ನಗರದಲ್ಲಿ ಪ್ಲಾಸ್ಟಿಕ್ ಮತ್ತು ರಟ್ಟಿನ ಚಹಾ ಕಪ್ ಗಳನ್ನು ನಿಷೇಧಿಸಲು ಆಗ್ರಹ

0

Get real time updates directly on you device, subscribe now.

.

   ಕೊಪ್ಪಳ : ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಶಾ ಪಲ್ಟನ್ ಅವರಿಗೆ ನಗರ ಸಭೆಯಲ್ಲಿ ನಡೆಯುವ ಎಲ್ಲಾ ಸಭೆಗಳಲ್ಲಿ ಬಳಕೆಯಲ್ಲಿರುವ ಪ್ಲಾಸ್ಟಿಕ್ ಹಾಗೂ ರಟ್ಟಿನ ಚಹಾ ಕಪ್ ಗಳನ್ನು ನಿಷೇಧಿಸುವಂತೆ ಸೋಮವಾರ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್, ಯುವ ನಾಯಕ ಅಸಿಫ್ ಖಾನ್ ಹಣಗಿ ಹಾಗೂ ಇಮತ್ಯಾಝ್ ಎಮ್,ಪಲ್ಟನ್ ಮುಂತಾದವರು ಕೋರಿದರು.
       ಕೊಪ್ಪಳ ನಗರ ಸಭೆಯಲ್ಲಿ ನಡೆಯುವ ತುರ್ತು ಸಭೆಗಳು, ಸಾಮಾನ್ಯ ಸಭೆಗಳು, ಅಧಿಕಾರಿಗಳ ಸಭೆಗಳು, ಶಾಸಕರ, ಸಚಿವರುಗಳ ಪರಿಶೀಲನಾ ಸಭೆಗಳಲ್ಲಿ ಬಳಸುತ್ತಾ ಬಂದಿರುವುದು ವಿಪರ್ಯಾಸ, ಇದರಿಂದ ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಪತ್ರಿಕೆಗಳಲ್ಲಿ ಬಂದಿದೆ, ಪ್ಲಾಸ್ಟಿಕ್ ಮತ್ತು ರಟ್ಟಿನ ಚಹಾ ಕಪ್ ಗಳಲ್ಲಿ ಚಹಾ ಸೇವಿಸುವುದರಿಂದ ಕ್ಯಾನ್ಸರ್ ನಂತಹ ಆರೋಗ್ಯಕ್ಕೆ ತುಂಬಾ ಹಾನಿ ಮಾಡುವ ಅಂಶಗಳಿವೆ ಎಂದು ಗಮನ ಸೆಳೆಯಲಾಯಿತು,
   ಮಾನವನ ಆರೋಗ್ಯದ ದೃಷ್ಟಿಯಿಂದ ನಗರ ಸಭೆಯ ಸಭೆಗಳಲ್ಲಿ ಅಧ್ಯಕ್ಷರಿಗೆ,ಉಪಾಧ್ಯಕ್ಷರಿಗೆ, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ,ಸದಸ್ಯರಿಗೆ,ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ,ಸಾರ್ವಜನಿಕರಿಗೆ ನೀಡುತ್ತಿರುವುದು ಮತ್ತು ನಗರದ ಬಹುತೇಕ ಹೋಟೆಲುಗಳಲ್ಲಿ ಬಳಕೆಯಲ್ಲಿರುವ ಪ್ಲಾಸ್ಟಿಕ್ ಹಾಗೂ ರಟ್ಟಿನ ಚಹಾ ಕಪ್ ಗಳನ್ನು ನಿಷೇಧಿಸುವ ಮೂಲಕ ಮಾದರಿ ನಗರ ಸಭೆ ಎಂಬ ಕೀರ್ತಿಗೆ ಪಾತ್ರರಾಗಲಿ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಶಾ ಪಲ್ಟನ್ ಅವರಿಗೆ ಮನವರಿಕೆ ಮಾಡಿದರು.
    ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಶಾ ಪಲ್ಟನ್ ನಿಮ್ಮ ಮನವಿಯಂತೆ ಪ್ಲಾಸ್ಟಿಕ್ ಹಾಗೂ ರಟ್ಟಿನ ಚಹಾ ಕಪ್ ಗಳನ್ನು ನಗರ ಸಭೆಯ ಸಭೆಗಳಲ್ಲಿ ಮತ್ತು ನಗರದ ಹೋಟೆಲ್ ಗಳಲ್ಲಿ ನಿಷೇಧಿಸಲು ನಮ್ಮ ನಗರ ಸಭೆ ಅಧಿಕಾರಿಗಳ ಗಮನಕ್ಕೆ ತಂದು ಜಾರಿ ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!