ಜ್ಞಾನ ಬಂಧು ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Get real time updates directly on you device, subscribe now.

ಭಾಗ್ಯನಗರಆಗಸ್ಟ್ಟ್ ೧೫: ರಾಷ್ಟ್ರೀಯ ಹಬ್ಬಗಳು ಶಾಲಾ ಆವರಣದಲ್ಲಿ ಶಿಸ್ತು ಹಾಗೂ ಹೊಸ ಸೊಬಗನ್ನು ಮೂಡಿಸುತ್ತವೆಎಂದು ಸಂಸ್ಥೆಯಅಧ್ಯಕ್ಷರಾದದಾನಪ್ಪಕವಲೂರರವರುಹೇಳಿದರು.
ಅವರು ೭೭ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತಧ್ವಜಾರೋಹಣವನ್ನ ನೆರವೇರಿಸಿ ಮಾತನಾಡಿಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳನ್ನು ತಿಳಿಸಿ ಸಾಧನೆಗೆ ಶ್ರಮವಹಿಸಿ ದುಡಿಯುವುದು ಮುಖ್ಯ ಹಾಗೂ ಸ್ವಾತಂತ್ರಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಿ ಗೌರವಿಸಬೇಕುಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿಗಳಾದ ಎ.ಎಮ್. ಮದರಿಯವರುಮಾತನಾಡಿ ನಮ್ಮದೇಶ ಹಾಗೂ ದೇಶಭಕ್ತರಕುರಿತು ಸಂಕ್ಷೀಪ್ತವಾಗಿ ಮಾತನಾಡಿ ಶಾಲೆಯಲ್ಲಿಅಧ್ಯಯನ ಮಾಡುತ್ತಿರುವಕುಮಾರಿ ಸಿಂಚನಾ ಕೊಪ್ಪಶೆಟ್ಟರ್ ವಿದ್ಯಾರ್ಥಿನಿಯುಸ್ವಾತಂತ್ರ ಹೋರಾಟಗಾರರಕುಟುಂಬದ ಸದಸ್ಯೆ ಎಂಬ ಹೆಮ್ಮೆಯ ವಿಷಯವನ್ನುಸ್ಮರಿಸಿದರು.
ಕಾರ್ಯಕ್ರಮದಲ್ಲಿಶಾಲಾ ಮಕ್ಕಳು ಹಾಗೂ ಶಿಕ್ಷಕರು ದಿನಾಚರಣೆಯಕುರಿತು ಮಾತನಾಡಿದರು ನಂತರದಲ್ಲಿಜ್ಞಾನ ಬಂಧು ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥಜಿ.ಎಸ್. ಮಾತನಾಡಿ ಮಕ್ಕಳಿಗೆ ದೇಶದಕುರಿತಾಗಿಅಚ್ಚರಿಯಸಂಗತಿಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿನಿವೃತ್ತಉಪನ್ಯಾಸಕರಾದಡಿ.ಎಮ್. ಬಡಿಗೇರ ಹಾಗೂ ಉಪ ಪ್ರಾಂಶುಪಾಲರಾದಜ್ಯೋತಿಎಸ್.ಎಸ್. ಹಾಗೂ ಶಿಕ್ಷಕ ಸಿಬ್ಬಂದಿ ಹಾಜರಿದ್ದರು. ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರವನ್ನು ಶಾಲೆಯ ೧೦ ನೇ ತರಗತಿಯ ವಿದ್ಯಾರ್ಥಿನಿಯರಾದ ಪ್ರತಿಭಾ ಮತ್ತುಆಯೇಷಾ ನಿರೂಪಿಸಿದರು ಹಾಗೂ ತೇಜಶ್ವಿನಿ ವಂದಿಸಿದಳು.

Get real time updates directly on you device, subscribe now.

Comments are closed.

error: Content is protected !!