ಶ್ರೀ ಸಂತ ಸೇವಾಲಾಲ್ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ
): ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಗದೀಶ್, ಆಹಾರ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಬಿರಾದರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿರಿ ಸುಧಾಕರ ಅಪ್ಪಣ ಮಾನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ತಹಶಿಲ್ದಾರ ವಿನಾಯಕ್ ಗೋಡಬೊಲೆ ಹಾಗೂ ಜಿಲ್ಲಾಧಿಗಳ ಕಛೇರಿಯ ಶಿರಸ್ತೆದಾರ ಜಗದೀಶ್, ರೇಷ್ಮೆ ಇಲಾಖೆಯ ರಾಜಶೇಖರ ಮತ್ತು ಬಂಜಾರ ಸಮಾಜದ ಮುಖಂಡರಾದ ಯಮನೂರಪ್ಪ, ಪರಸಪ್ಪ, ಹನುಮಂತಪ್ಪ ಮಡ್ಡಿ, ಯಮನಪ್ಪ, ಸೋಮ್ಲಾ ನಾಯ್ಕ್, ರಾಜು ನಾಯ್ಕ್, ಎಕ್ಸಸ್ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ರವಿ ನಾಯ್ಕ್ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Comments are closed.