆಯೇ ಅವರು ಶುರು ಮಾಡಿದ್ದರು. ಟೊಮ್ಯಾಟೊ, ಬದನೆ ಇತರ ತರಕಾರಿಗಳ ಜವಾರಿ ತಳಿಗಳನ್ನು ಬೆಳೆದು, ಬಿತ್ತನೆ ಬೀಜಗಳನ್ನು ಆಸಕ್ತ ರೈತರಿಗೆ ವಿತರಿಸುತ್ತಿದ್ದರು. ಇರಕಲ್ಲಗಡ ಭಾಗದಲ್ಲಿ ಬೆಳೆಯುವ ಮಳೆಯಾಶ್ರಿತ ‘ದುಗ್ಗ’ ಹಾಗೂ ‘ಬಿಳಿಚಿಗ’ ತಳಿ ಭತ್ತಕ್ಕೆ ಮಾರುಕಟ್ಟೆ ಕಲ್ಪಿಸಲು ಹಂಚಾಳಪ್ಪ ಶ್ರಮಿಸಿದ್ದರು.

ಶೋಕ: ಕೊಪ್ಪಳ ಜಿಲ್ಲೆಯಲ್ಲಿ ಸಾಂಪ್ರದಾಯಿಕ ತಳಿಗಳ ಉತ್ತೇಜನಕ್ಕೆ ಹಂಚಾಳಪ್ಪ ಅವರ ಕೊಡುಗೆ ಗಮನಾರ್ಹ. ಅವರ ನಿಧನದಿಂದ ದೇಸಿ ತಳಿ ಸಂರಕ್ಷಕಕನ್ನು ಕಳೆದುಕೊಂಡಂತಾಗಿದೆ ಎಂದು ‘ಮಣ್ಣಿನೊಂದಿಗೆ ಮಾತುಕತೆ’ ತಂಡ ಶೋಕ ವ್ಯಕ್ತಪಡಿಸಿದೆ.

Get real time updates directly on you device, subscribe now.

Comments are closed.

error: Content is protected !!